ಡಾಲಿ ಧನಂಜಯ ನಟನೆಯ ಗುರುದೇವ್ ಹೊಯ್ಸಳ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ.
ಧನಂಜಯ ಅಭಿನಯದ 25ನೇ ಸಿನೆಮಾ ಹೊಯ್ಸಳ ಆಗಿದೆ. ಈ ಚಿತ್ರದಲ್ಲಿ ಡಾಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಮಾಡಿರದ ರೀತಿಯ ಪಾತ್ರ ಗುರುದೇವ್ ಹೊಯ್ಸಳ ಆಗಿ ಡಾಲಿ ಧನಂಜಯ್ ತೆರೆ ಮೇಲೆ ಅಬ್ಬರಿಸಿದ್ದಾರೆ.
ಈಗಾಗಲೇ ಹೊಯ್ಸಳ ಸಿನೆಮಾದ ಹಾಡುಗಳು, ಟ್ರೈಲರ್ ಬಿಡುಗಡೆಯಾಗಿದ್ದು ಸದ್ದು ಮಾಡಿದೆ. ನಿರೀಕ್ಷೆ ಹೆಚ್ಚಿಸಿರುವ ಹೊಯ್ಸಳ ಸಿನೆಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುವ ನಿರೀಕ್ಷೆ ಇದೆ.
ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಯೋಗಿ. ಜಿ. ರಾಜ್ ಹಾಗೂ ಕಾರ್ತಿಕ್ ಗೌಡ ಅವರು ‘ಗುರುದೇವ್ ಹೊಯ್ಸಳ’ ಚಿತ್ರ ನಿರ್ಮಿಸಿದ್ದಾರೆ.
ನಿರ್ದೇಶಕ ವಿಜಯ್. ಎನ್ ರವರು ಆಕ್ಷನ್ ಕಟ್ ಹೇಳಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಗುರುದೇವ್ ಹೊಯ್ಸಳನಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
___

Be the first to comment