ಪ್ರಮೋಷನ್ ವೀಡಿಯೋಗಳ ಮೂಲಕನೇ ಅಟ್ರಾಕ್ಷನ್ ಕ್ರಿಯೆಟ್ ಮಾಡಿದ ಸಿನಿಮಾ. ಹೊಸಬರು ನಮಗ್ಯಾರು ಸಪೋರ್ಟ್ ಮಾಡ್ತಾರೆ ಅಂತ ಕೈ ಕಟ್ಟಿ ಕೂರದೆ, ಹೊಸತನದಿಂದಲೇ ಇಂಡಸ್ಟ್ರಿ ಮಂದಿಯನ್ನ ಸೆಳೆದ ಸಿನಿಮಾ. ಅಪ್ಪು, ರಕ್ಷಿತ್, ರಿಷಭ್, ರಮ್ಯಾ ಒಬ್ರಾ ಇಬ್ರಾ ಈ ಸಿನಿಮಾಗೆ ಸಪೋರ್ಟ್ ಮಾಡಿದ್ದು ಇವರೆಲ್ಲಾ ಪ್ರೋತ್ಸಾಹ ಕೊಟ್ಟಿದ್ದಾರೆ.
ಅಷ್ಟಕ್ಕೂ ಹಾಸ್ಟೆಲ್ ಹುಡುಗರ ಕಥೆ ಏನು?
ಇಡೀ ಸಿನಿಮಾ ಒಂದೇ ಹಾಸ್ಟೆಲ್ ನ ಒಳಗೆ ನಡೆಯುತ್ತೆ. ಒಂದೇ ರಾತ್ರಿಯಲ್ಲಿ ನಡೆಯುತ್ತೆ. ಸಿಂಪಲ್ ಕಥೆಗೆ ಮನರಂಜನೆಯ ಹೂರಣ ಬೆರೆಸಿ ಚಿತ್ರಕಥೆ ಬರೆದಿದ್ದಾರೆ ನಿತಿನ್.
ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ತುಂಬ ಸಾಕಷ್ಟು ಪಾತ್ರಗಳಿವೆ. ಒನ್‌ಲೈನರ್ ಪಂಚ್‌ಗಳು ಪ್ರೇಕ್ಷಕರಿಗೆ ಸಖತ್ ಮಜಾ ನೀಡುತ್ತದೆ.
ತುಂಗಾ ಬಾಯ್ಸ್ ಅನ್ನೋ ಹಾಸ್ಟೆಲ್ಲು
ಆ ಹಾಸ್ಟೆಲ್ ನಲ್ಲಿ ಐನೂರಕ್ಕೂ ಹೆಚ್ಚು ಹುಡುಗರು. ಒಬ್ಬೊಬ್ಬರದ್ದು ಒಂದೊಂಥರ ಕ್ಯಾರೆಕ್ಟರ್. ಚಿತ್ರ ವಿಚಿತ್ರ ಸ್ವಭಾವ, ಗುಣದ ಹುಡುಗರ ಆಟ ಹುಡುಗಾಟ, ತರಲೆ, ತಮಾಷೆ,ಕಿರಿಕ್ಕು ನಿಮಗೆ ಮನರಂಜನೆಯ ಕಿಕ್ ಕೊಡುತ್ತೆ.
ಎಂಟರ್ಟೈನ್ಮೆಂಟ್ ಎಂಟರ್ ಟೈನ್ಮೆಂಟ್ ಎಂಟರ್ ಟೈನ್ಮೆಂಟ್ ಅನ್ನೋ ಅಜೆಂಡಾ ಅಷ್ಟೇ ಅವ್ರದ್ದು. ಲಾಜಿಕ್ ನೋಡಬೇಡಿ ಸುಮ್ನೆ ನಕ್ಕು ಸುಸ್ತಾಗಿ ಎನ್ನುವಂತೆ ದೃಶ್ಯಗಳನ್ನು ಪೋಣಿಸಿದ್ದಾರೆ. ಹಾಗೆ ಆ ದೃಶ್ಯಗಳಿಗೆ ತಕ್ಕಂತೆ ಪಂಚಿಂಗ್ ಮಾತುಗಳು ನಿಮ್ಮನ್ನು ನಕ್ಕು ನಗಿಸಿ, ನಗೆ ಕಡೆಲಲ್ಲಿ ತೇಲಿಸುತ್ತವೆ.
ಇನ್ನು ಹಾಸ್ಟೆಲ್ ಹುಡುಗರಿಗೆ ರಿಷಬ್, ಪವನ್, ಶೈನ್ ಶೆಟ್ಟಿ ಸಾಥ್ ಕೊಟ್ಟಿದ್ದಾರೆ. ಇವರ ಪಾತ್ರಗಳು ನಿಮಗೆ ಪಾಯಸದಲ್ಲಿ ಸಿಕ್ಕ ಖರ್ಜೂರ ಗೋಡಂಬಿಯಂತೆ ಸ್ಪೆಷಲ್ಲು. ಇನ್ನೂ ರಮ್ಯಾ ಮೇಡಂ ಸ್ಪೆಷಲ್ ಎಂಟ್ರಿ ಥಿಯೇಟರ್ ನಲ್ಲಿ ನೋಡಿದ್ರೆ ಸ್ಪೆಷಲ್ ಆಗಿರುತ್ತೆ.
ಇಲ್ಲಿ ಅಜಿತ್ ಪಾತ್ರದಲ್ಲಿ ನಟಿಸಿರೋ ಪ್ರಜ್ವಲ್, ಚೇತನ್ ದುರ್ಗ,ಶ್ರೀವತ್ಸ, ತೇಜಸ್ ಹೀಗೆ ಹೊಸ ಕಲಾವಿದರ ದಂಡೇ ಇದೆ. ಎಲ್ಲರೂ ತಮಗೆ ಸಿಕ್ಕಿರೋ ಪಾತ್ರಗಳಿಗೆ ಅದ್ಭುತ ನ್ಯಾಯ ಒದಗಿಸಿದ್ದಾರೆ. ಎಲ್ಲರ ಕಾಮಿಡಿ ಟೈಮಿಂಗ್, ಡೈಲಾಗ್ ಡೆಲಿವರಿಯಂತೂ ಮಸ್ತ್ ಇದೆ. ಇನ್ನು ಇಡೀ ಸಿನಿಮಾದ ಜೀವಾಳ ಅಜನೀಶ್ ಲೋಕನಾಥ್ ಅವರ ಬ್ಯಾಗ್ರೌಂಡ್ ಮ್ಯೂಸಿಕ್ ಅಂದ್ರೂ ತಪ್ಪಾಗಲ್ಲ. ಹಾಗೆ ಕ್ಯಾಮೆರಾ ವರ್ಕ್ ಮಾಡಿರೋ ಅರವಿಂದ್ ಕಶ್ಯಪ್ ಸಹ ಅಷ್ಟೇ. ಸಿನಿಮಾವನ್ನ ಹೆಗಲ ಮೇಲೆ ಹೊತ್ತೊಯ್ದಿದ್ದಾರೆ.
ಒಟ್ಟಾರೆ ಈ ವರ್ಷ ಯಾವ ಸಿನಿಮಾನೂ ಹಿಟ್ ಆಗಿಲ್ಲ. ಕನ್ನಡ ಚಿತ್ರರಂಗದ ಕಥೆ ಅಷ್ಟೇ ಅನ್ನುವಾಗ ಇಡೀ ಇಂಡಸ್ಟ್ರಿ ಗೆ ಜೋಶ್ ತುಂಬಲು ಬಂದಂತೆ ಬಂದಿದ್ದಾರೆ ಹಾಸ್ಟೆಲ್ ಬಾಯ್ಸ್. ಥಿಯೇಟರ್ ನ ಮರೆತಿರೋ ಜನಾನ ಮತ್ತೆ ಥಿಯೇಟರ್ ಗೆ ಕರೆತರೋದ್ರಲ್ಲಿ ಡೌಟೇ ಇಲ್ಲ.
Be the first to comment