ಹೊಸಬರ ಗೋರಿಯಲ್ಲಿ ಪ್ರೀತಿ, ಸ್ನೇಹ

ಉತ್ತರ ಕರ್ನಾಟಕದ ಜನರಿಂದ ಕನ್ನಡ ಚಿತ್ರಗಳು ಹೆಚ್ಚು ದಿನ ಓಡುತ್ತಿದೆ ಎಂದು ಡಾ.ರಾಜ್‍ಕುಮಾರ್ ಹೇಳುತ್ತಿದ್ದರು. ಇದಕ್ಕೆ ಸಾಕ್ಷಿ ಎನ್ನುವಂತೆ ಇದೇ ಭಾಗದಿಂದ ಪ್ರಸಕ್ತ ನಿರ್ಮಾಪಕರು, ನಿರ್ದೇಶಕರು ಬರುತ್ತಿದ್ದಾರೆ. ಈ ಸಾಲಿಗೆ ‘ಗೋರಿ’ ಸಿನಿಮಾ ಸೇರಿಕೊಂಡಿದೆ. ಶೀರ್ಷಿಕೆ ಕೇಳಿದಾಕ್ಷಣ ಇದೊಂದು ಪ್ರೀತಿ ಕತೆ ಇರಬಹುದು ಅಂದುಕೊಳ್ಳಬಹುದು. ಜಾತಿ ಧರ್ಮ ಮೀರಿದ್ದು ಪ್ರೀತಿ-ಸ್ನೇಹ. ಅದರಂತೆ ಎರಡಕ್ಕೂ ಮೀರಿದ್ದು ಮಾನವಿಯತೆ. ಮನುಷ್ಯ ಯಾವುದೇ ಜಾತಿಯಾಗಿದ್ದರೂ ಪರವಾಗಿಲ್ಲ. ಆದರೆ ಮೊದಲು ನೀನು ಭಾರತೀಯ ಎಂಬುದನ್ನು ಮರೆಯಬೇಡ ಅಂತ ಸಂದೇಶದಲ್ಲಿ ಹೇಳಲಾಗಿದೆ. ಪ್ರೀತಿಗಿಂತ ಸ್ನೇಹ ಜಾಸ್ತಿ. ಇದರ ಮಧ್ಯೆ ಪ್ರೀತಿ ಬಂದಾಗ ಸ್ನೇಹ ಎಷ್ಟು ಗಟ್ಟಿಯಾಗುತ್ತದೆ ಎಂಬುದು ಒಂದು ಏಳೆಯ ಕತೆಯಾಗಿದೆ. ಸಿನಿಮಾದಲ್ಲಿ ಇಬ್ಬರು ಅನಾಥ ಹುಡುಗರು ಒಂದು ಹಂತದಲ್ಲಿ ಒಬ್ಬಾತ ಹಿಂದೂ, ಇನ್ನೊಬ್ಬ ಮುಸ್ಲಿಂ ಆಗುತ್ತಾನೆ. ಯಾವ ಕಾರಣಕ್ಕೆ ಬೇರೆ ಜಾತಿಗೆ ಹೋಗುತ್ತಾರೆ ಅಂತ ತಿಳಿಯಲು ಸಿನಿಮಾ ನೋಡಬೇಕಂತೆ.

ಹಾವೇರಿಯ ಗೋಪಾಲಕೃಷ್ಣ ಏಳು ವರ್ಷಗಳ ಕಾಲ ಹಲವು ನಿರ್ದೇಶಕರ ಬಳಿ ಅನುಭವ ಪಡೆದುಕೊಂಡು ಸ್ವಾಸ್ಥ್ಯದಿಂದ ಸಿನಿಮಾಕ್ಕೆ ಕತೆ,ಚಿತ್ರಕತೆ,ಸಂಭಾಷಣೆ, ನಿರ್ದೇಶನ ಮತ್ತು ನಿರ್ಮಾಣದಲ್ಲಿ ಪಾಲುದಾರರು. ಹಾವೇರಿ, ಹುಬ್ಬಳ್ಳಿ, ಸವಣೂರು, ಮುಂಡಗೋಡ, ಬಿಜಾಪುರ, ಹಾಡುಗಳನ್ನು ಗೋವಾ, ಕಾರವಾರ, ಮುರುಡೇಶ್ವರ ಕಡೆಗಳಲ್ಲಿ ಮೂವತ್ತು ದಿನಗಳ ಕಾಲ ಒಂದೇ ಹಂತದಲ್ಲಿ ಜನವರಿಯಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ. ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಾ ಕಾಲೇಜು ವಿದ್ಯಾರ್ಥಿಯಗಿ ಕಾಣಿಸಿಕೊಳ್ಳುತ್ತಿರುವ ಕಿರಣ್‍ಹಾವೇರಿ ನಾಯಕ. ಹದಿನೈದು ವರ್ಷಗಳ ಹಿಂದೆ ಗಣೇಶ್ ನಡೆಸಿಕೊಡುತ್ತಿದ್ದ ನಮಸ್ಕಾರ ಕಾರ್ಯಕ್ರಮವನ್ನು ನೋಡುತ್ತಾ, ಅವರ ಅಭಿಮಾನಿಯಾಗಿ ತಾನು ಒಬ್ಬ ನಟನಾಗಬೇಕೆಂದು ಸಣ್ಣದೊಂದು ಆಸೆ ಚಿಗುರಿದೆ. ಅಂದು ನಾಲ್ಕು ಜಿಲ್ಲೆಗಳಲ್ಲಿ ಕೆಎಫ್ ಎನ್ನುವ ಸ್ಥಳೀಯ ಚಾನಲ್‍ವೊಂದರಲ್ಲಿ ಉದ್ಗೋಷಕನಾಗಿ ಕೆಲಸ. ಏಳು ವರ್ಷ ಕೆಳಗೆ ಬೆಂಗಳೂರಿಗೆ ಬಂದು ಮುಖ್ಯ ವಾಹಿನಿ ಸಿನಿಮಾ ವಿಭಾಗದಲ್ಲಿ ತೊಡಗಿಕೊಂಡಿದ್ದಾರೆ, ವಿಷಯವನ್ನು ಗಣೇಶ್‍ಗೆ ತಿಳಿಸಲಾಗಿ, ಟ್ರೈಲರ್‍ನ್ನು ಬಿಡುಗಡೆ ಮಾಡಲು ಬರುವುದಾಗಿ ಆಶ್ವಾಸನೆ ನೀಡಿದ್ದಾರೆ. ಚಿತ್ರದಲ್ಲಿ ಎರಡು ಫೈಟ್, ಡ್ಯಾನ್ಸ್ ಇರಲಿದ್ದು ಅದಕ್ಕಾಗಿ ತಾಲೀಮು ನಡೆಸುತ್ತಿದ್ದಾರೆ.

ನಾಯಕಿ ಶ್ವೇತಾಧಾರವಾಡ ಪಿಯುಸಿ ಹುಡುಗಿಯಾಗಿ ನಾಲ್ಕನೆ ಚಿತ್ರ. ಪ್ರಿನ್ಸಿಪಾಲ್ ಪಾತ್ರಕ್ಕೆ ಸ್ವಸ್ತಿಕ್‍ಶಂಕರ್ ಅವರನ್ನು ಕೇಳಲಾಗಿದ್ದು. ಅವರಿಂದ ಇನ್ನು ಹಸಿರುನಿಶಾನೆ ಬಂದಿರುವುದಿಲ್ಲ. ಮುಸ್ಲಿಂ ಹುಡುಗನಾಗಿ ಅಮಿತ್, ಉಳಿದಂತೆ ಸಂತೋಷಹೊಳಲು, ವೈನೋದಿಕ ಪಾತ್ರಕ್ಕೆ ಚಂದ್ರುಸಂಸ್ಕ್ರತಿ ಮುಂತಾದವರು ನಟಿಸುತ್ತಿದ್ದಾರೆ. ಚುಟುಚುಟು ಖ್ಯಾತಿ ಶಿವುಬೆಳಗಿ ಸಾಹಿತ್ಯದ ಐದು ಹಾಡುಗಳಿಗೆ ವಿನುಮನಸು ಬ್ಯಾಂಡ್ ಬಜಾಯಿಸುತ್ತಿದ್ದಾರೆ. ಈ ಪೈಕಿ ‘ಬೇರೆನೆ ಐತಿ’ ಜಾನಪದ ಹಾಡನ್ನು ಐಟಂ ಸಾಂಗ್‍ಗೆ ಬಳಸಿಕೊಳ್ಳುವ ಇರಾದೆ ಇದೆ. ಸಚಿನ್‍ಕದಂಬ ಸೆರೆ ಹಿಡಿದ ದೃಶ್ಯಗಳನ್ನು ಎಡಿಟ್ ಮಾಡಲು ಗೋವಿಂದದಾಸರ್ ಆಯ್ಕೆಯಾಗಿದ್ದಾರೆ.

ಗೆಳೆಯರ ಚಿತ್ರಕ್ಕೆ ಪ್ರೋತ್ಸಾಹ ನೀಡಲು ಜಿತೇಂದ್ರಸವಣೂರು ‘ಹಾವೇರಿ ಟಾಕೀಸ್ ಕ್ರಿಯೆಶನ್ಸ್’ ಮೂಲಕ ಬಂಡವಾಳ ಹೂಡುವದರ ಜೊತೆಗೆ ಸ್ನೇಹಿತನಾಗಿ ಅಭಿನಯಿಸಲಿದ್ದಾರೆ. ಗುರುವಾರ ನಡೆದ ಮಹೂರ್ತ ಸಮಾರಂಭದಲ್ಲಿ ಸಿನಿಪಂಡಿತರು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ಭರಾಟೆ ಚೇತನ್‍ಕುಮಾರ್ ಮೊದಲ ದೃಶ್ಯದ ನಿರ್ದೇಶನ, ಅಣಜಿನಾಗರಾಜ್ ಕ್ಯಾಮಾರ್ ಸ್ವಿಚ್ ಆನ್, ವಾಹಿನಿ ಮುಖ್ಯಸ್ಥ ಅಮಿತ್‍ಪಾಳ್ಯ ಕ್ಲಾಪ್ ಮಾಡಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!