2 ಎಂ ಸಿನಿಮಾಸ್ ಅಡಿಯಲ್ಲಿ `ಪ್ರತಿ ಹಿಂಸ’ ಕನ್ನಡ ಚಿತ್ರ ಸೈಲೆಂಟ್ ಆಗಿ ಪ್ರಾರಂಭ ಆಗಿ 10 ದಿವಸಗಳ ಚಿತ್ರೀಕರಣ ಸಹ ಮುಗಿಸಿಕೊಂಡಿದೆ ಎಂದು ನಿರ್ದೇಶಕ ಕೆ ಜನಾರ್ಧನ್ ತಿಳಿಸುತ್ತಾರೆ.
ಈ ಚಿತ್ರದೊಂದಿಗೆ ಮಳೆ ಹುಡುಗಿ ಪೂಜಾ ಗಾಂಧಿ ಒಂದು ವಿಭಿನ್ನ ಪಾತ್ರದೊಂದಿಗೆ ವಾಪಸ್ಸಾಗುತ್ತಿದ್ದಾರೆ. ಇದೊಂದು ಬಹು ದೊಡ್ಡ ಬಜೆಟಿನ ಸಾಹಸಮಯ ಚಿತ್ರ. ಬೆಂಗಳೂರು, ಚಿಕ್ಕಮಗಳೂರು ಸುತ್ತಲೂ ಚಿತ್ರೀಕರಣ ನಡೆಸಲಾಗುತ್ತಿದೆ ಎಂದು ನಿರ್ಮಾಪಕ ಕೆ ವಿ ಶಬರಿಶ್ ಹೇಳುತ್ತಾರೆ.
ಹ ಸು ರಾಜಶೇಖರ್ ಸಂಭಾಷಣೆ, ಗಂಗು ನಿರ್ಮಾಣ ಸಾರಥ್ಯದಲ್ಲಿ ಚಿತ್ರೀಕರಣ ಮಾಡುತ್ತಿರುವ `ಪ್ರತಿ ಹಿಂಸ’ ಚಿತ್ರದಲ್ಲಿ ಪೂಜಾ ಗಾಂಧಿ ಜೊತೆಗೆ ಸಚಿನ್, ರಾಹುಲ್ ದೇವ್, ರವಿ ಕಾಳೆ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಮಾಸ್ ಮಾಧ ಸಾಹಸ ನಿರ್ದೇಶನದಲ್ಲಿ ಭರ್ಜರಿ ಸಾಹಸ ಸನ್ನಿವೇಶಗಳಲ್ಲಿ ಪೂಜಾ ಗಾಂಧಿ ಪಾಲ್ಗೊಳ್ಳಲಿದ್ದಾರೆ. ರಾಜೇಶ್ ಕುಮಾರ್ ಛಾಯಾಗ್ರಹಣ ಮಾಡಲಿದ್ದಾರೆ. ವಿ 2 ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
Pingback: Digital Transformation Solutions