ಕನ್ನಡ ಪೇಕ್ಷಕರ ನಾಡಿ ಮಿಡಿತವನ್ನು ಅರಿತು ಅವರು ಇಷ್ಟಪಡುವಂಥ ಚಿತ್ರಗಳನ್ನೇ ಮಾಡಿಕೊಂಡು ಬಂದಿರುವ ನಿರ್ಮಾಪಕ, ನಿರ್ದೇಶಕ ಬಿ.ಎಸ್. ಸಂಜಯ್ ಇದೀಗ ‘ಹನಿಮೂನ್ ಇನ್ ಬ್ಯಾಂಕಾಕ್ ‘ ಎಂಬ ಹಾರಾರ್’ ಮತ್ತು ಹಾಸ್ಯದ ಕಥೆಯ ಚಿತ್ರವನ್ನೂ ಮುಗಿಸಿ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನಿರ್ಮಾಣದ ಹೊಣೆ ಹೊತ್ತ ಮೈಸೂರು ಮೂಲದ ಕೆ.ರಮೇಶ್ ಅವರು ಈ ಚಿತ್ರವನ್ನೂ ನಿರ್ಮಿಸಿದ್ದಾರೆ. ಹಾರರ್ ಕಾಮಿಡಿ ಥ್ರಿಲ್ಲರ್ ಕಥಾನಕವನ್ನು ಹೊಂದಿರುವ ಈ ಚಿತ್ರದಲ್ಲಿ ವಿಹಾನ್ ಹಾಗೂ ವಿವೇಕ್ ನಾಯಕರಾಗಿದ್ದು, ಪ್ರೇಕ್ಷಾ, ಅನುಗೌಡ ನಾಯಕಿಯರ ಪಾತ್ರ ನಿರ್ವಹಿಸಿದ್ದಾರೆ.
ಮುಂಬೈ ಮೂಲದ ಅನನ್ಯ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಎಂ.ಸಂಜು ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಸಂಜಯ್ ಹಾರರ್ ಕಥೆಯನ್ನು ಹಾಸ್ಯದ ಹಿನ್ನೆಲೆಯಲ್ಲಿ ಹೇಳಲು ಟ್ರೈ ಮಾಡಿದ್ದೇವೆ.ವಿಶೇಷವಾಗಿ ಈ ಚಿತ್ರಕ್ಕೆ ಬ್ಯಾಂಕಾಕ್ ಹಾಗೂ ಪಟ್ಟಾಯದಲ್ಲಿ ಶೇಕಡಾ 60ರಷ್ಟು ಭಾಗದ ಶೂಟಿಂಗ್ ಮಾಡಿದ್ದರೆ, ಉಳಿದ ಭಾಗವನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಿದ್ದೇವೆ. ಚಿತ್ರವನ್ನು ಡಿಸೆಂಬರ್ 18 ಅಥವಾ 25ಕ್ಕೆ ಬಿಡುಗಡೆ ಮಾಡಬೇಕೆಂದು ಯೋಜನೆ ಹಾಕಿಕೊಂಡಿದ್ದೇವೆ ಎಂದು ಹೇಳಿದರು.ಚಿತ್ರದ ನಿರ್ಮಾಪಕ ರಮೇಶ್ ಮಾತನಾಡುತ್ತ ಚಿತ್ರರಂಗದಲ್ಲಿ ಇದು ನನ್ನ ಮೊದಲ ಪ್ರಯತ್ನ, ಕಥೆ ಚೆನ್ನಾಗಿದ್ದರಿಂದ ಚಿತ್ರ ನಿರ್ಮಾಣಕ್ಕೆ ಮುಂದಾದೆ. ಆರಂಭದಲ್ಲಿ ಇಡೀ ಚಿತ್ರವನ್ನು ಬ್ಯಾಂಕಾಕ್ನಲ್ಲೇ ಚಿತ್ರೀಕರಿಸುವ ಪ್ಲಾನ ಇತ್ತು. ನಂತರ ಸ್ವಲ್ಪ ಭಾಗವನ್ನು ಇಲ್ಲೇ ಶೂಟ್ ಮಾಡಿಕೊಂಡೆವು. ಈಗಾಗಲೇ ಚಿತ್ರದ ಮೊದಲ ಪ್ರತಿ ಹೊರಬಂದಿದ್ದು ಸೆನ್ಸಾರ್ ಕೂಡ ಆಗಿದೆ.
ಪ್ರೇಕ್ಷಕರು ಚಿತ್ರವನ್ನು ಗೆಲ್ಲಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಾಜೆಕ್ಟ್ಗಳನ್ನು ಮಾಡುವ ಯೋಚನೆಯಿದೆ ಎಂದು ಹೇಳಿದರು. ಹಿರಿಯ ನಿದೇಶಕ ವಿಕ್ಟರಿ ವಾಸು ಅವರು ಈ ಚಿತ್ರದಲ್ಲಿ ಒಬ್ಬ ಬೌದ್ದ ಸನ್ಯಾಸಿಯಾಗಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ದಶಕದ ಹಿಂದೆ ಸಾಗರಿ ಹಾರರ್ ಎಂಬ ಚಿತ್ರದ ಮೂಲಕ ಸಿನಿಮಾ ನಿರ್ಮಾಣ ಹಾಗೂ ನಿರ್ದೇಶನಕ್ಕಿಳಿದಿದ್ದ ಬಿಎಸ್. ಸಂಜಯ್, ಕಳೆದ ವರ್ಷವಷ್ಟೇ ಬಿಡುಗಡೆಯಾಗಿದ್ದ ಬ್ಯಾಡಗಿ ಮಿರ್ಚಿ ಚಿತ್ರದವರೆಗೆ ಒಟ್ಟು ಹನ್ನೊಂದು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.
ರನ್ 2 ಅವರ ಹನ್ನರಡನೇ ಚಿತ್ರವಾಗಿದ್ದು, ಆ ಚಿತ್ರದ ನಂತರ ಈಗ ಹನಿಮೂನ್ ಇನ್ ಬ್ಯಾಂಕಾಕ್ಗೆ ನಿರ್ದೇಶನ ಮಾಡಿದ್ದಾರೆ. ನಟ ವಿವೇಕ್ ಲೈಫು ಇಷ್ಟೇನೇ ಚಿತ್ರದ ಮೂಲಕ ಬಣ್ಣ ಹಚ್ಚಿದ್ದು, ನಂತರ ಕೆಲ ಸೀರಿಯಲ್ಗಳಿಗೂ ಅಭಿನಯಿಸಿದ್ದಾರೆ. ಈ ಚಿತ್ರದ ಮೂಲಕ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

Be the first to comment