“ಹೊಂದಿಸಿ ಬರೆಯಿರಿ” ಯೂಟ್ಯೂಬ್ ‌ನಲ್ಲಿ ಬಿಡುಗಡೆ

ರಾಮೇನಹಳ್ಳಿ ಜಗನ್ನಾಥ ನಿರ್ದೇಶನದ ಸಿನಿಮಾ “ಹೊಂದಿಸಿ ಬರೆಯಿರಿ” ಯೂಟ್ಯೂಬ್ ‌ನಲ್ಲಿ ಬಿಡುಗಡೆಯಾಗಿದೆ.

ಸಂಡೇ ಸಿನಿಮಾಸ್ ನಿರ್ಮಾಣ ಸಂಸ್ಥೆಯ ಚೊಚ್ಚಲ ಸಿನಿಮಾ “ಹೊಂದಿಸಿ ಬರೆಯಿರಿ” ಅಮೇಜಾನ್ ಪ್ರೈಮ್ ನಲ್ಲಿ ಇನ್ನೂ ಸ್ಟ್ರೀಮ್ ಆಗುತ್ತಿದೆ. ಇದು ಭಾರತ, ಯುಎಸ್ ಎ ಮತ್ತು ಯುಕೆ ಹೊರತಾಗಿ ಬೇರೆ ದೇಶಗಳಲ್ಲಿ ಸ್ಟ್ರೀಮ್ ಆಗುತ್ತಿಲ್ಲ. ಎಲ್ಲ ದೇಶಗಳ ಕನ್ನಡಿಗರಿಗೆ ತಲುಪಬೇಕು ಹಾಗೂ ಥಿಯೇಟರ್ ನಲ್ಲಿ ಚಿತ್ರ ನೋಡಿರದ, ಒಟಿಟಿ ಚಂದಾದಾರರು ಆಗದ ಎಲ್ಲರಿಗೂ ಚಿತ್ರ ತಲುಪಲಿ ಎನ್ನುವ ಉದ್ದೇಶದಿಂದ ಚಿತ್ರತಂಡ ಈ ನಿರ್ಧಾರ ಮಾಡಿದೆ.

ರಾಮೇನಹಳ್ಳಿ ಜಗನ್ನಾಥ ನಿರ್ದೇಶನದ ಜೊತೆಗೆ ತಮ್ಮ ಸ್ನೇಹಿತರ ಜೊತೆಗೂಡಿ ‘ಸಂಡೇ ಸಿನಿಮಸ್ ಬ್ಯಾನರ್’ ನಡಿ ನಿರ್ಮಾಣ ಮಾಡಿರುವ ‘ಹೊಂದಿಸಿ ಬರೆಯಿರಿ’ ಸಿನಿಮಾದಲ್ಲಿ ಪ್ರವೀಣ್ ತೇಜ್, ನವೀನ್ ಶಂಕರ್, ಶ್ರೀ ಮಹದೇವ್, ಅನಿರುದ್ದ್ ಆಚಾರ್ಯ, ಭಾವನಾ ರಾವ್, ಐಶಾನಿ ಶೆಟ್ಟಿ, ಸಂಯುಕ್ತ ಹೊರ್ನಾಡ್, ಅರ್ಚನಾ ಜೋಯಿಸ್  ನಟಿಸಿದ್ದಾರೆ.

‘ಹೊಂದಿಸಿ ಬರೆಯಿರಿ’ ಸಿನಿಮಾಗೆ ಹಾಕಿದ್ದ ಹಣ ವಾಪಸ್ ಆಗದಿದ್ದರೂ ಚಿತ್ರತಂಡ ಯೂಟ್ಯೂಬ್ ‌ನಲ್ಲಿ ಬಿಡುಗಡೆ ನಿರ್ಧಾರಕ್ಕೆ ಬಂದಿದೆ.  ಉಚಿತವಾಗಿ ಯೂಟ್ಯೂಬ್ ನಲ್ಲಿ ಎಲ್ಲರೂ ಸಿನಿಮಾ ನೋಡಲಿ. ಅವರಿಗೆ ಸಿನಿಮಾ ಇಷ್ಟವಾದರೆ ಮಾತ್ರ ತೋಚಿದಷ್ಟು ಹಣ ಕೊಡಲಿ ಎಂಬ ನಿರ್ಧಾರ ಮಾಡಿ  ಚಿತ್ರತಂಡ ನಿರ್ಮಾಣ ಸಂಸ್ಥೆ “Sunday cinemas” ನ QR CODE , UPI ID ಹಾಗೂ ಬ್ಯಾಂಕ್ Details ಅನ್ನು ಲಗತ್ತಿಸಿದೆ. You tube Description ನಲ್ಲಿ ಇದರ ಬಗ್ಗೆ ಮಾಹಿತಿ ಇದೆ.

“ಹೊಂದಿಸಿ ಬರೆಯಿರಿ” ಚಿತ್ರದ you tube link ನ್ನು ಎಲ್ಲರಿಗೂ ತಲುಪಿಸಿ. ನಮ್ಮ ಸಂಸ್ಥೆಯ ಮುಂದಿನ ಸಿನಿಮಾಗಳಿಗೆ ಪ್ರೋತ್ಸಾಹಿಸಿ. ಈಗಾಗಲೇ ಪ್ರೀ ಪ್ರೊಡಕ್ಷನ್ ಹಂತದಲ್ಲಿರುವ ನಮ್ಮ ಮುಂದಿನ ಚಿತ್ರದ ವಿವರಣೆಯನ್ನು ಆದಷ್ಟು ಬೇಗ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ ರಾಮೇನಹಳ್ಳಿ ಜಗನ್ನಾಥ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!