‘ಹೋಮ್ ಮಿನಿಸ್ಟರ್ ‘ ಗೆ ಉಪ್ಪಿ ಭಿನ್ನ ಪ್ರಮೋಷನ್

ಹಿಜಾಬ್ ಹೋಲುವ ವೇಷ ಧರಿಸಿರುವ ಉಪೇಂದ್ರ ಅವರ ಟ್ವಿಟರ್ ಪ್ರೊಫೈಲ್ ಪಿಕ್ಚರ್ ಸದ್ದು ಮಾಡುತ್ತಿದೆ!

ಹೋಂ ಮಿನಿಸ್ಟರ್ ಚಿತ್ರದಲ್ಲಿ ಉಪೇಂದ್ರ ಮಹಿಳೆಯರ ಜವಾಬ್ದಾರಿಯನ್ನು ತಾವು ಹೊತ್ತು ನಟಿಸಿದ್ದಾರೆ. ಏಪ್ರಿಲ್ 1ರಂದು ಈ ಸಿನಿಮಾ ರಿಲೀಸ್ ಆಗುತ್ತದೆ. ಈ ಕಾರಣಕ್ಕೆ ಆ ಚಿತ್ರದ ಒಂದು ವೇಷವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪ್ರೊಫೈಲ್ ಆಗಿ ಹಾಕಿಕೊಂಡಿದ್ದಾರೆ.

ಉಪೇಂದ್ರ ಮಹಿಳೆಯ ವೇಷದಲ್ಲಿ ಕಾಣಿಸಿಕೊಂಡ ಕಾರಣ ಈ ಫೋಟೊ ವೈರಲ್ ಆಗುತ್ತಿದೆ. ಕಪ್ಪು ಬಣ್ಣದ ಟಾಪ್ ಧರಿಸಿ, ತಲೆ ಮತ್ತು ಮುಖಕ್ಕೆ ಕಪ್ಪು ಬಣ್ಣದ ಬಟ್ಟೆ ಕಟ್ಟಿಕೊಂಡಿದ್ದಾರೆ. ಈ ಹೊಸ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಟ್ರೋಲ್ ಕೂಡ ಆಗಿದೆ.

ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ಹಲವರು ಉಪ್ಪಿಗೆ ಏನಾಗಿದೆ? ಅವರ ಅಕೌಂಟ್ ಹ್ಯಾಕ್ ಆಗಿದೆಯಾ? ಎಂದೆಲ್ಲಾ ಪ್ರಶ್ನೆ ಮಾಡುತ್ತಿದ್ದಾರೆ. ಜೊತೆಗೆ ಅಲ್ಲು ಅರ್ಜುನ್, ಮಹೇಶ್ ಬಾಬು ಫೋಟೊಗಳನ್ನೂ ಮಹಿಳೆಯರ ರೂಪಕ್ಕೆ ಎಡಿಟ್ ಮಾಡಿ ಕಮೆಂಟ್ ಮಾಡುತ್ತಿದ್ದಾರೆ. ಹಿಜಾಬ್ ವಿವಾದದ ನಡುವೆ ಹೀಗ್ಯಾಕೆ ಕಾಣಿಸಿಕೊಂಡಿದ್ದೀರಾ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ.

ಉಪೇಂದ್ರ ಟ್ವಿಟ್ಟರ್‌ನಲ್ಲಿ ಹಾಕಿರುವ ಫೊಟೋದಲ್ಲಿ ಹುಡುಗಿಯ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಮುಖ ಮುಚ್ಚಿಕೊಂಡು ಹಿಜಾನ್ ಕೂಡ ಧರಿಸಿದ್ದಾರೆ. ತಲೆಗೆ ಮತ್ತು ಮುಖಕ್ಕೆ ಉಪ್ಪಿ ಬಟ್ಟೆ ಕಟ್ಟಿಕೊಂಡಿರುವ ಕಾರಣ ಇದು ಹಿಜಾಬ್ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಉಪ್ಪಿ ಹೊಸ ಅವತಾರದ ಮೂಲಕ ಸದ್ದು ಮಾಡುತ್ತಿದ್ದಾರೆ.

ಹೋಂ ಮಿನಿಸ್ಟರ್ ಚಿತ್ರಕ್ಕಾಗಿ ಉಪ್ಪಿ ಈ ಪ್ರಮೋಷನ್ ಗಿಮಿಕ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲ ದಿನಗಳ ಹಿಂದೆ ಈ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!