ಹೋಮ್ ಮಿನಿಸ್ಟರ್ ಚಿತ್ರ ಡಿಫರೆಂಟ್: ಉಪ್ಪಿ

‘ಹೋಮ್​ ಮಿನಿಸ್ಟರ್​ ‘ ಹೆಸರಿನ ಟೈಟಲ್​ ಕೇಳಿ ಥಿಯೇಟರ್​ ಒಳಗೆ ಹೋದರೆ ಪ್ರೇಕ್ಷಕರು ಶಾಕ್​ ಆಗೋದು ಖಂಡಿತ ‘ ಎಂದು ನಟ ಉಪೇಂದ್ರ ಅವರು ‘ಹೋಮ್​ ಮಿನಿಸ್ಟರ್​ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ.

ರಿಯಲ್​ ಸ್ಟಾರ್​’ ಉಪೇಂದ್ರ ಅಭಿನಯದ ‘ಹೋಮ್​ ಮಿನಿಸ್ಟರ್​’ ಸಿನಿಮಾ ಏಪ್ರಿಲ್ 1ರಂದು ಬಿಡುಗಡೆಗೆ ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಈ ಚಿತ್ರ ರಿಲೀಸ್​ ಆಗಿರಬೇಕಿತ್ತು. ಕಾರಣಾಂತರಗಳಿಂದ ಸಸಿನಿಮಾದ ಕೆಲಸ ತಡ ಆದವು. ‘ಲೇಟ್​ ಆದ್ರೂ ಲೇಟೆಸ್ಟ್​ ಆಗಿ ಬರುತ್ತಿದ್ದೇವೆ’ ಎನ್ನುವುದು ಉಪೇಂದ್ರ ಮಾತು.

‘ಹೋಮ್​ ಮಿನಿಸ್ಟರ್​’ ಶೀರ್ಷಿಕೆ ನೋಡಿದರೆ ಇದು ರಾಜಕೀಯಕ್ಕೆ ಸಂಬಂಧಿಸಿದ ಸಿನಿಮಾ ಎನಿಸಬಹುದು. ಆದರೆ ಇದು ವಿಭಿನ್ನವಾದ ಪ್ರಯತ್ನ. ಸಿನಿಮಾ ನೋಡಿದರೆ ಜನರಿಗೆ ಗೊತ್ತಾಗುತ್ತದೆ. ನಾವು ಮಾಡಿದ ಸಿನಿಮಾವನ್ನು ನಾವೇ ಹೊಗಳಬಾರದು. ಹೋಮ್​ ಮಿನಿಸ್ಟರ್​ ಎಂಬ ಟೈಟಲ್​ ಕೇಳಿ ಥಿಯೇಟರ್​ ಒಳಗೆ ಹೋದರೆ ನೀವು ಶಾಕ್​ ಆಗ್ತೀರಿ. ಅಲ್ಲಿ ಬೇರೆಯದೇ ಹೋಮ್​ ಮಿನಿಸ್ಟರ್​ ಇರುತ್ತಾರೆ. ಈ ಸಿನಿಮಾದಲ್ಲಿ ಅದೇ ಸಸ್ಪೆನ್ಸ್​. ನನಗಿಂತ ವೇದಿಕಾ ಪಾತ್ರ ಹೆಚ್ಚು ಚೆನ್ನಾಗಿದೆ. ಸಿನಿಮಾದಲ್ಲಿ ಅವರು ನನ್ನನ್ನು ಆಟ ಆಡಿಸ್ತಾರೆ. ಅವರು ತುಂಬ ಚೆನ್ನಾಗಿ ನಟಿಸಿದ್ದಾರೆ ಎಂದು ಉಪ್ಪಿ ಹೇಳಿದ್ದಾರೆ.

ಹಲವು ಹುಡುಗಿಯರು ಸಿನಿಮಾದಲ್ಲಿ ನಟಿಸಿದ್ದಾರೆ. ಮಲೇಷಿಯಾ, ಥಾಯ್ಲೆಂಡ್​ನಲ್ಲಿ ಶೂಟಿಂಗ್​ ಮಾಡಲಾಗಿದೆ ಎನ್ನುತ್ತಾರೆ ಉಪೇಂದ್ರ.
ಕರ್ನಾಟಕದಲ್ಲಿ ಸುಮಾರು 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಹೋಮ್ ಮಿನಿಸ್ಟರ್’ ಚಿತ್ರ ಬಿಡುಗಡೆ ಆಗುತ್ತಿದೆ. ಚಿತ್ರವನ್ನು ಬೆಂಗಳೂರು ಕುಮಾರ್ ಫಿಲಂಸ್ ಸಂಸ್ಥೆ ಬಿಡುಗಡೆ ಮಾಡುತ್ತಿದೆ. ಸುಜಯ್ ಕೆ. ಶ್ರೀಹರಿ ನಿರ್ದೇಶನ, ಕುಂಟುನಿ ಎಸ್. ಕುಮಾರ್ ಛಾಯಾಗ್ರಹಣ ಇದೆ. ಸಂಭಾಷಣೆಯನ್ನು ಧರ್ಮೇಂದ್ರ ಬರೆದಿದ್ದಾರೆ.

ಚಾಂದಿನಿ, ಬೇಬಿ ಆದ್ಯಾ, ಸುಮನ್ ರಂಗನಾಥ್, ಸಾಧುಕೋಕಿಲ, ಶ್ರೀನಿವಾಸ ಮೂರ್ತಿ, ಸುಧಾ ಬೆಳವಾಡಿ, ತಿಲಕ್, ಅವಿನಾಶ್, ಮಾಳವಿಕಾ ಅವಿನಾಶ್, ಲಾಸ್ಯಾ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
_

Be the first to comment

Leave a Reply

Your email address will not be published. Required fields are marked *

Translate »
error: Content is protected !!