2026 ರ ಅಕಾಡೆಮಿ ಪ್ರಶಸ್ತಿಗಳಿಗೆ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಭಾರತದ ಅಧಿಕೃತ ಪ್ರವೇಶವಾಗಿ ಹಿಂದಿ ಸಿನಿಮಾ ‘ಹೋಮ್ಬೌಂಡ್’ ನ್ನು ಆಯ್ಕೆ ಮಾಡಲಾಗಿದೆ.
ಆಸ್ಕರ್ನಲ್ಲಿ ದೇಶವನ್ನು ಪ್ರತಿನಿಧಿಸಲು ವಿವಿಧ ಭಾಷೆಗಳಲ್ಲಿ ಒಟ್ಟು 24 ಸಿನಿಮಾಗಳು ಸ್ಪರ್ಧೆಯಲ್ಲಿವೆ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಎನ್ ಚಂದ್ರ ಅವರು ತಿಳಿಸಿದ್ದಾರೆ.
”ನಾವು ನ್ಯಾಯಾಧೀಶರಲ್ಲ. ನಾವು ತಮ್ಮ ಛಾಪು ಮೂಡಿಸಿದ ಸಿನಿಮಾಗಳನ್ನು ಹುಡುಕುತ್ತಿದ್ದೆವು. ಇದು ತುಂಬಾ ಕಷ್ಟಕರವಾದ ಆಯ್ಕೆಯಾಗಿತ್ತು. ಇವು ಜನರ ಜೀವನವನ್ನು ಮುಟ್ಟಿದ ಚಿತ್ರಗಳಾಗಿವೆ” ಎಂದು ಅವರು ಹೇಳಿದ್ದಾರೆ.
ಅಕಾಡೆಮಿ ಪ್ರಶಸ್ತಿಗಳಿಗೆ 12 ಸದಸ್ಯರ ಆಯ್ಕೆ ಸಮಿತಿಯು ನಿರ್ಮಾಪಕರು, ನಿರ್ದೇಶಕರು, ಬರಹಗಾರರು, ಸಂಪಾದಕರು ಮತ್ತು ಪತ್ರಕರ್ತರನ್ನು ಒಳಗೊಂಡಿದೆ.
“ಹೋಮ್ಬೌಂಡ್” ಚಿತ್ರ ಉತ್ತರ ಭಾರತದ ಒಂದು ಸಣ್ಣ ಹಳ್ಳಿಯ ಇಬ್ಬರು ಬಾಲ್ಯ ಸ್ನೇಹಿತರ ಕಥೆಯನ್ನು ಹೊಂದಿದೆ. ಕರಣ್ ಜೋಹರ್ ಮತ್ತು ಆದರ್ ಪೂನವಲಾ ನಿರ್ಮಿಸಿದ “ಹೋಮ್ಬೌಂಡ್” ಚಿತ್ರದಲ್ಲಿ ಇಶಾನ್ ಖಟ್ಟರ್, ಜಾನ್ವಿ ಕಪೂರ್, ವಿಶಾಲ್ ಜೇಥ್ವಾ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. “ಹೋಮ್ಬೌಂಡ್” ಚಿತ್ರವನ್ನು ನೀರಜ್ ಘಯ್ವಾನ್ ಅವರು ನಿರ್ದೇಶಿಸಿದ್ದಾರೆ.





Be the first to comment