ಹೊಂಬಾಳೆ ಫಿಲ್ಮ್ಸ್ ನಿಂದ ‘ಅನಕೊಂಡ’ ವಿತರಣೆ

ಹಾಲಿವುಡ್ ಚಿತ್ರ ‘ಅನಕೊಂಡ’ವನ್ನು ಕರ್ನಾಟಕದ ಎಲ್ಲ ಚಿತ್ರಮಂದಿರಗಳಿಗೆ ವಿತರಿಸುವುದಾಗಿ ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ.

‘ಅನಕೊಂಡ’ ಡಿಸೆಂಬರ್ 25 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ  ಹೊಂಬಾಳೆ ಫಿಲ್ಮ್ಸ್‌  ಮೂಲಕ ಈ ಚಿತ್ರ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈ ಚಿತ್ರದಲ್ಲಿ ಪಾಲ್ ರುಡ್,  ಜ್ಯಾಕ್ ಬ್ಲ್ಯಾಕ್, ಸ್ಟೀವ್ ಜಾನ್, ಥಂಡಿವೆ ನ್ಯೂಟನ್, ಡೇನಿಯಲಾ ಮೆಲ್ಚಿಯರ್ ಮತ್ತು ಸೆಲ್ಟನ್ ಮೆಲ್ಲೊ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.  ಅನಕೊಂಡ ಚಿತ್ರವನ್ನು ಟಾಮ್ ಗೊರ್ಮಿಕನ್ ನಿರ್ದೇಶಿಸಿದ್ದಾರೆ. ಅವರು ಕೆವಿನ್ ಎಟ್ಟೆನ್ ಅವರೊಂದಿಗೆ ಚಿತ್ರಕಥೆಯನ್ನು ಸಹ ಬರೆದಿದ್ದಾರೆ.

‘ಅನಕೊಂಡ’ ಚಿತ್ರವನ್ನು ಕರ್ನಾಟಕದ  ಚಿತ್ರಮಂದಿರಗಳಿಗೆ ವಿತರಿಸುವ ಮೂಲಕ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಅಂತರರಾಷ್ಟ್ರೀಯ ಚಲನಚಿತ್ರ ವಿತರಣೆಗೂ ಕಾಲಿಟ್ಟಿದೆ. ಭಾರತೀಯ ಚಿತ್ರಗಳನ್ನು ಮೀರಿ ಹೊಂಬಾಳೆ ಫಿಲ್ಮ್ಸ್ ವಿತರಣಾ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಕೆಜಿಎಫ್, ಕಾಂತಾರ ಚಿತ್ರಗಳ ಖ್ಯಾತಿಯ ಹೊಂಬಾಳೆ ಫಿಲ್ಮ್ಸ್ ಕರ್ನಾಟಕದಾದ್ಯಂತ ಅನಕೊಂಡವನ್ನು ವಿತರಿಸುವ ಮೂಲಕ ಸ್ಥಳೀಯ ಪ್ರೇಕ್ಷಕರಿಗೆ ಅಂತರರಾಷ್ಟ್ರೀಯ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸುವ ಅವಕಾಶವನ್ನು ಒದಗಿಸಿದೆ.

‘ಅನಕೊಂಡ’ 1997ರ ಕಲ್ಟ್ ಚಿತ್ರದ ನಾಸ್ಟಾಲ್ಜಿಯಾವನ್ನು  ಅವಲಂಬಿಸದೆ ಆ್ಯಕ್ಷನ್ ಮತ್ತು ಹಾಸ್ಯವನ್ನು ಸಂಯೋಜಿಸುವ ಮೂಲಕ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!