ಮಹಿಳಾ ನಿರ್ದೇಶಕಿ ಜೊತೆ ಚಿತ್ರ ಮಾಡಲು ಹೊಂಬಾಳೆ ಫಿಲ್ಮ್ಸ್ ಮುಂದಾಗಿದೆ.
‘ಕೆಲವೊಂದು ಸತ್ಯಕಥೆಗಳನ್ನು ಹೇಳಲೇ ಬೇಕು. ಅದು ಸರಿಯಾದ ರೀತಿಯಲ್ಲಿ ಹೇಳಬೇಕು. ನಾವು ಹೊಂಬಾಳೆ ಫಿಲ್ಮ್ಸ್ ತುಂಬಾ ಹೆಮ್ಮೆಯಿಂದ ಘೋಷಣೆ ಮಾಡುತ್ತಿದ್ದೀನಿ ನಮ್ಮ ಮುಂದಿನ ಸಿನಿಮಾ ನಿರ್ದೇಶಕ ಸುಧಾ ಕೊಂಗರ ಅವರ ಜೊತೆ. ನಮ್ಮೆಲ್ಲಾ ಸಿನಿಮಾಗಳ ರೀತಿಯೇ ಈ ಚಿತ್ರವೂ ನಮ್ಮ ಭಾರತದ ಇಮ್ಯಾಜಿನೇಷನ್‌ನನ್ನು ಎತ್ತಿ ತೋರಿಸಲಾಗುತ್ತದೆ’ ಎಂದು ಹೊಂಬಾಳೆ ಫಿಲ್ಮ್ಸ್ ಫೋಸ್ಟರ್ ರಿಲೀಸ್ ಮಾಡಿದೆ.
ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಹುಟ್ಟಿ ಚೆನ್ನೈನಲ್ಲಿ ಬೆಳೆದ ಸುಧಾ ಅವರು ಹಿಸ್ಟರಿ ಮತ್ತು ಮಾಸ್ ಕಮ್ಯೂನಿಕೇಷನ್ ಪದವಿಧರೆ ಆಗಿದ್ದಾರೆ. 2002ರಲ್ಲಿ ಇಂಗ್ಲಿಷ್ ಸಿನಿಮಾ Mitr ಮತ್ತು ಮೈ ಫ್ರೆಂಡ್ ಚಿತ್ರಕ್ಕೆ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡಿದರು. ಅವರು ಮಣಿ ರತ್ನಂ ಅವರ ಜೊತೆ ಏಳು ವರ್ಷ ಕೆಲಸ ಮಾಡಿದ್ದಾರೆ. 2008ರಲ್ಲಿ ಕೃಷ್ಣ ಭಗವಾನ್ ನಟಿಸಿರುವ ಆಂಧ್ರ ಅಂದಗಾಡು ಚಿತ್ರದ ಮೂಲಕ ನಿರ್ದೇಶಕಿಯಾಗಿ ಎಂಟ್ರಿ ಕೊಟ್ಟರು. ಆದರೆ ಅಂದುಕೊಂಡ ರೀತಿಯಲ್ಲಿ ಸಿನಿಮಾ ಯಶಸ್ಸು ಕೊಡಲಿಲ್ಲ.
ಕ್ಯಾಪ್ಟನ್ ಜಿಆರ್ ಗೋಪಿನಾಥ್ ಅವರ ಕಥೆ ಸೂರರೈ ಪೊಟ್ರು ಚಿತ್ರಕ್ಕೆ ಸುಧಾ ಆಕ್ಷನ್ ಕಟ್ ಹೇಳಿದರು. ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾ ವಿಶ್ವಾದ್ಯಂತ ಗಮನ ಸೆಳೆಯಿತು. ಕಳೆದ ವರ್ಷ ಓಟಿಟಿಯಲ್ಲಿ ಅವರ ಪಾವ ಕಡೈಗಲ್ ಸಿನಿಮಾ ಬಿಡುಗಡೆ ಆಗಿತ್ತು. ಈಗ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಜೊತೆ ಸುಧಾ ಕೈಜೋಡಿಸಿದ್ದು ಕುತೂಹಲ ಮೂಡಿಸಿದ್ದಾರೆ.
___
Be the first to comment