ಸಿನಿಮಾ ರಂಗದ ಉಳಿವಿಗಾಗಿ ಆಗಸ್ಟ್ 13, 14 ರಂದು ಕಲಾವಿದರ ಸಂಘದಲ್ಲಿ ಪೂಜೆ, ಹೋಮ, ಹವನ ಮಾಡಲು ನಿರ್ಧರಿಸಿದ್ದು ನಟ ದರ್ಶನ್ ಬಿಡುಗಡೆಗಾಗಿ ಇದನ್ನು ಮಾಡಲಾಗುತ್ತಿದೆಯೇ ಎನ್ನುವ ಅನುಮಾನ ಮೂಡಿದೆ.
ಕಲಾವಿದರ ಸಂಘದಲ್ಲಿ ಪೂಜೆ ಕಾರ್ಯಕ್ರಮ ನಡೆಯುವ ಕುರಿತು ಧಿಡೀರ್ ಸುದ್ದಿಗೋಷ್ಠಿ ಕರೆದು ಮಾತನಾಡಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ”ಕೊರೊನಾ ಬಳಿಕ ಸಾಕಷ್ಟು ಸಾವು ನೋವು ಸಂಭವಿಸಿವೆ. ಚಿತ್ರರಂಗದಲ್ಲೂ ಹಲವರನ್ನು ನಾವು ಕಳೆದುಕೊಂಡಿದ್ದೇವೆ. ಹೀಗಾಗಿ ಚಿತ್ರರಂಗದ ಉಳಿವಿಗಾಗಿ, ಏಳಿಗೆಗಾಗಿ ಪೂಜೆ ಮಾಡಲು ತೀರ್ಮಾನ ಮಾಡಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಒಂದು ಸಲ್ಯೂಷನ್ ಬೇಕಾಗಿದೆ. ಇವತ್ತಿನ ಕನ್ನಡ ಚಿತ್ರರಂಗದ ಪರಿಸ್ಥಿತಿ ಏನಾಗ್ತಿದೆ ಅನ್ನೋದು ಗೊತ್ತಿದೆ. ಹಿಂದೆ ಎಲ್ಲಾ ಭಾಷೆಯ ಚಿತ್ರ ಬಿಡುಗಡೆ ಆಗ್ತಿದ್ದವು, ಅದು ಕಡಿಮೆ ಇತ್ತು. ಆದರೆ ಇವತ್ತು ಸುನಾಮಿ ರೀತಿ ಎಲ್ಲ ಚಿತ್ರಗಳು ಬರ್ತಾ ಇವೆ. ಎಲ್ಲ ಭಾಷೆಯ ಸೂಪರ್ ಡೂಪರ್ ಚಿತ್ರ ತಂದು ರಿಲೀಸ್ ಮಾಡ್ತಿದ್ದಾರೆ. ಅದರ ಪರಿಣಾಮದಿಂದ ಇವತ್ತು ಕನ್ನಡ ಚಿತ್ರರಂಗ ಪಾತಾಳಕ್ಕೆ ಹೋಗ್ತಾ ಇದೆ. ಅದನ್ನು ಉಳಿಸಿಕೊಳ್ಳೋಕೆ ಈ ಪೂಜೆ ನಡೆಸುತ್ತಿದ್ದೇವೆ” ಎಂದರು.
ಜೈಲಿನಲ್ಲಿ ನಟ ದರ್ಶನ್ ಬಿಡುಗಡೆಗೆ ಹೋಮ ಹವನ ನಡೆಸಲಾಗುತ್ತಿದೆಯಾ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ರಾಕ್‌ಲೈನ್ ವೆಂಕಟೇಶ್, ನಾನು ದರ್ಶನ್‌ಗಾಗಿ ನೂರು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುತ್ತೇನೆ. ಅದಕ್ಕೆ ಇಲ್ಲೇ ಬಂದು ಪೂಜೆ ಮಾಡಬೇಕಾಗಿಲ್ಲ. ಇಲ್ಲಿ ನಡೆಸುತ್ತಿರುವ ಉದ್ದೇಶ ದರ್ಶನ್ ಗಾಗಿ ಮಾತ್ರ ಒಳ್ಳೆಯದಾಗಲಿ ಅನ್ನೋದಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ತಪ್ಪು ಸರಿ ಹೇಳುವಷ್ಟು ದೊಡ್ಡ ಮನುಷ್ಯ ನಾನಲ್ಲ. ನಾನು ದರ್ಶನ್ ಒಂದೇ ಕುಟುಂಬದ ಸದಸ್ಯರೇ.ದರ್ಶನ್ ಬಿಡುಗಡೆಗಾಗಿ ಪೂಜೆ ಮಾಡುತ್ತಿದ್ದೇವೆ ಅಂತಾ ಭಾವಿಸೋದು ತಪ್ಪು” ಎಂದರು.
“ಹೊಸದಾಗಿ ಬಂದಿರುವ 250 ನಿರ್ಮಾಪಕರನ್ನು ಉಳಿಸಿಕೊಕೊಳ್ಳಬೇಕು. ಇಲ್ಲವೆಂದರೆ 2-3 ವರ್ಷದಲ್ಲಿ ಕೇವಲ 30 ರಿಂದ 40 ಸಿನಿಮಾ ಆದರೆ ಅಚ್ಚರಿ ಇಲ್ಲ” ಎಂದರು.
Be the first to comment