ಆಸ್ಕರ್ ವಿಜೇತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರು ‘ರಾಮಾಯಣ’ ಚಿತ್ರದ ಫೈನಲ್ ಕಟ್ ವೀಕ್ಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕ್ರಿಸ್ಟೋಫರ್ ನೋಲನ್ ‘ರಾಮಾಯಣ’ ಚಿತ್ರಕ್ಕೆ ಅಧಿಕೃತವಾಗಿ ಕೆಲಸ ಮಾಡದಿದ್ದರೂ ಚಿತ್ರದ ತಾಂತ್ರಿಕ ಗುಣಮಟ್ಟ ಮತ್ತು ದೃಶ್ಯ ವೈಭವವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ತಮ್ಮ ಸಲಹೆಗಳನ್ನು ನೀಡಲಿದ್ದಾರೆ.
‘ರಾಮಾಯಣ’ ನಿರ್ಮಾಪಕ ನಮಿತ್ ಮಲ್ಹೋತ್ರಾ ಒಡೆತನದ ವಿಶ್ವವಿಖ್ಯಾತ VFX ಸಂಸ್ಥೆ DNEG, ಕ್ರಿಸ್ಟೋಫರ್ ನೋಲನ್ ಅವರ ‘ಇನ್ಸೆಪ್ಷನ್’, ‘ಟೆನೆಟ್’, ‘ಆಪೆನ್‌ಹೈಮರ್’ ಚಿತ್ರಗಳಿಗೆ ಕೆಲಸ ಮಾಡಿದೆ. ಈ ಬಾಂಧವ್ಯದ ಹಿನ್ನೆಲೆಯಲ್ಲಿ ನೋಲನ್ ಅವರು ‘ರಾಮಾಯಣ’ ಚಿತ್ರಕ್ಕೆ ಬೆಂಬಲ ನೀಡಲು ಒಪ್ಪಿರಬಹುದು ಎಂದು ಹೇಳಲಾಗುತ್ತಿದೆ.
ರಾಮಾಯಣ ಕೇವಲ ಭಾರತೀಯ ಸಿನಿಮಾವಾಗದೆ, ಜಾಗತಿಕ ಮಟ್ಟದ ಅದ್ಭುತವಾಗಿ ಹೊರಹೊಮ್ಮಬೇಕು ಎಂಬುದು ಚಿತ್ರತಂಡದ ಗುರಿ. ಇದಕ್ಕಾಗಿ ದೃಶ್ಯ ಕಾವ್ಯದ ಮಾಂತ್ರಿಕ ನೋಲನ್ ಅವರ ಮಾರ್ಗದರ್ಶನ ಪಡೆಯಲು ತಯಾರಿ ನಡೆದಿದೆ ಎಂದು ಮೂಲಗಳು ಹೇಳಿವೆ.
‘ರಾಮಾಯಣ’ ಚಿತ್ರದಲ್ಲಿ ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅವರು ನಟಿಸುತ್ತಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾ ಜುಲೈನಲ್ಲಿ ಬಿಡುಗಡೆಯಾಗಲಿದೆ. ಭಾರತೀಯ ಚಿತ್ರರಂಗದ ಅತ್ಯಂತ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಎನಿಸಿಕೊಂಡಿರುವ ‘ರಾಮಾಯಣ’ ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ.
—-





Be the first to comment