ಕೂಲಿ

‘ಕೂಲಿ’ ಸಿನಿಮಾ ನೋಡಲು ಸಿಂಗಪುರದಲ್ಲಿ ರಜೆ!

ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ಆಗಸ್ಟ್ 14 ರಂದು ಬಿಡುಗಡೆ ಆಗುತ್ತಿದ್ದು, ಸಿಂಗಪುರದ ಕೆಲ ಕಂಪನಿಗಳು  ಸಿನಿಮಾ ವೀಕ್ಷಿಸಲೆಂದೇ ತಮ್ಮ ಸಿಬ್ಬಂದಿಗೆ ರಜೆ ನೀಡಿವೆ.

ಸಿಂಗಪುರದ ಫಾರ್ಮರ್ ಕನ್​ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ತನ್ನ ತಮಿಳು ಸಿಬ್ಬಂದಿಗೆ ಆಗಸ್ಟ್ 14 ರಂದು ಸಂಬಳ ಸಹಿತ ರಜೆ  ಘೋಷಣೆ ಮಾಡಿದೆ. ರಜನೀಕಾಂತ್ ಅವರ ‘ಕೂಲಿ’ ಸಿನಿಮಾ ವೀಕ್ಷಿಸಲೆಂದೇ ಈ ರಜೆ ನೀಡುತ್ತಿರುವುದಾಗಿ ಸರ್ಕ್ಯುಲರ್​​ನಲ್ಲಿ ಉಲ್ಲೇಖಿಸಿದೆ.

ಎಸ್​ಬಿ ಮಾರ್ಟ್​ ಎನ್ನುವ ಮಳಿಗೆ   ‘ಕೂಲಿ’ ಸಿನಿಮಾ ಬಿಡುಗಡೆ ಇರುವ ಕಾರಣ ಅರ್ಧ ದಿನ ರಜೆ ಘೋಷಣೆ ಮಾಡಿದೆ.  ಆಗಸ್ಟ್ 14 ರಂದು ಮಳಿಗೆಯು ಬೆಳಿಗ್ಗೆ 7 ರಿಂದ 11:45ತ ವರೆಗೆ ಮುಚ್ಚಲ್ಪಟ್ಟಿರುತ್ತದೆ ಎಂದು ಸುತ್ತೋಲೆ ಹೊರಡಿಸಿದೆ.

ಚೆನ್ನೈನಲ್ಲಿ ಕೆಲವು ಖಾಸಗಿ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ‘ಕೂಲಿ’ ಸಿನಿಮಾ ವೀಕ್ಷಿಸಲು ವಿಶೇಷ ರಜೆಯನ್ನು ಮಂಜೂರು ಮಾಡಿವೆ. ರಜನೀಕಾಂತ್ ಅವರ ಸಿನಿಮಾಗಳು ಬಿಡುಗಡೆ ಆಗುವಾಗ ಹೀಗೆ ಕಂಪೆನಿಗಳು ರಜೆ ನೀಡುವುದು ಸಾಮಾನ್ಯ. ಈ ಹಿಂದೆ ರಜನೀಕಾಂತ್ ಅವರ ‘ಕಬಾಲಿ’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿಯೂ  ಹಲವು ಕಂಪೆನಿಗಳು ವಿಶೇಷ ರಜೆಯನ್ನು ಮಂಜೂರು ಮಾಡಿದ್ದವು.

ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ‘ಕೂಲಿ’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಅಡ್ವಾನ್ಸ್ ಬುಕಿಂಗ್ ಬಲು ಜೋರಾಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಇನ್ನೂ  ಪ್ರಮುಖ ನಗರಗಳಲ್ಲಿ ಈಗಾಗಲೇ ಮೊದಲ ದಿನದ 75% ಶೋಗಳು ಹೌಸ್ ಫುಲ್ ಆಗಿವೆ.

‘ಕೂಲಿ’ ಚಿತ್ರದಲ್ಲಿ ತೆಲುಗು ನಟ ನಾಗಾರ್ಜುನ, ಕನ್ನಡದ ಸ್ಟಾರ್ ಹೀರೋ, ಉಪೇಂದ್ರ ಮತ್ತು ಬಹುಭಾಷಾ ನಟಿ ಶ್ರುತಿ ಹಾಸನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ ಪಿಕ್ಚರ್ಸ್  ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.  ಸಿನಿಮಾ ವಿಶ್ವಾದ್ಯಂತ  ತೆಲುಗು,  ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ.

This Article Has 3 Comments
  1. Pingback: buy cheap enclomiphene generic germany

  2. Pingback: how to order xifaxan cheap mastercard

  3. Pingback: buy cheap staxyn purchase online from canada

Leave a Reply

Your email address will not be published. Required fields are marked *

Translate »
error: Content is protected !!