ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ನಟಿ ದಿವ್ಯಾ ಸುರೇಶ್ ವಿರುದ್ಧ ಹಿಟ್ ಆಂಡ್ ರನ್ ಕೇಸ್ ದಾಖಲಾಗಿದೆ.
ದಿವ್ಯಾ ಸುರೇಶ್ ಕಾರು ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಡಿಕ್ಕಿ ಬಳಿಕ ನಟಿ ಕಾರು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾರೆ ಎಂಬ ಆರೋಪ ಎದುರಾಗಿದೆ. ಅಪಘಾತ ಅಕ್ಟೋಬರ್ 4ರ ರಾತ್ರಿ ಸುಮಾರು 1.30ಕ್ಕೆ ಬ್ಯಾಟರಾಯನಪುರದ ಎಂ.ಎಂ. ರಸ್ತೆಯಲ್ಲಿ ಸಂಭವಿಸಿದ್ದು ಘಟನೆ ಇದೀಗ ಬೆಳಕಿಗೆ ಬಂದಿದೆ.
ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಅ.7 ರಂದು ಗಾಯಗೊಂಡ ಮಹಿಳೆಯ ಸಂಬಂಧಿ ನಟಿ ವಿರುದ್ಧ ದೂರು ದಾಖಲಿಸಿದ್ದಾರೆ. ಅವತ್ತು ರಾತ್ರಿ ಗಿರಿನಗರದ ಆಸ್ಪತ್ರೆಗೆ ಹೋಗ್ತಾ ಇದ್ದೆವು. ನಮ್ಮ ಸಂಬಂಧಿ ಅನುಷಾಗೆ ಹುಷಾರಿರಲಿಲ್ಲ. ಏಕಾಏಕಿ ಕ್ರಾಸ್‌ನಲ್ಲಿ ಬಂದು ದಿವ್ಯಾ ಸುರೇಶ್ ಕಾರು ಅನಿತಾ ಅವರ ಕಾಲಿಗೆ ಗುದ್ದಿತ್ತು. ದಿವ್ಯಾ ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್‌ನಲ್ಲಿದ್ದ ಮೂವರು ಬಿದ್ದಿದ್ದೆವು. ಕಾರು ಡಿಕ್ಕಿ ಹೊಡೆದಾಗ ಮಹಿಳೆಗೆ ಕಾಲಿನ ಮಂಡಿ ಚಿಪ್ಪಿಗೆ ಪೆಟ್ಟಾಗಿತ್ತು. ಕಾರು ನಿಲ್ಲಿಸದೇ ದಿವ್ಯಾ ಸುರೇಶ್ ಪರಾರಿಯಾಗಿದ್ದರು. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಕಾಲಿನ ಮಂಡಿ ಚಿಪ್ಪು ಮುರಿದಿರೋದಾಗಿ ಚಿಕಿತ್ಸೆ ನೀಡಿದ್ದಾರೆ.





Be the first to comment