ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯ ನಂತರ ಹಂಚಿಕೊಂಡ ಇನ್ಸ್ಟಾಗ್ರಾಮ್ ಫೋಟೋಗಳು ಹೊಸ ದಾಖಲೆ ಬರೆದಿವೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ವಿವಾಹ ಉದಯಪುರದಲ್ಲಿ ಅದ್ದೂರಿಯಾಗಿ ನಡೆಯಿತು. ಇವರ ವಿವಾಹ ಫೋಟೋಗಳಿಗೆ ಅಭಿಮಾನಿಗಳು ಕಾದಿದ್ದರು. ವಿವಾಹವಾದ ದಿನವೇ ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಹಾಗೂ ರಶ್ಮಿಕಾ ಪ್ರತ್ಯೇಕವಾಗಿ ಫೋಟೋ ಪೋಸ್ಟ್ ಮಾಡಿದರು. 24 ಗಂಟೆ ಅವಧಿಯಲ್ಲಿ ಈ ಫೋಟೋಗೆ 40.7 ಮಿಲಿಯನ್ ವೀವ್ಸ್ ಸಿಕ್ಕಿದೆ.
ವಿಜಯ್ ಅವರ ಪೋಸ್ಟ್ಗೆ 18.1 ಮಿಲಿಯನ್ ಹಾಗೂ ರಶ್ಮಿಕಾಗೆ 22.6 ಮಿಲಿಯನ್ಸ್ ಲೈಕ್ಸ್ ಸಿಕ್ಕಿದೆ. ಇವುಗಳನ್ನು ಸೇರಿಸಿದ್ರೆ 40.7 ಮಿಲಿಯನ್ ವೀವ್ಸ್ ಆಗುತ್ತದೆ. ಈ ಮೊದಲು ವಿವಾಹ ಆದ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ದಂಪತಿಯ ಫೋಟೋ 24 ಗಂಟೆಯಲ್ಲಿ 27 ಮಿಲಿಯನ್ ಲೈಕ್ಸ್ ಪಡೆದಿತ್ತು. ಈ ದಾಖಲೆಯನ್ನು ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮುರಿದಿದ್ದಾರೆ.
ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಜೋಡಿ 14 ಮಿಲಿಯನ್ , ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಜೋಡಿ 12.6 ಮಿಲಿಯನ್ , ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೋಡಿ 7.8 ಮಿಲಿಯನ್ ವೀವ್ಸ್ ಪಡೆದಿತ್ತು. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಈ ಎಲ್ಲಾ ದಾಖಲೆಯನ್ನು ಮುರಿದು ಹಾಕಿದ್ದಾರೆ. 24 ಗಂಟೆಯಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ಸೆಲೆಬ್ರಿಟಿ ಜೋಡಿ ಇವರಾಗಿದ್ದಾರೆ.
—-





Be the first to comment