ನಟ ದರ್ಶನ್ & ಗೆಳತಿ ಪವಿತ್ರಾ ಗೌಡ ಸೇರಿ ಉಳಿದ 7 ಆರೋಪಿಗಳಿಗೂ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆಗಿದ್ದು, ಇನ್ನುಳಿದ ಆರೋಪಿಗಳು ಲಕ್ಷ್ಮಣ್, ನಾಗರಾಜು, ಅನುಕುಮಾರ್, ಜಗದೀಶ್, ಪ್ರದೂಷ್ ಗೆ ಷರತ್ತುಬದ್ಧ ಜಾಮೀನು ಮಂಜೂರು ನೀಡಲಾಗಿದೆ.
ಜೂನ್ ತಿಂಗಳಲ್ಲಿ ಪವಿತ್ರಾ ಗೌಡ ಅರೆಸ್ಟ್ ಆಗಿದ್ದರು. ಬಳಿಕ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿಲಾಗಿತ್ತು. ಹಲವು ತಿಂಗಳ ಬಳಿಕ ಅವರಿಗೆ ಜಾಮೀನು ಸಿಕ್ಕಿದೆ.
ಕೊಲೆ ಕೇಸ್ನಲ್ಲಿ ಪವಿತ್ರಾ ಗೌಡ ಅವರಿಗೆ ಕಡೆಗೂ ಬೇಲ್ ಸಿಕ್ಕಿದೆ. 180ಕ್ಕೂ ಅಧಿಕ ದಿನ ದಿನಗಳ ಕಾಲ ಪರಪ್ಪನ ಅಗ್ರಗಾರ ಜೈಲಿನಲ್ಲಿ ಕಾಲ ಕಳೆದಿರುವ ಅವರಿಗೆ ಈಗ ತಾತ್ಕಾಲಿಕ ರಿಲೀಫ್ ಸಿಕ್ಕಂತೆ ಆಗಿದೆ. ಈ ಕೇಸ್ನಲ್ಲಿ ಪವಿತ್ರಾ ಗೌಡ ಎ1 ಆಗಿದ್ದಾರೆ. ಅವರ ಸ್ನೇಹಿತ ದರ್ಶನ್ ಎ2 ಆಗಿದ್ದಾರೆ. ಜಾಮೀನು ಪಡೆಯಲು ಪವಿತ್ರಾ ಗೌಡ ಹಲವು ದಿನಗಳಿಂದ ಪ್ರಯತ್ನಿಸುತ್ತಿದ್ದರು. ಗಂಭೀರ ಪ್ರಕರಣ ಆದ್ದರಿಂದ ಅವರಿಗೆ ಜಾಮೀನು ವಿಳಂಬ ಆಗಿತ್ತು. ಇಂದು ಬೇಲ್ ಸಿಕ್ಕಿರುವುದರಿಂದ ಅವರು ನಿಟ್ಟುಸಿರು ಬಿಟ್ಟಿದ್ದಾರೆ.
Be the first to comment