ಹೇಮಂತ್ ರಾವ್

ಐಫಾ ಅವಾರ್ಡ್ ಬಗ್ಗೆ ಹೇಮಂತ್ ರಾವ್ ಅಸಮಾಧಾನ

ನಿರ್ದೇಶಕ ಹೇಮಂತ್ ರಾವ್ ಅವರು ಅಬುಧಾಬಿಯಲ್ಲಿ ನಡೆದ ಐಫಾ ಅವಾರ್ಡ್ 2024ರ ಸಂಘಟಕರ ವಿರುದ್ಧ  ಅಸಮಾಧಾನ ಹೊರ ಹಾಕಿದ್ದಾರೆ.

ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’ ಸಿನಿಮಾ ನಾಮಿನೇಟ್ ಆಗಿತ್ತು.ಇದಕ್ಕೆ ಅವಾರ್ಡ್ ಸಿಕ್ಕಿಲ್ಲ. ಅವರಿಗೆ ಅವಾರ್ಡ್ ಸಿಕ್ಕಿಲ್ಲ ಎಂದು ತಿಳಿಯಲು  ಸುಮ್ಮನೆ ಮುಂಜಾನೆ 3 ಗಂಟೆವರೆಗೆ ಕಾಯಬೇಕಾಯಿತು ಎಂದು ಬೇಸರ ಹೊರಹಾಕಿದ್ದಾರೆ.

‘ಐಫಾ ಅವಾರ್ಡ್​​ ಅನಾನುಕೂಲತೆಗಳಿಂದ ಕೂಡಿತ್ತು. ನಾನು ಒಂದು ದಶಕಕ್ಕೂ ಹೆಚ್ಚು ಕಾಲ ಇಂಡಸ್ಟ್ರಿಯಲ್ಲಿ ಇದ್ದೇನೆ. ಇದು ನನ್ನ ಮೊದಲ ಅವಾರ್ಡ್ ಫಂಕ್ಷನ್ ಅಲ್ಲ. ಯಾವಾಗಲೂ ವಿಜೇತರನ್ನು ಕಾರ್ಯಕ್ರಮಕ್ಕೆ ಕರೆಸುತ್ತಾರೆ. ಆದರೆ, ನಮಗೆ ಯಾವುದೇ ಪ್ರಶಸ್ತಿ ಇಲ್ಲ ಎಂದು ಅರಿತುಕೊಳ್ಳಲು ನಾನು ಬೆಳಿಗ್ಗೆ 3 ಗಂಟೆಯವರೆಗೆ ಕುಳಿತುಕೊಳ್ಳಬೇಕಾಯಿತು. ನನ್ನ ಸಂಗೀತ ನಿರ್ದೇಶಕ ಚರಣ್ ರಾಜ್ ಅವರಿಗೂ ಅದೇ ಆಯಿತು’ ಎಂದು ಅವರು ಅಸಮಾಧಾನ ಹೊರ ಹಾಕಿದ್ದಾರೆ.

‘ಇದು ನಿಮ್ಮ ಪ್ರಶಸ್ತಿ. ನೀವು ಯಾರಿಗೆ ಬೇಕಾದರೂ ಅದನ್ನು ಕೊಡಬುದು. ಅದು ನಿಮ್ಮ ಆಯ್ಕೆ. ನಾನು ಅನೇಕ ಪ್ರಶಸ್ತಿಗಳನ್ನು ಗೆದ್ದಿಲ್ಲ. ಅವುಗಳು ನನ್ನ ನಿದ್ರೆ ಕಸಿದಿಲ್ಲ. ಹೀಗಾಗಿ ಈ ದ್ರಾಕ್ಷಿಗಳು ಹುಳಿಯಾಗಿರುವುದಿಲ್ಲ. ಎಲ್ಲಾ ನಾಮನಿರ್ದೇಶಕರನ್ನು ಕರೆದು ಒಬ್ಬ ವಿನ್ನರ್ ಘೋಷಿಸಿದರೆ ತೊಂದರೆ ಇರುತ್ತಿರಲಿಲ್ಲ. ಆದರೆ, ನಾಮ ನಿರ್ದೇಶಕರನ್ನು ಇವರು ಉಲ್ಲೇಖಿಸಿಯೂ ಇಲ್ಲ’ ಎಂದು ಅವರು ಬೇಸರ ಹೊರ ಹಾಕಿದ್ದಾರೆ.

‘ನಿಮ್ಮ ವೇದಿಕೆಯಲ್ಲಿ ನೀವು ಹಾಕುವ ಪ್ರತಿಭೆಯ ಮೇಲೆ ನಿಮ್ಮ ಪ್ರಶಸ್ತಿ ಕಾರ್ಯಕ್ರಮಗಳು ನಡೆಯುತ್ತವೆ. ಬೇರೆ ರೀತಿಯಲ್ಲಿ ಅಲ್ಲ. ವಿಶ್ವದ ಅತ್ಯುತ್ತಮ ಕೆಲಸವನ್ನು ಆನಂದಿಸಲು ನನಗೆ ನಿಮ್ಮ ಪ್ರಶಸ್ತಿಯ ಅಗತ್ಯವಿಲ್ಲ. ಮುಂದಿನ ಬಾರಿ ನಿಮ್ಮ ವೇದಿಕೆಗೆ ನಾನು ಬೇಕಾಗಬಹುದು. ನಿಮ್ಮ ಪ್ರಶಸ್ತಿಯನ್ನು ನೀವೇ ಇಟ್ಟುಕೊಳ್ಳಿ’ ಎಂದು ಅವರು ಅಸಮಾಧಾನ ಹೊರ ಹಾಕಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!