ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮಾ ಚೌಧರಿ, ಬರಹಗಾರ ಎಂ.ಎಸ್. ನರಸಿಂಹಮೂರ್ತಿ ಅವರಿಗೆ 2024 ನೇ ಸಾಲಿನ ರಾಜ್ಯೋತ್ಸವದ ಪ್ರಶಸ್ತಿ ಘೋಷಿಸಲಾಗಿದೆ.
ವಿಧ ಕ್ಷೇತ್ರದ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಹೇಮಾ ಚೌಧರಿ ಅವರು ಸಿನಿಮಾರಂಗದಲ್ಲಿ ಸಾಧನೆ ಮಾಡಿದ್ದಾರೆ. ಎಂ.ಎಸ್.ನರಸಿಂಹಮೂರ್ತಿ ಅವರು ಸಿನಿಮಾರಂಗ, ಕಿರುತೆರೆಯಲ್ಲಿ ಬರವಣಿಗೆ ಮೂಲಕ ಹಾಸ್ಯದ ಹೊನಲನ್ನು ಹರಿಸಿದ್ದಾರೆ.
ಹಿರಿಯ ನಟಿ ಹೇಮಾ ಚೌಧರಿ ಅವರು ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹೀಗೆ ಬಹು ಭಾಷೆಯಲ್ಲಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ‘ಪೆಲ್ಲಿ ಕಾನಿ ಪೆಲ್ಲಿ’ ತೆಲುಗು ಚಿತ್ರದ ಮೂಲಕ ನಾಯಕಿ ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಹೇಮಾ ಚೌಧರಿ , ಆ ನಂತರ ಅಕ್ಕ, ತಾಯಿ, ಅಜ್ಜಿ ಪಾತ್ರಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಧಾರವಾಹಿಯಲ್ಲೂ ನಟನೆ ಮಾಡುತ್ತಿದ್ದಾರೆ. ಹೇಮಾ ಚೌಧರಿ 1976 ರಿಂದ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಲೇ ಬಂದಿದ್ದಾರೆ.
ಕನ್ನಡದ ಹಿರಿಯ ಬರಹಗಾರ ಎಂ.ಎಸ್. ನರಸಿಂಹಮೂರ್ತಿ ಅವರು ಹಲವಾರು ಸಿನಿಮಾ ಹಾಗೂ ಧಾರಾವಾಹಿಗಳಿಗೆ ಸಾಹಿತ್ಯ, ಸಂಭಾಷಣೆ, ಚಿತ್ರಕತೆಯನ್ನು ಒದಗಿಸಿದ್ದಾರೆ. ಹಾಸ್ಯ ಕಾರ್ಯಕ್ರಮಗಳನ್ನ ಕೂಡ ಆಯೋಜಿಸುತ್ತಾರೆ. ಕಿರುತೆರೆ ಹಾಗೂ ಚಲನಚಿತ್ರ ರಂಗಕ್ಕೆ ಅವರ ಕೊಡುಗೆ ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.
ರಂಗಭೂಮಿ ಕ್ಷೇತ್ರದ ಸರಸ್ವತಿ ಜುಲೈಕಾ ಬೇಗಂ, ಓಬಳೇಶ್ ಎಚ್ಬಿ, ಭಾಗ್ಯಾ ರವಿ, ಡಿ ರಾಮು, ಎಚ್ ಜನಾರ್ಧನ, ಹನುಮಾನ ದಾಸ ಪವಾರ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Be the first to comment