ಮಳೆಯಿಂದಾಗಿ ಸಂಕಷ್ಟಕ್ಕೀಡಾಗಿರುವ ಬೆಂಗಳೂರಿನ ಜನರಿಗೆ ನಟ ಕಿಚ್ಚ ಸುದೀಪ್ ನೆರವಿನ ಹಸ್ತ ಚಾಚಿದ್ದಾರೆ.
ಮಳೆಯಿಂದಾಗಿ ಮನೆಯೊಳಗೆ ನೀರು ನುಗ್ಗಿ ಅಗತ್ಯ ವಸ್ತುಗಳನ್ನು ಕಳೆದುಕೊಂಡು ಪರದಾಡುತ್ತಿರುವ ಜನರಿಗೆ ಆಹಾರ, ಅಗತ್ಯ ಸಾಮಗ್ರಿ ಒದಗಿಸುವ ಮೂಲಕ ಸುದೀಪ್ ಮಾನವೀಯತೆ ಮೆರೆದಿದ್ದಾರೆ.
ತಮ್ಮ ಕಿಚ್ಚ ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಸುದೀಪ್ ನೆರವು ನೀಡುತ್ತಿದ್ದಾರೆ. ಮಳೆ ಪೀಡಿತ ಪ್ರದೇಶದ ಜನರಿಗಾಗಿ ಸಹಾಯವಾಣಿ ತೆರೆದು ಆಹಾರ, ಔಷಧಿ ವಿತರಿಸುವ ಮೂಲಕ ಮಾನವೀಯತೆ ತೋರಿದ್ದಾರೆ.
ಈ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಳೆಯಿಂದ ಬೆಂಗಳೂರು ನಗರದ ಹಲವು ಕಡೆ ಸಮಸ್ಯೆ ಉಂಟಾಗಿದೆ.
____

Be the first to comment