ಜನಪ್ರಿಯ ಗೀತ ಸಾಹಿತಿ ಹರ್ಷಪ್ರಿಯ ಭದ್ರಾವತಿ ನಿರ್ದೇಶಿಸಿರುವ ‘ಹೆಜ್ಜಾರು’ ಚಿತ್ರ ಜುಲೈ 19ರಂದು ತೆರೆಗೆ ಬರಲಿದೆ.
ಭಗತ್ ಆಳ್ವಾ ಚಿತ್ರದ ನಾಯಕ. ನಾಯಕಿ ಶ್ವೇತ ಲೀಯೊನಿಲ್ಲಾ ಡಿಸೋಜಾ. ಮೊದಲ ಬಾರಿಗೆ ನವೀನ್ ಕೃಷ್ಣ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ಅರುಣಾ ಬಾಲರಾಜ್, ಮುನಿರಾಜ್ ಮೊದಲಾದವರು ಚಿತ್ರದಲ್ಲಿದ್ದಾರೆ.
‘ಲೂಸಿಯಾ’ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಸಂಗೀತ, ಅಮರ್ ಗೌಡ ಕ್ಯಾಮೆರಾ ಕೈಚಳಕವಿದೆ. ಮಂಗಳೂರು, ಉಪ್ಪಿನಂಗಡಿ, ಗುರುವಾಯನಕೆರೆ ಹಾಗೂ ಮಲೆನಾಡಿನಲ್ಲಿ ಚಿತ್ರೀಕರಣ ಮಾಡಲಾಗಿದೆ.
‘ಈ ಹಿಂದೆ ಸಾಕಷ್ಟು ಕಿರುತೆರೆ, ಹಿರಿತೆರೆಗೆ ಗೀತೆಗಳಿಗೆ ಸಾಹಿತ್ಯ ರಚಿಸಿದ್ದೇನೆ. ದಶಕಗಳ ಕಾಲ ಕಿರುತೆರೆಯ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವದಿಂದ ಈ ಚಿತ್ರ ನಿರ್ದೇಶನಕ್ಕಿಳಿದೆ. ಕನ್ನಡದ ಮೊಟ್ಟ ಮೊದಲ ಪ್ಯಾರಲಲ್ ಲೈಫ್ ಸಿನಿಮಾವಿದು. ಥ್ರಿಲ್ಲರ್ ಜಾನರ್‌ನ ಕಥೆ ಹೊಂದಿದೆ’ ಎನ್ನುತ್ತಾರೆ ನಿರ್ದೇಶಕ ಹರ್ಷಪ್ರಿಯ ಭದ್ರಾವತಿ.
ನಿರ್ದೇಶಕ ಕೆ.ಎಸ್.ರಾಮಜಿ ಗಗನ ಎಂಟರ್‌ಪ್ರೈಸಸ್ ಮೂಲಕ ಚಿತ್ರ ನಿರ್ಮಿಸಿದ್ದಾರೆ.
—-

Be the first to comment