ಅಕ್ಟೋಬರ್ 21ಕ್ಕೆ ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ತೆರೆಗೆ ಬರಲಿದೆ.
ಈ ಚಿತ್ರ ಈಗಾಗಲೇ ಟ್ರೈಲರ್, ಹಾಡು, ಟೀಸರ್ ಮೂಲಕ ಹಲವು ದಾಖಲೆಗಳನ್ನ ಬರೆದಿದೆ. ಜಯರಾಜ್ ಆರ್ಭಟ ನೋಡೋದಕ್ಕೆ ಪ್ರೇಕ್ಷಕರು ನಾಳೆಯವರೆಗೆ ಕಾಯಬೇಕಿದೆ.
ಹೆಡ್ಬುಷ್ ಧನಂಜಯ ಅವರ ಡಾಲಿ ಪ್ರೊಡಕ್ಷನ್ ನಿರ್ಮಾಣದ ಎರಡನೇ ಸಿನಿಮಾ. ಈ ಸಿನಿಮಾದ ಕ್ವಾಲಿಟಿ, ಕಂಟೆಂಟ್ ನೋಡಿರುವ ಜೀ ಸ್ಟುಡಿಯೋ ಫಿದಾ ಆಗಿದ್ದು, ಡಾಲಿ ಜಯರಾಜ್ ಕ್ರೇಜ್ ನೋಡಿ ದೊಡ್ಡ ಡೀಲ್ ಮಾಡಿದೆ. ಹೆಡ್ಬುಷ್ ಸಿನಿಮಾದ ಟಿವಿ ರೈಟ್ಸ್, ಡಿಜಿಟಲ್ ಹಕ್ಕು, ಡಬ್ಬಿಂಗ್ ಹಕ್ಕು, ವಿತರಣಾ ಹಕ್ಕು ಎಲ್ಲವೂ ಸೇರಿ ಬರೋಬ್ಬರಿ 22 ಕೋಟಿಗೆ ಖರೀದಿಸಿದೆ.
ಡಾನ್ ಜಯರಾಜ್ ಬಗ್ಗೆ ಬೆಂಗಳೂರು ಅಂಡರ್ವರ್ಲ್ಡ್ ಅಲ್ಲದೇ ಮುಂಬೈ, ಹೈದರಾಬಾದ್, ಚೆನ್ನೈ ಜನರಿಗೂ ಗೊತ್ತಿದೆ. ಹೀಗಾಗಿ ಚಿತ್ರವನ್ನು ದೇಶಾದ್ಯಂತ ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗಿದೆ.
ಬಾಲಿವುಡ್, ಕಾಲಿವುಡ್, ಟಾಲಿವುಡ್ ಸಿನಿಮಾ ವಿಮರ್ಶಕರು ಸಹ ಹೆಡ್ಬುಷ್ ಟ್ರೈಲರ್ ಮೆಚ್ಚಿಕೊಂಡಿದ್ದಾರೆ. ಈಗಾಗಲೇ ಕನ್ನಡದಲ್ಲಿ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ.
ಅಗ್ನಿ ಶ್ರೀಧರ್ ಬರೆದಿರುವ ಕತೆಯನ್ನು ಶೂನ್ಯ ನಿರ್ದೇಶಿಸಿದ್ದಾರೆ. ವಸಿಷ್ಠ ಸಿಂಹ, ಬಾಲುನಾಗೇಂದ್ರ, ಲೂಸ್ ಮಾದ ಯೋಗೇಶ್, ಪ್ರಕಾಶ್ ಬೆಳವಾಡಿ, ಶ್ರುತಿ ಹರಿಹರನ್, ದೇವರಾಜ್, ರಘುಮುಖರ್ಜಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
___

Be the first to comment