ಚಿತ್ರ: ಹಯಗ್ರೀವ
ನಿರ್ದೇಶನ: ರಘು ಕುಮಾರ್
ತಾರಾ ಬಳಗ: ಧನ್ವೀರ್, ಸಂಜನಾ ಆನಂದ್, ರಮೇಶ್ ಭಟ್, ಅಶ್ವಿನಿ ಗೌಡ, ಗಿಲ್ಲಿ, ಸಾಧು ಕೋಕಿಲಾ, ಇತರರು
ರೇಟಿಂಗ್: 3.5
ಮನುಷ್ಯನ ದೇಹಕ್ಕೆ ಪ್ರಾಣಿಯ ಮುಖವನ್ನು ಅಳವಡಿಸಿ ಕೊಲೆ ಮಾಡುವ ಜಾಲವನ್ನು ಭೇದಿಸುವ ಪೋಲಿಸ್ ಅಧಿಕಾರಿಯ ಕಥೆ ಈ ವಾರ ಬಿಡುಗಡೆ ಆಗಿರುವ ‘ ಹಯಗ್ರೀವ ‘ ಚಿತ್ರ.
ಒಂದೇ ರೀತಿಯಲ್ಲಿ ಸರಣಿ ಕೊಲೆಗಳು ನಡೆದಾಗ ಅದನ್ನು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಹಯಗ್ರೀವ ಕಂಡು ಹಿಡಿಯಲು ಮುಂದಾಗುತ್ತಾನೆ. ಕೊಲೆ ಮಾಡುವವರು ಯಾರು? ಈ ಕೊಲೆಗಳಿಗೆ ಕಾರಣ ಏನು ಎನ್ನುವುದನ್ನು ತಿಳಿಯಲು ಚಿತ್ರವನ್ನು ನೋಡಬೇಕಿದೆ.
ಸಸ್ಪೆನ್ಸ್, ಥ್ರಿಲ್ಲರ್ ಮಾದರಿಯ ಈ ಚಿತ್ರದಲ್ಲಿ ಹಯಗ್ರೀವನ ಪಾತ್ರದಲ್ಲಿ ಧನ್ವೀರ್ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಬಹುತೇಕ ಅವರೇ ಕಾಣಿಸಿಕೊಳ್ಳುತ್ತಾರೆ. ನಾಯಕಿ ಆಗಿ ನಟಿಸಿರುವ ಸಂಜನಾ ಆನಂದ್ ಅವರಿಗೆ ಸ್ಕ್ರೀನ್ ಸ್ಪೇಸ್ ಕಡಿಮೆ ಇದೆ. ಆದರೂ ಅವರು ತಮಗೆ ಸಿಕ್ಕಿದ ಕಡಿಮೆ ಅವಧಿಯಲ್ಲಿ ಅವರು ಉತ್ತಮವಾಗಿ ನಟಿಸಿದ್ದಾರೆ.
ಸಿನಿಮಾದ ಶೀರ್ಷಿಕೆಯ ಕಾರಣವನ್ನು ಪುರಾಣದ ಕಥೆಯೊಂದಿಗೆ ನಿರ್ದೇಶಕರು ಆರಂಭದಲ್ಲಿ ಹೇಳಿದ್ದಾರೆ. ಚಿತ್ರದ ಮೊದಲಾರ್ಧ ಇಂಟರೆಸ್ಟಿಂಗ್ ಆಗಿ ಮೂಡಿ ಬಂದಿದೆ. ಸಿನಿಮಾದ ಕೆಲವು ಪಾತ್ರಗಳು ತೆರೆಯ ಮೇಲೆ ತುಂಬಾ ಇಷ್ಟವಾಗುತ್ತವೆ.
ಕ್ರೈಂ, ಸಸ್ಪೆನ್ಸ್ ಚಿತ್ರಗಳನ್ನು ಇಷ್ಟಪಡುವವರಿಗೆ ಹಯಗ್ರೀವ ಖುಷಿ ನೀಡಬಹುದು.





Be the first to comment