ಕೊರೊನಾ ಸೊಂಕಿತರ ಸಂಕಷ್ಟ್ ಪರಿಹರಿಸಲು ಮುಂದಾದ ಭುವನ್​ , ಹರ್ಷಿಕಾ!

ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ ಮತ್ತು ‘ಬಿಗ್ ಬಾಸ್’ ಖ್ಯಾತಿಯ ಭುವನ್‌ ಪೊನ್ನಣ್ಣ ಅವರೀಗ ಕೊರೊನಾ ಮತ್ತು ಕಠಿಣ ಕರ್ಫ್ಯೂದಿಂದ ಸಂಕಷ್ಟದಲ್ಲಿರುವ ಜನರಿಗೆ ಆಹಾರ, ಔಷಧ ಮತ್ತು ಆಮ್ಲಜನಕ ನೀಡುವ ನೈಜ ಬಾಂಧವರಾಗಿ ಕೆಲಸ ಮಾಡುತ್ತಿದ್ದಾರೆ.

ಕೊರೊನಾ ವೈರಸ್ ನ ಎರಡನೇ ಅಲೆಯು ಭಾರತದ ಮೇಲೆ ಅಕ್ಷರಶಃ ಮಾ ರ ಣಾಂತಿ ಕ ಹಲ್ಲೆಯನ್ನೇ ನಡೆಸಿದೆ. ದೇಶದ ಹಲವು ಭಾಗಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದ್ದು ವೈದ್ಯಕೀಯ ಸೌಲಭ್ಯಗಳ ಕೊರತೆ ಹೇಗಿದೆ ಎಂಬುದನ್ನು ಜನರ ಮುಂದೆ ತಂದಿರಿಸಿದ್ದು, ಭಾರತದ ಕ ರಾ ಳ ದಿನಗಳಿಗೆ ಪ್ರಸ್ತುತ ಪರಿಸ್ಥಿತಿ ಸಾಕ್ಷಿಯಾಗಿದೆ. ಸೂಕ್ತ ಚಿಕಿತ್ಸೆ ದೊರೆಯದೆ ಜನರು ನರಳುತ್ತಿದ್ದಾರೆ. ಅಸಂಖ್ಯಾತ ಜನರು ವೈದ್ಯಕೀಯ ನೆರವು, ಆಕ್ಸಿಜನ್, ಬೆಡ್, ವೆಂಟಿಲೇಟರ್ ಗಳು ಹಾಗೂ ಔಷಧಿಗಳಿಗಾಗಿ ನಿರೀಕ್ಷೆ ಮಾಡುತ್ತಿದ್ದಾರೆ. ಅನೇಕರು ಇವ್ಯಾವೂ ದೊರೆಯದೇ ಸಾ ವಿನ ಮನೆಯ ಕದ ತಟ್ಟಿದ್ದಾರೆ. ಇದೆಲ್ಲವನ್ನು ನೋಡಿ, ಜನರ ಈ ಸಂಕಷ್ಟದ ಸಮಯದಲ್ಲಿ ಜನರಿಗೆ ನೆರವನ್ನು ನೀಡಲು ಸಜ್ಜಾಗಿದ್ದಾರೆ ನಟ ಭುವನ್ ಪೊನ್ನಣ್ಣ ಮತ್ತು ನಟಿ ಹರ್ಷಿಕಾ ಪೂಣಚ್ಚ.

ಭುವನಂ ಫೌಂಡೇಶನ್ ನ ಹೆಸರಿನಲ್ಲಿ ಫೀಡ್ ಕರ್ನಾಟಕ ಹೆಸರಿನಲ್ಲಿ ಈಗಾಗಲೇ ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ಅವರ ತಂಡವು ಅಗತ್ಯ ಇರುವವರಿಗೆ ದಿನಸಿ ಕಿಟ್ ಗಳನ್ನು ಪೂರೈಕೆ ಮಾಡುವ ಮಾದರಿ ಕಾರ್ಯವನ್ನು ಮಾಡಿದೆ. ಇದೀಗ ಅದರ ಬೆನ್ನಲ್ಲೇ ಶ್ವಾಸ ಹಾಗೂ ಬಾಂಧವ ಹೆಸರಿನಲ್ಲಿ ಜನರಿಗೆ ಅಗತ್ಯ ಸೌಲಭ್ಯಗಳನ್ನು ನೀಡಲು ಮುಂದಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯದ ಆರೋಗ್ಯ ಸಚಿವರಾದ ಡಾ.ಸುಧಾಕರ್ ಅವರು ಚಾಲನೆ ನೀಡಿಯಾಗಿದೆ. ಶ್ವಾಸ ಯೋಜನೆಯ ಅಡಿಯಲ್ಲಿ ಎರಡು ಬಸ್ ಗಳಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಇಡಲಾಗಿದ್ದು, ಅಗತ್ಯ ಇರುವವರಿಗೆ ಉಚಿತ ಆಕ್ಸಿಜನ್ ಪೂರೈಕೆ ಮಾಡಲಾಗುವುದು.

ಬಾಂಧವ ಕಾರ್ಯಕ್ರಮದ ಮೂಲಕ ಕೊರೊನಾ ಸೋಂಕಿತರಿಗೆ ಉಚಿತ ಊಟ ಹಾಗೂ ಔಷಧಿಗಳನ್ನು ಒದಗಿಸುವ ಕಾರ್ಯವನ್ನು ಮಾಡಲಾಗುವುದು. ಇದಕ್ಕಾಗಿ ಆಟೋ ಸೇವೆಯನ್ನು ಆರಂಭಿಸಲಾಗಿದೆ. ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಅವರು ಜನರ ಸೇವೆಗಾಗಿ, ಜನರಿಗೆ ಸಹಾಯವನ್ನು ನೀಡಲು ಹಮ್ಮಿಕೊಂಡಿರುವ ಈ ಜನ ಪರ ಯೋಜನೆಯ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಗಳು ಹರಿದು ಬರುತ್ತಿವೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!