ಕಿರುಚಿತ್ರ ನಿರ್ಮಾಣಕ್ಕೆ ಮುಂದಾದ ನಟಿ

ಸ್ಯಾಂಡಲ್ ವುಡ್ ನಟಿ ಹರಿಪ್ರಿಯ ನ್ನಡದ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ನಿರ್ಮಾಣ ಸಂಸ್ಥೆಯೊಂದನ್ನು ಆರಂಭಿಸಲು ಮುಂದಾಗಿದ್ದಾರೆ.

ಹರಿಪ್ರಿಯಾ ಕ್ರಿಯೇಶನ್ಸ್ ಎಂಬ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಆರಂಭಿಕವಾಗಿ ಕಿರು ಚಿತ್ರ  ನಿರ್ಮಾಣಕ್ಕೆ ಮುಂದಾಗಿದ್ದಾರೆ.  ಈ ಬಗ್ಗೆ ಪೋಸ್ಟರ್ ಒಂದನ್ನು ಹಂಚಿಕೊಂಡಿರುವ ಹರಿಪ್ರಿಯ, ನಿಮ್ಮ ಬಳಿ ವಿಭಿನ್ನವಾದ ಕಥೆಯಿದ್ದು ಅದಕ್ಕೆ ಯೋಗ್ಯವಾದ ವೇದಿಕೆಯ ಹುಡುಕಾಟದಲ್ಲಿ ನೀವಿದ್ದರೆ, ಕೆಳಕಂಡ ಈ-ಮೇಲ್ ಗೆ ನಿಮ್ಮ ಸ್ಕ್ರಿಪ್ಟ್ ಕಳುಹಿಸಿ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಕಿರುಚಿತ್ರಕ್ಕೆ ಉತ್ತಮ ಸ್ಕ್ರಿಪ್ಟ್ ಹೊಂದಿದ್ದು, ನಿಮ್ಮಲ್ಲಿ ಸಿನಿಮಾ ಮೇಕಿಂಗ್ ಕಲೆ ಇದ್ದರೆ, ನಿಮ್ಮ ಕಥೆಯ ಸಿನೋಪ್ಸಿಸ್ & ಉಳಿದ ವಿವರಗಳನ್ನು haripriyyacreations@gmail.com ಗೆ ಕಳುಹಿಸಿಕೊಡಿ ಎಂದು ಪೋಸ್ಟ್ ಮಾಡಿದ್ದಾರೆ.

ಹರಿಪ್ರಿಯ ನಿರ್ಮಾಣ ಸಂಸ್ಥೆ ಮೂಲಕ  ಹೊಸ ಪ್ರತಿಭಾನ್ವಿತ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಮುಂದಾಗಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!