ಓಟಿಟಿಯಲ್ಲಿ ‘ಹರಿಕಥೆ ಅಲ್ಲ ಗಿರಿಕಥೆ’

ರಿಷಭ್ ಶೆಟ್ಟಿ ಅಭಿನಯದ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರ ಓಟಿಟಿಯಲ್ಲಿ ಬಿಡುಗಡೆಯಾಗಿದೆ.

ಚಿತ್ರವನ್ನು ಪ್ರೇಕ್ಷಕರು ವೂಟ್ ಸೆಲೆಕ್ಟ್‌ನಲ್ಲಿ ವೀಕ್ಷಿಸಬಹುದಾಗಿದೆ. ಚಿತ್ರಕ್ಕೆ ಕರಣ್ ಆನಂತ್ ಹಾಗೂ ಅನಿರುದ್ಧ ಮಹೇಶ್ ಕಥೆ ಬರೆದು ನಿರ್ದೇಶಿಸಿದ್ದಾರೆ. ಸಂದೇಶ್ ನಾಗರಾಜ್ ಚಿತ್ರವನ್ನು ನಿರ್ಮಿಸಿದ್ದಾರೆ.

ಹರಿಕಥೆ ಅಲ್ಲ ಗಿರಿಕಥೆ ಚಿತ್ರದಲ್ಲಿ ರಿಷಭ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊನ್ನವಳ್ಳಿ ಕೃಷ್ಣ, ರಚನಾ ಇಂದರ್, ತಪಸ್ವಿನಿ ಪೂಣಚ್ಚ, ಪ್ರಮೋದ್ ಶೆಟ್ಟಿ ಇತರರು ತಾರಾಂಗಣದಲ್ಲಿದ್ದಾರೆ.

ಮೂವರು ಗಿರಿಗಳ ನೆಲೆಗಟ್ಟಿನಲ್ಲಿ ಈ ಚಿತ್ರವನ್ನು ಹೆಣೆಯಲಾಗಿದೆ. ಒಬ್ಬ ಗಿರಿ ಉದಯೋನ್ಮುಖ ನಿರ್ದೇಶಕನಾದರೆ, ಮತ್ತೊಬ್ಬ ವಿಲನ್ ಹಾಗೂ ಮತ್ತೋರ್ವ ನಟಿ ಗಿರಿಜಾ ಈ ಮೂವರು ಅಕಸ್ಮಿಕವಾಗಿ ಸೇರಿಕೊಳ್ಳುತ್ತಾರೆ. ಈ ಮೂವರು ಸೇರಿಕೊಂಡು ಸಿನಿಮಾ ಮಾಡಲು ನಿರ್ಧರಿಸುತ್ತಾರೆ. ಇದು ಚಿತ್ರದ ಮೂಲ ತಿರುಳು. ಇದೊಂದು ಮನರಂಜನಾ ಸಿನಿಮಾವಾಗಿದೆ.

ಚಿತ್ರದಲ್ಲಿ ರಿಷಭ್ ಶೆಟ್ಟಿ ಹಾಗೂ ಹಿರಿಯ ನಟ ಹೊನ್ನಾವಳಿ ಕೃಷ್ಣ ನಟನೆ ಗಮನ ಸೆಳೆಯುತ್ತದೆ. ಇಬ್ಬರ ನಡುವಿನ ಹಾಸ್ಯ ಸಂಭಾಷಣೆ ನೋಡುಗರನ್ನು ಹಿಡಿದಿಡುತ್ತದೆ. ಹಾಸ್ಯ ಭರಿತ ಸಂಭಾಷಣೆ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತದೆ.

“ನನಗೆ ಸಿಕ್ಕಿದ್ದ ಪಾತ್ರ ತುಂಬಾ ಸವಾಲಿನಿಂದ ಕೂಡಿತ್ತು. ವೂಟ್‌ನಲ್ಲಿ ಚಿತ್ರ ವೀಕ್ಷಿಸಲು ಉತ್ಸುಕನಾಗಿದ್ದೇನೆ. ಜನರ ಪ್ರತಿಕ್ರಿಯೆ ಯಾವ ರೀತಿ ಬರುತ್ತದೆ ಎಂದು ನೋಡಬೇಕು. ಇಂಥ ತಂಡದೊಂದಿಗೆ ಕೆಲಸ ಮಾಡಿದ್ದು ತುಂಬಾ ಖುಷಿ ನೀಡಿತು’ ಎಂದು ವೃಷಬ್ ಶೆಟ್ಟಿ ಹೇಳಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!