ಬೆಂಗಳೂರು: ಜಿಎನ್ ಎ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಉದ್ಘಾಟನೆಯನ್ನು ಮಾಜಿ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಉದ್ಘಾಟನೆ ಮಾಡಿ ಮಾತನಾಡಿದರು.
ತಂತ್ರಜ್ಞಾನವು ಅತ್ಯಂತ ಪ್ರಬಲವಾದ ಮಾಧ್ಯಮವಾಗಿದೆ. ಈ ತಂತ್ರಜ್ಞಾನದ ಮೂಲಕ ರಿಮೋಟ್ ಏರಿಯಾದಲ್ಲಿ ವಾಸಿಸುವವರಿಗೆ ಶೀಘ್ರದಲ್ಲಿಯೇ ಸಂಪರ್ಕಿಸಲು ಜಿ ಎನ್ ಎ ವೈ ಫೈ ಸಹಕಾರಿಯಾಗಿದೆ ಎಂದು ಮಾಜಿ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಂತ್ರಜ್ಞಾನವು ಅತ್ಯಂತ ಪ್ರಬಲವಾದ ಮಾಧ್ಯಮವಾಗಿದೆ. ಈ ತಂತ್ರಜ್ಞಾನದ ಮೂಲಕ ರಿಮೋಟ್ ಏರಿಯಾದಲ್ಲಿರುವವರಿಗೆ ಶೀಘ್ರದಲ್ಲಿಯೇ ಸಂಪರ್ಕಿಸಲು ಜಿಎನ್ ಎ ವೈಫೈ ಸಹಕಾರಿಯಾಗಿದೆಂದು ತಿಳಿಸಿದರು.
ಜಪಾನ್ ಮೂಲದ ಜಿಎನ್ ಎ ಕಂಪನಿಯು ಗ್ರಾಮೀಣ ಪ್ರದೇಶದಲ್ಲಿನ ಪ್ರವಾಸಿ ತಾಣಗಳಲ್ಲಿ ನೆಟ್ವರ್ಕ್ ಸೌಲಭ್ಯವನ್ನು ಒದಗಿಸಲು ಬಿಎಸ್ ಎನ್ ಎಲ್ ನೊಂದಿಗೆ ಪಾಲುದಾರಿಕೆ ಮಾಡಿಕೊಂಡು ವೈಫೈ ಸೌಲಭ್ಯವನ್ನು ಒದಗಿಸಲಿದೆ ಎಂದರು.
ಜಿಎನ್ ಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್ ಪ್ರಸಾದ್ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಪ್ರವಾಸಿ ತಾಣಗಳಲ್ಲಿ ನೆಟ್ವರ್ಕ್ ದೊರಕದ ಕಾರಣ ಪ್ರವಾಸಿಗರಿಗೆ ಸಂಕಷ್ಟ ಎದುರಾಗುತ್ತದೆ. ಆ ನಿಟ್ಟಿನಲ್ಲಿ ವೈಫೈ ಸೌಲಭ್ಯವನ್ನು ಕಲ್ಪಿಸುತ್ತಿದೇವೆ. ಸದ್ಯ ಸಹಸ್ರಲಿಂಗ ಹಾಗೂ ಯಾಣದಲ್ಲಿ ವೈಫೈ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ, ಮುಂದಿನ ದಿನದಲ್ಲಿ ದೇಶದಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.





Be the first to comment