ಗೆಳೆಯರೊಂದಿಗೆ ಮಲಗುವಂತೆ ಹಿಂಸಿಸುತ್ತಿದ್ದ ಸ್ಟಾರ್ ನಟಿ ಪತಿ

ಬಾಲಿವುಡ್ ಸ್ಟಾರ್ ನಟಿ ಕರಿಷ್ಮಾ ಕಪೂರ್, ಮಾಜಿ  ಪತಿ ಸಂಜಯ್ ಕಪೂರ್ ತಮ್ಮ ಗೆಳೆಯರೊಟ್ಟಿಗೆ ಮಲಗುವಂತೆ ಪೀಡಿಸುತ್ತಿದ್ದ ಎಂದಿದ್ದಾರೆ.

ವಿಚ್ಛೇದನದ ಬಳಿಕ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಕರಿಷ್ಮಾ ಸಿನಿಮಾ,  ರಿಯಾಲಿಟಿ ಶೋನಲ್ಲೂ ತೊಡಗಿಕೊಂಡಿದ್ದಾರೆ. ತಮ್ಮ ದಾಂಪತ್ಯದ ಬಗ್ಗೆ ಕರಿಷ್ಮಾ ಹಿಂದೊಮ್ಮೆ ಮಾತನಾಡಿದ್ದರು. ಅದೀಗ ಮತ್ತೆ ಸುದ್ದಿಯಾಗಿದೆ.

ನಟಿಯಾಗಿದ್ದ ಕಾಲದಲ್ಲಿ ಚಿನ್ನದಂಥ ದಿನಗಳನ್ನು ನೋಡಿದ್ದ ಕರಿಷ್ಮಾ ಕಪೂರ್ ಮದುವೆಯಾದ ಬಳಿಕ ನರಕವನ್ನೇ ನೋಡಿದ್ದರು. ಕರೀಷ್ಮಾ, ಸಂಜಯ್ ಕಪೂರ್ ಎಂಬುವರನ್ನು 2003 ರಲ್ಲಿ ವಿವಾಹವಾಗಿದ್ದರು.  ಕರಿಷ್ಮಾಗೆ ಪತಿ ಸಂಜಯ್ ಕಪೂರ್ ತಮ್ಮ ಗೆಳೆಯರೊಟ್ಟಿಗೆ ಮಲಗುವಂತೆ ಪೀಡಿಸುತ್ತಿದ್ದ. ಕರೀನಾರನ್ನು ತನ್ನ ಗೆಳೆಯರಿಗೆ ಹರಾಜು ಹಾಕಿದ್ದ. ಕರಿಷ್ಮಾ ವಿರೋಧಿಸಿದಾಗ ಅವರ ಮೇಲೆ ಹಲ್ಲೆ ಸಹ ಮಾಡುತ್ತಿದ್ದರಂತೆ.

ಕರೀಷ್ಮಾ ಕಪೂರ್, ಗರ್ಭಿಣಿ ಆಗಿದ್ದಾಗ ಅವರ ಅತ್ತೆ ಕರಿಷ್ಮಾಗೆ ಬಟ್ಟೆಯೊಂದನ್ನು ನೀಡಿದ್ದರಂತೆ. ಆದರೆ ಆ ಬಟ್ಟೆ ಚಿಕ್ಕದಾದ ಕಾರಣ ಧರಿಸಲು ಆಗಿರಲಿಲ್ಲ. ಅದಕ್ಕೆ ಜಗಳ ಮಾಡಿದ್ದ ಸಂಜಯ್  ತಾಯಿಯ ಮೂಲಕ ಕರಿಷ್ಮಾಗೆ ಹೊಡೆಸಿದ್ದರಂತೆ. ಈ ಬಗ್ಗೆ ತಾವು ಮುಂಬೈ ಪೊಲೀಸರಿಗೆ ದೂರು ನೀಡಿದ್ದಾಗಿ ಕರಿಷ್ಮಾ ಕಪೂರ್ ಹೇಳಿಕೊಂಡಿದ್ದಾರೆ.

ಕರಿಷ್ಮಾ, ತಮ್ಮ ವಿಚ್ಛೇಧನ ಅರ್ಜಿಯಲ್ಲಿಯೂ ಈ ಎಲ್ಲ ಅಂಶಗಳನ್ನು ನಮೂದಿಸಿದ್ದಾರೆ. ಕರಿಷ್ಮಾರಿಂದ ದೂರು ಸ್ವೀಕರಿಸಿದ್ದ ಪೊಲೀಸ್ ಅಧಿಕಾರಿ, ನ್ಯಾಯಾಲಯದಲ್ಲಿ ಸಂಜಯ್ ವಿರುದ್ಧ ಹೇಳಿಕೆ ದಾಖಲಿಸಿದ್ದರು. 2014ರಲ್ಲಿ ಇವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚ್ಛೇದನದ ಬಳಿಕ ಕರಿಷ್ಮಾ ಮತ್ತೆ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ.

ಈ ಮುನ್ನಕರೀನಾ ಕಪೂರ್ ಹಾಗೂ ಅಭಿಷೇಕ್ ಬಚ್ಚನ್ ಪ್ರೀತಿಯಲ್ಲಿದ್ದರು. ಇಬ್ಬರಿಗೂ ನಿಶ್ಚಿತಾರ್ಥ  ನಡೆದಿತ್ತು. ಆದರೆ ಆ ಬಳಿಕ ನಿಶ್ಚಿತಾರ್ಥ ಮುರಿದು ಬಿತ್ತು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!