ಹಾರರ್ ಥ್ರಿಲ್ಲರ್ ಆರೋಹಣ

ಸುಶೀಲ್ ಕಮಾರ್ ಅವರು ನಿರ್ಮಿಸಿ, ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಆರೋಹಣ. ಇದೊಂದು ಪಕ್ಕಾ ಹಳ್ಳಿ ಸೊಗಡಿನಲ್ಲಿ ನಡೆಯುವಂಥ ಪ್ರೇಮ ಕಥಯಾಗಿದ್ದು ಶ್ರೀಧರ್ ಶೆಟ್ಟಿ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಹಾಗು ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಮೂರು ಹಾಡುಗಳು ಹಾಗೂ ನಾಲ್ಕು ಬಿಟ್ ಗೀತೆಗಳನ್ನೂಳಗೊಂಡಿರುವ ಆರೋಹಣ ಚಿತ್ರಕ್ಕೆ ಆರ್.ಎನ್.ಉತ್ತಮ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಒಬ್ಬ ಮನುಷ್ಯ ಜೀವದಲ್ಲಿ ಬರುವಂಥ ಸಮಸ್ಯೆಗಳು ಆರೋಹಣದಂತೆ ಕಂಟಿನ್ಯೂ ಆಗುತ್ತಲೇ ಹೋಗುತ್ತದೆ. ಒಬ್ಬ ತಂದೆಯನ್ನು ಮಗನಾದವನು ಹೇಗೆಲ್ಲಾ ನೋಡಿಕೊಳ್ಳಬಹುದು ಎಂದು ಈ ಚಿತ್ರದಲ್ಲಿ ಭಾವನಾತ್ಮಕ ಸನ್ನಿವೇಶಗಳ ಜೊತೆಗೆ ನಿರೂಪಿಸಲಾಗಿದೆ ಇದೆಲ್ಲದರ ಜೊತೆಗೆ ಒಂದು ಹಾರರ್ ಹಾಗು ಥ್ರಿಲ್ಲರ್ ಕಂಟೆಂಟೆ ಕೂಡ ಈ ಚಿತ್ರದಲ್ಲಿರುವುದು ವಿಶೇಷ ಮೊನ್ನೆ ನಡೆದ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕ ನಟ ಹಾಗು ನಿರ್ಮಾಪಕ ಸುಶೀಲ್ ಕುಮಾರ್, ನಾಯಕಿ ಪ್ರೀತಿ ಮಡಿಕೇರಿ ಹಾಗು ನಿರ್ದೇಶಕ ಶ್ರೀಧರ್ ಶಟ್ಟಿ ಕೂಡ ಹಾಜರಿದ್ದು ಚಿತ್ರದ ಬಗ್ಗೆ ಹೇಳಿಕೊಂಡರು ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ `ಎ’ ಪ್ರಮಾಣ ಪತ್ರ ನೀಡಿದ್ದು ಇದನ್ನು ತಿರಸ್ಕರಿಸಿದ ನಿರ್ಮಾಪಕ ಸುಶೀಲ್ ಕುಮಾರ್ ಟ್ರಬ್ಯೂನಲ್ ಮೊರೆ ಹೋಗಿದ್ದರು ಹೀಗೆ ಚಿತ್ರ ಆರಂಭಸಿದಾಗಿನಿಂದಲೂ ಸತತ ಹೋರಾಟ ಮಾಡಿಕೊಂಡೇ ಬಂದಿದ್ದು ಈಗ ರಿಲೀಸ್ ಹಂತಕ್ಕೆ ಚಿತ್ರವನ್ನು ತೆಗೆದುಕೊಂಡು ಬಂದಿರುವುದಾಗಿ ಹೇಳಿÀದ್ದಾರೆ ಪ್ರತಿಯೊಬ್ಬ ಮನುಷ್ಯನಲ್ಲೂ ಒಂದು ಕೊರತೆ ಇದ್ದೇ ಇರುತ್ತದೆ ಅದನ್ನು ಹೊರಗೆ ತೋರಿಸಿಕೊಳ್ಳದೆ ಇಟ್ಟುಕೊಂಡರೆ ಏನೆಲ್ಲ ಆಗಬಹುದು ಎಂದು ಈ ಚಿತ್ರ ಹೇಳುತ್ತದೆ.
ನಂತರ ನಿರ್ದೇಶಕರು ಮಾತನಾಡಿ ಆರಂಭದಲ್ಲಿ ಒಂದು ಲವ್ ಸಬ್ಜಕ್ಟ್ ಅಂತ ಆರಂಭಿಸಿದ್ದೆವು ನಂತರ ಅದು ಥ್ರಿಲ್ಲರ್ ಹಾಗು ಹಾರರ್ ಕಥಯಾಗಿ ರೂಪುಗೊಂಡಿತು. ಬಿಡದಿ, ರಾಮನಗರ ಹಾಗು ಸಕಲೇಶಪುರದ ಸುತ್ತಮುತ್ತ ಈ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದÀಲ್ಲಿ ಬರುವ 4 ಬಿಟ್ ಹಾಡುಗಳನ್ನು ನಟ, ಗಾಯಕ ರವಿಶಂಕರ ಗೌಡ ಹಾಡಿದ್ದಾರೆ. ಆಂರಭಲ್ಲಿ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸುಶೀಲ್ ಕುಮಾರ್ ಸದ್ಯ ಸಾಫ್ಟವೇರ್ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಕಡೆ ಡಬಲ್ ಮೀನಿಂಗ್ ಡೈಲಾಗ್‍ಗಳು ಹಾಗು ಮರ್ಡರ್ ಸೀನ್ ಇರುವುದರಿಂದ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರ ಕೊಟ್ಟಿರುವುದಾಗಿ ನಿರ್ಮಾಪಕ ಸುಶೀಲ್ ಕುಮಾರ್ ಹೇಳಿದರು.

This Article Has 1 Comment
  1. Pingback: Tow Truck Austin

Leave a Reply

Your email address will not be published. Required fields are marked *

Translate »
error: Content is protected !!