ಚಿತ್ರತಂಡದವರ ಹ್ಯಾಂಗೋವರ್ ಈಗ ಚಿತ್ರರಸಿಕರಿಗೂ ಹ್ಯಾಂಗೋವರ್ ಆಗುವ ಸಮಯ ಬಂದಿದೆ… ಮುಂದಿನ ತಿಂಗಳು ಜೂನಲ್ಲಿ ಹ್ಯಾಂಗೋವರ್ ಎಂಬ ಕನ್ನಡ ಚಿತ್ರ ತೆರೆಕಾಣಲಿದೆ.
ಈ ಸಮಾಜ ಮತ್ತು ತಂದೆ-ತಾಯಿ ನಮಗೆ ಕೊಟ್ಟ ಫ್ರೀಡಮ್ಮನ್ನು ದುರುಪಯೋಗ ಪಡಿಸಿಕೊಳ್ಳದೇ ಯವ್ವನವನ್ನು ಜವಾಬ್ದಾರಿಯುತವಾಗಿ ಅನುಭವಿಸಿ ಎಂದು ಯುವಕರಿಗೆ ಒಂದು ಚಿಕ್ಕ ಸಂದೇಶದೊಂದಿಗೆ ಸಸ್ಪೆನ್ಸ್-ಥ್ರಿಲ್ಲರ್‍ಚಿತ್ರವಾಗಿ ಮೂಡಿಬಂದಿದೆ.
ಇಲ್ಲಿ ಮೂವರು ಹುಡುಗರು ಮತ್ತು ಮೂವರು ಹುಡುಗಿಯರು ಒಂದು ಕಾಕ್ಟೇಲ್ ಪಾರ್ಟಿಯೊಂದನ್ನು ಮುಗಿಸಿ ನಾಕಯನ ಫಾಮಂಹೌಸ್ಗೆ ಬಂದು ಮಲಗುವರು, ಬೆಳಗ್ಗೆ ಎದ್ದಾಗ ಒಂದು ಹುಡುಗಿಯ ಕೊಲೆಯಾಗಿರುವುದು. ಈ ಕೊಲೆಯ ಸುತ್ತ ನಡೆಯುವ ಕಥೆಯೇ ಹ್ಯಾಂಗೋವರ್. ಕುಡಿದ ಹ್ಯಾಂಗೋವರಲ್ಲಿ ಮಾಡಿದ ಕಿತಾಪತಿಯನ್ನು ರಿವರ್ಸ್ ಸ್ರ್ಕೀನ್‍ಪ್ಲೇಯಲ್ಲಿ ಹೇಳಲು ಹೊರಟಿದ್ದಾರೆ ನಿರ್ದೇಶಕ ವಿಠಲ್ ಭಟ್. ಚಿತ್ರದ ಕೊನೆಯ ಹಂತದವರೆಗೂ ಯಾರು ಕೊಲೆ ಮಾಡಿರಬಹುದು? ಎಂಬ ಕುತೂಹಲವು ಚಿತ್ರವೀಕ್ಷಕರಿಗೆ ಒಂದು ಹೊಸಾ ಅನುಭವ ನೀಡುತ್ತದೆ ಎಂಬುದು ಚಿತ್ರತಂಡದ ಭರವಸೆ. ನಾನೇ ರುಕ್ಕು.. ಕೊಡ್ತೀನಿ ಒಂದು ಲುಕ್ಕು.. ಎಂದು ಹೇಳುತ್ತಾ ಹೆಜ್ಜೆ ಹಾಕಿದ ನೀತು ಶೇಟ್ಟಿಯ ಡಾನ್ಸ್ ನಂಬರ್ ಮತ್ತು ದಿನವೂ ಒಂದು ರೋಚಕ.. ಹುಡುಕೋ ಒಳ್ಳೆ ಕೌತಕ.. ಎಂಬ ಫ್ರೆಂಡ್ಸ್‍ಶಿಪ್ ಹಾಡುಗಳು ಸಂಗೀತ ನಿರ್ದೇಶಕ ವೀರ್ ಸಮರ್ಥ್‍ರವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದೆ. ಚೇತನ್ ಬಹದ್ದೂರ್ ಮತ್ತು ಕೃಷ್ಣ ರಿಟ್ಟಿರವರ ಸಾಹಿತ್ಯವಿದೆ.
ಭರತ್, ರಾಜ್, ಚಿರಾಗ್, ಮಹತಿ ಭಿಕ್ಷು, ಸಹನ್ ಮೊನ್ನಮ್ಮ, ನಂದಿನಿ ನಟರಾಜ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದು ಶಫಿ, ಅಶ್ವಥ್ ನೀನಾಸಂ, ಕೆ.ಯಸ್.ಶ್ರೀಧರ್, ಯತಿರಾಜ್, ಕೈಲಾಶ್ ಇನ್ನುಳಿದ ಪಾತ್ರಗಳನ್ನು ಅಭಿನಯಿಸಿದ್ದಾರೆ.
ಸುಮಾರು 32ದಿನಗಳ ಚಿತ್ರೀಕರಣ ಮೈಸೂರಿನ ಸುತ್ತ ಮುತ್ತಲು ಮತ್ತು ಬೆಂಗಳೂರು-ಊಟಿಯಲ್ಲಿ ನಡೆದಿದೆ. ರಮಣೀ ರೀಲ್ಸ್ ಸಂಸ್ಥೆಯ ಮೂಲಕ ರಾಕೇಶ್ ಅವರು ನಿರ್ಮಾಣ ಮಾಡಿದ್ದು ಗಣೇಶ್ ರಾಣಿಬೆನ್ನೂರು ಅವರ ಸಂಭಾಷಣೆ ಚಿತ್ರದ ಮತ್ತೊಂದು ಹೈಲೆಟ್.
Be the first to comment