ಅಂದುಒಂದು ಕಾಲವಿತ್ತು. ಹಳ್ಳಿ, ಪಟ್ಟಣದಲ್ಲಿ ಮದುವೆ ಶುಭ ಸಮಾರಂಭವನ್ನು ಸಂಭ್ರಮ, ಸಡಗರದಿಂದ ಮಾಡುತ್ತಿದ್ದರು. ತಂತ್ರಜ್ಘಾನ ಬೆಳೆದಂತೆ ಜನರುಅದಕ್ಕೆ ಮಾರುಹೋಗಿ ಆಚರಣೆಗಳಲ್ಲಿ ಆಸಕ್ತಿ ತೋರಿಸುತ್ತಿಲ್ಲ. 43 ವರ್ಷಗಳ ಕೆಳಗೆ ಹಳ್ಳಿಯಲ್ಲಿ ಮೂರು ದಿನಗಳ ಕಾಲ ಯಾವರೀತಿಇಂತಹ ಹಬ್ವವನ್ನುಆಚರಿಸುತ್ತಿದ್ದರುಎಂಬುದಾಗಿ ‘ಮದ್ವೆ’ಎನ್ನುವಚಿತ್ರದಲ್ಲಿ ಸಂಪೂರ್ಣವಾಗಿತೋರಿಸುವ ಪ್ರಯತ್ನ ಮಾಡಲಾಗಿದೆ. ಸಂಪ್ರದಾಯದಂತೆ ಚಪ್ಪರ, ನೀರು ಹಾಕುವ ಶಾಸ್ತ್ರ, ಸೋಬಾನೆ ಪದಗಳು, ಗಂಡು-ಹೆಣ್ಣು ಕಲ್ಯಾಣ ಮಂಟಪಕ್ಕೆ ಬರುವುದು, ತಾಳಿ ಕಟ್ಟುವುದು, ಪೂಜೆ, ಹುಡುಗಿಯನ್ನುಗಂಡನ ಮನೆಗೆ ಕಳುಹಿಸಿಕೊಡುವುದು. ಇವೆಲ್ಲವು ಸನ್ನಿವೇಶಗಳ ಮೂಲಕ ಎಲ್ಲವನ್ನು ಹಳ್ಳಿ ಸೊಗಡಿನಂತೆಚಿತ್ರದಲ್ಲಿತೋರಿಸಲಾಗಿದೆ. ಇದಕ್ಕಾಗಿ ನಿರ್ದೇಶಕರು14 ತಿಂಗಳು ಅಧ್ಯಯನ ನಡೆಸಿದ್ದು ಅಲ್ಲದೆ, ಹಳ್ಳಿಗಳಲ್ಲಿ ನಡೆಯುವ ಮದುವೆಯನ್ನು ಸೆರೆಹಿಡಿದುಕೊಂಡುಅದರಲ್ಲಿರುವಸೂಕ್ಷತೆಅಂಶಗಳನ್ನು ಹೆಕ್ಕಿಕೊಂಡುಚಿತ್ರಕತೆಗೆ ಬಳಸಿಕೊಂಡಿದ್ದಾರೆ.
ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಹಿಂದೂಕೃಷ್ಣ ನಿರ್ದೇಶಕನಾಗಿಗುರುತಿಸಿಕೊಂಡಿದ್ದಾರೆ. ಹಾಡುಗಳಿಗೆ ಅವಶ್ಯಕತೆಇಲ್ಲದಕಾರಣಅಲ್ಲಲ್ಲಿ ಬರುವ ಸೋಬಾನ ಪದಗಳಿಗೆ ಪ್ರಶಾಂತ್ಆರಾಧ್ಯರಾಗ ಒದಗಿಸಿ ಸಿಂಕ್ ಸೌಂಡ್ನಲ್ಲಿಧ್ವನಿಮುದ್ರಣ ಮಾಡಿರುವುದು ವಿಶೇಷ. ಶ್ರೀರಂಗಪಟ್ಟಣದ ರೈತ ಸಿ.ಬಿ.ಪರಮೇಶ್ಕತೆ ಬರೆದು ಮಾತಾಪಿತುೃಎಂಟರ್ಟೈನ್ ಮೆಂಟ್ಸ್ ಮೂಲಕ ನಿರ್ಮಾಣ ಮಾಡಿದ್ದಾರೆ. ಇವರ ಪತ್ನಿ ಪುಷ್ಟಪರಮೇಶ್ ಸಹನಿರ್ಮಾಪಕರು.ಛಾಯಗ್ರಹಣಅಮರನಾಥ್, ಸಂಕಲನ ವರುಣ್ವಸಿಷ್ಟ ನಿರ್ವಹಿಸಿದ್ದಾರೆ. ಮಂಡ್ಯಾ ಮತ್ತು ಚಿಕ್ಕಹಂಚಿನಹಳ್ಳಿಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಿಐಸಿಎಫ್ಎಫ್ 2018 ಮತ್ತುಕಲ್ಕತ್ತಾಚಿತ್ರ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆಯಂತೆ.
ಎಲ್ಲಾ ಪಾತ್ರಗಳಿಗೂ ಸಮನಾದತೂಕಇರುವುದರಿಂದ ನಾಯಕ-ನಾಯಕಿಇರುವುದಿಲ್ಲ. ವರನಾಗಿ ಮಂಜುನಾಥ್ಆರ್ಯ, ಮೈಸೂರಿನಆರೋಹಿಗೌಡ ಮೇಕಪ್ಇಲ್ಲದೆ ವಧುವಾಗಿ ಕಾಣಿಸಿಕೊಂಡಿದ್ದಾರೆ. ಹುಡುಗಿಯಅಮ್ಮಯಶೋಧ, ಅಣ್ಣಮಂಜುಮಾರ್ಧವ್, ತಮ್ಮಧನು, ಬಜಾರಿಅತ್ತೆಪಾತ್ರದಲ್ಲಿರಂಗಭೂಮಿ ನಟಿ ನಾಗರತ್ನಮ್ಮ, ಪದಗಳನ್ನು ಹೇಳುವ ಪುಟ್ಟತಾಯಮ್ಮಅಜ್ಜಿಯಾಗಿ ನಟನೆಇದೆ. ಸೆನ್ಸಾರ್ನಿಂದ ಪ್ರಶಂಸೆಗೆ ಒಳಗಾಗಿರುವ ಚಿತ್ರವನ್ನು ವಿತರಕ ನವರತ್ನಪ್ರಸಾದ್ಜನವರಿ ತಿಂಗಳಲ್ಲಿ ಮದುವೆಯನ್ನುತೋರಿಸಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

Be the first to comment