ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ ಸಿರಿಕನ್ನಡ

ಪ್ರಸ್ತುತ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳು ಆಮೆ ಹೆಜ್ಜೆ ಇಡುವಂತೆ ಸಾಗುತ್ತಿರುವುದರಿಂದ ಸಾವಿರ ಕಂತುಗಳನ್ನು ತಲುಪುತ್ತಿವೆ. ಇದರಿಂದ ವೀಕ್ಷಕರು ಮನಸ್ಸು ಬದಲಾಯಿಸಿ ಬೇರೆ ಛಾನಲ್ ಕಡೆ ಆಸಕ್ತಿ ಹೊಂದಿರುತ್ತಾರೆ. ಇದನ್ನು ಅರಿತ ’ಸಿರಿ ಕನ್ನಡ ವಾಹಿನಿ’ಯು ಯಾವುದೇ ಸಂಚಿಕೆಗಳು ಇರಲಿ, ಗರಿಷ್ಟ 65ಕ್ಕೆ ನಿಲ್ಲಿಸಬೇಕೆಂದು ನಿರ್ಣಯ ತೆಗೆದುಕೊಂಡಂತೆ, ಸಪಲರಾಗಿದ್ದಾರೆ. ಇದರ ಪ್ರತಿಫಲವಾಗಿ ಶಾರ್ಟ್ ಅಂಡ್ ಸ್ವೀಟ್ ಎನ್ನುವಂತೆ ರಿಯಾಲಿಟಿ ಶೋ, ಅಧ್ಯಾತ್ನಿಕ ಹೂರತುಪಡಿಸಿ, ಒಂದಷ್ಟು ಹೊಸ ರೀತಿಯ ವಿನೂತನ ಧಾರವಾಹಿ, ಹೀಗೆ ಎಲ್ಲರೂ ಇಷ್ಟಪಡುವಂತಹ ಎಂಟು ಕಾರ್ಯಕ್ರಮಗಳನ್ನು ಸಿದ್ದಪಡಿಸಿದೆ.

ಮೊದಲನೆಯದಾಗಿ ಮಠ ಮಾನ್ಯಗಳ ದರ್ಶನ ನೀಡುವ ’ಧರ್ಮ ದರ್ಶನ’ ಕಾರ್ಯಕ್ರಮವು ಬೆಳಿಗ್ಗೆ 7.30ಕ್ಕೆ ಪ್ರಸಾರವಾಗಲಿದೆ. ಎರಡನೆಯದು 12.30ರಲ್ಲಿ ’ಸಿರಿಭೋಜನ’ ನಟಿ ಸನಾತನಿ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಹೆಸರು ಮಾಡಿರುವ ಶೆಫ್‌ಗಳು ಭಾಗವಹಿಸಲಿದ್ದು, ಉತ್ತಮ ಆರೋಗ್ಯ ನಿರ್ವಹಣೆಗಾಗಿ ಆಯುರ್ವೇದ ಅಡುಗೆಯ ಅಂಶಗಳನ್ನು ತಿಳಿಸಲಿರುವರು. ಮೂರನೆಯದು ನಟಿ,ನಿರೂಪಕಿ ರಜನಿ ನಡೆಸಿಕೊಡುವ ’ನಾರಿಗೊಂದು ಸೀರೆ’ ಮಧ್ಯಾಹ್ನ 1.30ಕ್ಕೆ ಹೊಸ ರೂಪದಲ್ಲಿ ಬರಲಿದೆ. ನಾಲ್ಕನೆಯದರಲ್ಲಿ ಉತ್ತರ ಕರ್ನಾಟಕದ ಸೊಗಡು ಸಾರುವ ’ಧಾರವಾಡದಾಗೊಂದು ಲವ್ ಸ್ಟೋರಿ’ ಕಂತುಗಳನ್ನು ಪೃಥ್ವಿರಾಜ ಕುಲಕರ್ಣಿ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲಿನ ಸ್ಥಳೀಯ ಕಲಾವಿದರುಗಳಿಗೆ ಅವಕಾಶ ಮಾಡಿಕೊಟ್ಟಿರುವುದು ವಿಶೇಷ. ಸದರಿ ಎಪಿಸೋಡ್‌ನ್ನು ರಾತ್ರಿ 7 ಗಂಟೆಗೆ ವೀಕ್ಷಿಸಬಹುದು.

ಐದನೆಯದರಲ್ಲಿ ನಟ,ನಿರ್ಮಾಪಕ, ನಿರ್ದೇಶಕ ಮತ್ತು ’ನನ್ ಮಗಂದ್’ ಖ್ಯಾತಿಯ ಹುಚ್ಚ ವೆಂಕಟ್ ನಿರೂಪಕರಾಗಿರುವ ’ಲೈಫು ಓಕೆ’ ರಿಯಾಲಿಟಿ ಶೋ ರಾತ್ರಿ 7.30ಕ್ಕೆ ಬರಲಿದ್ದು, ಕಿರುತೆರೆ ಕಲಾವಿದ ಮುರಳಿ ಮುನ್ನಡೆಸಲಿರುವರು. ಆರನೆಯದು ’ಕಲ್ಪನ’ ಹಾರರ್ ಪ್ರೀತಿ ಕತೆ ಹೊಂದಿರುವ ಧಾರವಾಹಿಯನ್ನು ಸುಶೀಲ್‌ಮೊಕಾಶಿ ನಿರ್ದೇಶಿಸಲಿದ್ದು, ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ. ಏಳರಲ್ಲಿ ಹಿರಿಯ ನಟಿ ಅಪರ್ಣ ನಿರೂಪಣೆಯಲ್ಲಿ ’ಸಿಂಪಲ್ಲಾಗ್ ಒಂದ್ ಸಿನಿಮಾ ಕಥೆ’ ರಾತ್ರಿ 9ಕ್ಕೆ ನೋಡಬಹುದು. ಏಂಟು ಹಾಗೂ ಕೊನೆಯದರಲ್ಲಿ ವಿಸ್ಮಯ, ವಿಚಿತ್ರ ಮತ್ತು ವಿಶೇಷ ಸಂಗತಿಗಳು ಹೇಳುವ ’ನಿಗೂಢ ರಹಸ್ಯ’ ಕಾರ್ಯಕ್ರಮವನ್ನು ಆರ್‌ಜೆ ಮತ್ತು ವಿಜಿಯಾದ ನಿಖಿಲ್‌ಸ್ವಾಮಿ ಸಾರಥ್ಯದಲ್ಲಿ ಮೂಡಿಬರಲಿದ್ದು, ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.

ಎಲ್ಲವೂ ಸೋಮವಾರದಿಂದ ಶುಕ್ರವಾರವರೆಗೆ ಇದೇ ಏಪ್ರಿಲ್ 19ರಿಂದ ವೀಕ್ಷಕರಿಗೆ ಮೂಡಿಬರಲಿದ್ದು, ’ಸಿರಿ ಕನ್ನಡ’ ವಾಹಿನಿಯು ಈಗ ಪರಿಪೂರ್ಣ ವಾಹಿನಿಯಾಗಿ ಹೊರಹೊಮ್ಮಲಿದ್ದು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಮನರಂಜನೆ ನೀಡುವುದಾಗಿ ವಾಹಿನಿ ಮುಖ್ಯಸ್ಥ ಸಂಜಯ್‌ಶಿಂಧೆ ಮಾಹಿತಿ ನೀಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!