ಇದೇ ಶುಕ್ರವಾರ ‘ಹಗಲು ಕನಸು’ ಬಿಡುಗಡೆ

ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶನ ಹಾಗೂ ಛಾಯಾಗ್ರಹಣದ ಚಿತ್ರ ಮಾಸ್ಟರ್ ಆನಂದ್ ನಾಯಕ ನಟನಾಗಿ ನಟಿಸಿರುವ ಚಿತ್ರ `ಹಗಲು ಕನಸು’. ಈ ಚಿತ್ರ ಇದೇ ಶುಕ್ರವಾರ ಬಿಡುಗಡೆ ಆಗುತ್ತಿದೆ.

ಎಂ ಪಿ ಆರ್ ಫಿಲ್ಮ್ಸ್ ಅಡಿಯಲ್ಲಿ ವಿ ಜಿ ಅಚ್ಯುತ ರಾಜು, ಎಂ ಪದ್ಮನಾಭ, ರಹಮತ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಎರಡು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಚಿತ್ರದ ಕಥಾ ನಾಯಕನಿಗೆ ಒಂದು ಕನಸು ಆಗಾಗ್ಗೆ ಬರುತ್ತಿರುತ್ತದೆ. ಅದೇ ಮಚ್ಚೆ ಇರುವ ಹುಡುಗಿಯ ಕನಸು. ಆ ಹುಡುಗಿಯೇ ಮನೆಗೆ ಬಂದು ಬಿಟ್ಟರೆ? ಅಲ್ಲಿಂದ ಶುರುವಾಗುತ್ತದೆ ಹಲವಾರು ಹಾಸ್ಯ ಪ್ರಸಂಗಗಳು. ಇದರೊಳಗೆ ಸಸ್ಪೆನ್ಸ್ ಅಂಶಗಳು ಸಹ ಅಡಕವಾಗಿದೆ.

ಮಾಸ್ಟರ್ ಆನಂದ್ ಪೂರ್ಣ ಪ್ರಮಾಣದ ನಾಯಕ ನಟನಾಗಿ ಅಭಿನಯಿಸಿರುವ ಚಿತ್ರದಲ್ಲಿ ಸನಿಹ ಯಾದವ್, ನಾರಾಯಣ ಸ್ವಾಮಿ, ನೀನಾಸಮ್ ಅಶ್ವಥ್, ಮನದೀಪ್ ರಾಯ್, ಅಶ್ವಿನ್ ಹಾಸನ್, ಚಿತ್ಕಲಾ ಬಿರಾದಾರ್ ಪಾತ್ರವರ್ಗದಲ್ಲಿದ್ದಾರೆ.

This Article Has 1 Comment
  1. Pingback: list of testing tools

Leave a Reply

Your email address will not be published. Required fields are marked *

Translate »
error: Content is protected !!