ಹಫ್ತಾ ಈ ವಾರ ಬಿಡುಗಡೆ

ಮೈತ್ರಿ ಪ್ರೊಡಕ್ಷನ್ ಲಾಂಛನದಲ್ಲಿ ಮೈತ್ರಿ ಮಂಜುನಾಥ್ ನಿರ್ಮಾಣದ ಹಫ್ತಾ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಚಿತ್ರ ವೀಕ್ಷಿಸಿ ಯು/ಎ ಸರ್ಟಿಪಿಕೆಟ್ ನೀಡಿದ್ದು ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಪ್ರಕಾಶ್ ಹೆಬ್ಬಾಳ್ ನಿರ್ದೇಶನದ. ಸೂರಿ ಸಿನಿಟೆಕ್- ಛಾಯಾಗ್ರಹಣ, ಸಂಗೀತ – ವಿಜಿ ಯಾಡ್ರ್ಲಿ, ಹಿನ್ನೆಲೆ ಸಂಗೀತ – ಗೌತಮ್ ಶ್ರೀವತ್ಸ, ಸಂಕಲನ –ವೆಂಕಿ ಯು.ಡಿ.ವಿ, ಸಹನಿರ್ದೇಶನ – ಕುಮಾರ್ ಟಿ ಗೌಡ ಬಸವರಾಜ್, ಸಾಹಸ – ರಾಕಿ ರಮೇಶ್, ನೃತ್ಯ – ಜೈ ನಿರ್ಮಾಣ ನಿರ್ವಹಣೆ – ಅಚ್ಯುತ್‍ರಾವ್, ದಶಾವರ ಚಂದ್ರು. ಈ ಚಿತ್ರವು ಸಂಪೂರ್ಣ ವಾಣಿಜ್ಯಾತ್ಮಕ ಮನರಂಜನೆಯ ಚಿತ್ರವಾಗಿದ್ದು ಚಿತ್ರಕಥೆಯು ಭೂಗತ ಜಗತ್ತಿನ ಹಫ್ತಾವಸೂಲಿ ಮತ್ತು ಸುಫಾರಿ ಕಿಲ್ಲರ್‍ಗಳ ಅಂಶಗಳನ್ನು ಒಳಗೊಂಡಿರುತ್ತದೆ. ತಾರಾಗಣದಲ್ಲಿ – ವರ್ಧನ್ ತೀರ್ಥಹಳ್ಳಿ, ಬಿಂಬಶ್ರೀ ನಿನಾಸಂ, ರಾಘವ್‍ನಾಗ್, ಸೌಮ್ಯ ತತೀರ, ಬಲರಾಜ್ ವಾಡಿ, ದಶಾವರ ಚಂದ್ರು, ಉಗ್ರಂ ರವಿ, ಚಂದ್ರು ಮುಂತಾದವರಿದ್ದಾರೆ.

This Article Has 1 Comment
  1. Pingback: watchesmall.is

Leave a Reply

Your email address will not be published. Required fields are marked *

Translate »
error: Content is protected !!