ಚಿತ್ರದ ಹಾಡುಗಳು ಹೊರ ಬಂದಿವೆ ಅಂದರೆ, ಆ ಸಿನಿಮಾದ ಭವಿಷ್ಯವನ್ನು ನಿರ್ಧರಿಸುವ ಮೊದಲ ಆಹ್ವಾನ ಪತ್ರಿಕೆ ಪ್ರೇಕ್ಷಕರ ಮುಂದೆ ಬಂದಿದೆ ಅಂತಲೇ ಅರ್ಥ ಕೊಡುತ್ತದೆ. ಇಂತಹದೊಂದು ನಂಬಿಕೆಗಳಿಂದಲೇ ಪ್ರಕಾಶ್ಹೆಬ್ಬಾಳ ಕತೆ,ಚಿತ್ರಕತೆ,ಸಂಭಾಷಣೆ ಬರೆದು ಪ್ರಥಮ ಬಾರಿ ನಿರ್ದೇಶನ ಮಾಡಿರುವ ‘ಹಫ್ತಾ’ ಹಾಡುಗಳ ಬಿಡುಗಡೆ ಕಾರ್ಯಕ್ರಮವು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅನಾವರಣಗೊಂಡಿತು. ಅಡಿಬರಹದಲ್ಲಿ ಸೆಂಟಿಮೆಂಟ್ ನಾಟ್ ಅಲೋಡ್ ಅಂತ ಹೇಳಿಕೊಂಡಿದೆ. ಗೌತಂಶ್ರೀವತ್ಸ ಹಿನ್ನಲೆ ಸಂಗಿತ, ಎರಡು ಗೀತೆ, ಅದರಂತೆ ವಿಜಯ್ಯಾರ್ಡಲಿ ಡ್ಯುಯೆಟ್ ಮತ್ತು ಪ್ಯಾಥೋ ಹಾಡಿಗೆ ರಾಗ ಸಂಯೋಜಿಸಿದ್ದಾರೆ. ಶೀರ್ಷಿಕೆ ಕೇಳಿದರೆ ಇದೂಂದು ವಸೂಲಿ ಕತೆ ಇರಬಹುದೆಂದು ಭಾವಿಸಿದರೆ ಅದು ಆಗಿರುವುದಿಲ್ಲ.
ಕಡಲ ತೀರದ ಭೂಗತಲೋಕ ಮತ್ತು ಸುಪಾರಿ ಕಿಲ್ಲಿಂಗ್ ಜೊತೆಗೆ ಬೇರೆ ತರಹದ ಮತ್ತೋಂದು ವಿಷಯವನ್ನು ಸೆಸ್ಪನ್ಸ್ ಥ್ರಿಲ್ಲಿಂಗ್ ಮಾದರಿಯಲ್ಲಿ ತೋರಿಸಲಾಗಿದೆ. ಕೆಟ್ಟವರನ್ನು ಸಂಹಾರ ಮಾಡಲು ಕೆಟ್ಟವನೇ ಬರಬೇಕೆಂದು ಹೇಳಿದ್ದಾರೆ. ಮಂಗಳೂರು, ಮುರುಡೇಶ್ವರ, ಗೋಕರ್ಣ ಮತ್ತು ಬೆಂಗಳೂರು ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ, ಖಳನಟನಾಗಿ ನಟಿಸಿದ್ದ ವರ್ಧನ್ತೀರ್ಥಹಳ್ಳಿ ಮೊದಲ ಬಾರಿ ನಾಯಕನಾಗಿ ಎರಡು ಶೇಡ್ಗಳಲ್ಲಿ ಅದರಲ್ಲೂ ಒಂದು ಹಂತದಲ್ಲಿ ಮಂಗಳಮುಖಿಯಾಗಿ ಕಾಣಿಸಿಕೊಂಡಿರುವುದು ವಿಶೇಷ. ಬುದ್ದವಂತಿಕೆಯಿಂದ ಅಪರಾದದ ಸುಳಿವು ಸಿಗದಂತೆ ಸೈಲೆಂಟ್ ಕಿಲ್ಲರ್. ಇವನದು ಏನಿದ್ದರೂ ಗನ್ ಮಾತಾಡುತ್ತೆ ಎನ್ನುವ ಪಾತ್ರದಲ್ಲಿ ರಾಘವನಾಗ್ ನಾಯಕನಾಗಿ ಮೂರನೆ ಸಿನಿಮಾ. ಭರತನಾಟ್ಯ ವಿದ್ಯಾರ್ಥಿಯಾಗಿ ಬಿಂಬಶ್ರೀನೀನಾಸಂ ರಾಮರಾಮರೇ ನಂತರ ನಾಯಕಿಯಾಗಿ ಅವಕಾಶ ಸಿಕ್ಕಿದೆಯಂತೆ. ಕೂರ್ಗ್ ಮೂಲದ ಸೌಮ್ಯತಿತೀರ ಚೂಚ್ಚಲ ಚಿತ್ರದಲ್ಲೆ ವೇಶ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮುಖ್ಯ ಖಳನಾಯಕನಾಗಿ ಬಾಲ್ರಾಜ್ವಾಡಿ ಉಳಿದಂತೆ ದಶಾವರಚಂದ್ರು, ಉಗ್ರಂರವಿ ಮುಂತಾದವರು ತಂಡದಲ್ಲಿ ಇದ್ದಾರೆ. ಛಾಯಗ್ರಹಣ ಸೂರಿಸಿನಿಟೆಕ್, ಸಂಕಲನ ರಘುನಾಥ್.ಎಲ್. ನಿರ್ವಹಿಸಿದ್ದಾರೆ.ಸಿಡಿ ಬಿಡುಗಡೆ ಮಾಡಿದ ಲಹರಿವೇಲು ಮಾತನಾಡಿ ಗತಕಾಲದಲ್ಲಿ ಶಿಸ್ತು ಶಾರ್ಪ್ ಶೂಟರ್ ಪೋಲೀಸ್ ಅಧಿಕಾರಿಗಳು ಈ ಪದವನ್ನು ಉಪಯೋಗಿಸುತ್ತಿರುವುನ್ನು ಕೇಳಿದ್ದೇನೆ. ಕಟ್ ಮಾಡಿದರೆ ಈಗ ಇದೇ ಹೆಸರಿನಲ್ಲಿ ಸಿದ್ದಗೊಂಡಿದೆ. ತಂಡಕ್ಕೆ ಒಳ್ಳೆಯದಾಗಲಿ ಎಂದರು. ನಿರ್ಮಾಪಕನಾಗಿ ಎರಡನೆ ಪ್ರಯತ್ನ. ಕತೆ ಚೆನ್ನಾಗಿರುವುದರಿಂದಲೇ ಹಣ ಹೂಡಿದ್ದೇನೆ. ಮಾದ್ಯಮದ ಸಹಕಾರಬೇಕೆಂದು ಮೈತ್ರಿ ಕಟ್ಟಡಗಳ ಮಾಲೀಕ ಮೈತ್ರಿಮಂಜುನಾಥ್ ಕೋರಿದರು. ಸಹ ನಿರ್ಮಾಪಕ ಬಾಲರಾಜ್.ಟಿ.ಸಿ.ಪಾಳ್ಯ, ಅತಿಥಿಗಳಾದ ಚಕ್ರಪಾಣಿ, ದಾಪಿಆಂಜನಪ್ಪ, ದಯಾಳ್ ಮಿತಭಾಷಿಯಾಗಿದ್ದರು. ಯುಎ ಪ್ರಮಾಣ ಪತ್ರ ಪಡೆದುಕೊಂಡಿರುವ ಸಿನಿಮಾವನ್ನು ಸದ್ಯದಲ್ಲೆ ಜನರಿಗೆ ತೋರಿಸಲು ನಿರ್ಮಾಪಕರು ಯೋಜನೆ ಹಾಕಿಕೊಂಡಿದ್ದಾರೆ.
Be the first to comment