ಹೀರೋಯಿನ್ ಹುಡುಕಿದ “ಗುರುಶಿಷ್ಯರು”

ಚಂದನವನದಲ್ಲಿ ಗುರುಶಿಷ್ಯರು ಶೀರ್ಷಿಕೆ ಕೇಳಿದಾಕ್ಷಣ ನೆನಪಿಗೆ ಬರೋದು ಸಾಹಸ ಸಿಂಹ ವಿಷ್ಣುವರ್ಧನ್ ಹಾಗೂ ಹಾಸ್ಯ ಕಲಾವಿದರ ದಂಡೇ ಕಾಣಿಸಿಕೊಂಡ ಗುರುಶಿಷ್ಯರು ಚಿತ್ರ. ಅದು ಇಂದಿಗೂ ಅಜರಾಮರ. ಈಗ ಅದೇ ಶೀರ್ಷಿಕೆಯನ್ನು ಬಳಿಸಿಕೊಂಡು ಮತ್ತೊಂದು ತಂಡ ಚಿತ್ರವನ್ನ ಆರಂಭಿಸಿದೆ.

ಈಗಾಗಲೇ ಚಿತ್ರದ ಅರ್ಧದಷ್ಟು ಚಿತ್ರೀಕರಣ ಮಾಡಿಕೊಂಡಿದ್ದು , ಉಳಿದ ಭಾಗದ ಚಿತ್ರೀಕರಣವನ್ನು ಲಾಕ್ ಡೌನ್ ಮುಗಿಯುತ್ತಿದ್ದಂತೆ ಆರಂಭಿಸಲಿದ್ದಾರoತೆ. ಇದರ ನಡುವೆ ಚಿತ್ರದ ನಾಯಕಿ ಯಾರೆಂದು ಹೇಳಿರಲಿಲ್ಲ. ಈಗ ಆ ಸಮಯ ಕೂಡಿ ಬಂದಿದ್ದು, ನಾಯಕಿಯ ಜನ್ಮದಿನದಂದು ಚಿತ್ರದ ಪೋಸ್ಟರ್ ಮೂಲಕ ಬಿಡುಗಡೆ ಮಾಡಿದ್ದಾರೆ.

ಅಮ್ಮ ಐ ಲವ್ ಯು, ಪಡ್ಡೆ ಹುಲಿ, ಜಂಟಲ್ಮನ್ ಮುಂತಾದ ಚಿತ್ರಗಳಲ್ಲಿ ಯಶಸ್ಸು ಪಡೆದ ನಿಶ್ವಿಕಾ ನಾಯ್ಡು ಗುರುಶಿಷ್ಯರು ಚಿತ್ರದ ನಾಯಕಿಯಾಗಿದ್ದಾರೆ. ಚಿತ್ರತಂಡದ ಪ್ರಕಾರ ನಿಶ್ವಿಕಾ ಅವರನ್ನು ಚಿತ್ರದ ನಾಯಕಿಯಾಗಿ ಆಯ್ಕೆ ಮಾಡುವ ಪ್ರಕ್ರಿಯೆ ಸುಲಭವಾಗಿರಲಿಲ್ಲ. ನಾಯಕಿಗಾಗಿ ಸುಮಾರು 30 ಹೊಸ ಕಲಾವಿದೆಯರು, ಕನ್ನಡ ಚಿತ್ರರಂಗದ ಅನೇಕ ನಟಿಯರು, ಪರಭಾಷಾ ನಟಿಯರನ್ನು ಕೂಡ ಗುರುಶಿಷ್ಯರು ಚಿತ್ರಕ್ಕೆ ಪರಿಗಣಿಸಲಾಗಿದ್ದು, ಕೊನೆಗೂ ಈ ಪಾತ್ರಕ್ಕೆ ಅತ್ಯಂತ ಸೂಕ್ತ ಕಲಾವಿದೆ ಎಂದು ನಿಶ್ವಿಕಾ ನಾಯ್ಡು ಅವರನ್ನು ಆಯ್ಕೆ ಮಾಡಲಾಯಿತoತೆ. ಶರಣ್ ರವರು ಈ ಚಿತ್ರದ ನಾಯಕನಟನಾಗಿದ್ದು , ಈ ಚಿತ್ರದಲ್ಲಿ ಒಬ್ಬ ದೈಹಿಕ ಶಿಕ್ಷಕನ ಪಾತ್ರ ನಿರ್ವಹಿಸುತ್ತಿದ್ದು ಅವರ ಜೊತೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಪ್ಪಟ ಹಳ್ಳಿ ಹುಡುಗಿಯಾಗಿ, ರವಿಚಂದ್ರನ್ ಅಭಿಮಾನಿಯಾಗಿ, ಹಾಲಿನ ಡೈರಿ ನಡೆಸುವ ಸ್ವಯಂಕೃಷಿ ಉದ್ಯಮಿಯಾಗಿ ಪಾತ್ರ ಮಾಡಿದ್ದಾರೆ. ಗುರುಶಿಷ್ಯರು ಚಿತ್ರದ ಕಥೆ 1995 ರಲ್ಲಿ ನಡೆಯುವಂಥ ಕಥಾಹಂದರ ಒಳಗೊಂಡಿದೆಯಂತೆ.

ಇನ್ನು ಈ ಚಿತ್ರದ ನಟ ಶರಣ್ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದ ನಿಶ್ವಿಕಾ ನಾಯ್ಡು ಬಗ್ಗೆ ಮಾತನಾಡುತ್ತಾ ನಾಯಕಿಯನ್ನು ಆಯ್ಕೆ ಮಾಡುವ ಸ್ಕಿಟ್ ತಯಾರು ಮಾಡುವುದು ಕೂಡ ಬಹಳ ಮಜವಾದ ಕೆಲಸವಾಗಿತ್ತು. ನಿಶ್ವಿಕಾ ಅವರು ತುಂಬಾ ಒಳ್ಳೆಯ ನಟಿ. ನಮ್ಮಿಬ್ಬರ ಕಾಂಬಿನೇಷನ್ ಚಿತ್ರದಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ ಎಂದಿದ್ದಾರೆ. ಅದೇ ರೀತಿ ಚಿತ್ರದ ನಿರ್ದೇಶಕ
ಜಡೇಶ್ ಕುಮಾರ್ ಮಾತನಾಡುತ್ತಾ ನಿಶ್ವಿಕಾ ಇದೇ ಮೊದಲ ಬಾರಿಗೆ ಒಂದು ಹಳ್ಳಿ ಹುಡುಗಿಯ ಪಾತ್ರ ಮಾಡುತ್ತಿರುವುದು. 1995ರ ಕಾಲಘಟ್ಟ ವಾಗಿರುವುದರಿಂದ ಈಗಿನ ಪ್ರೇಕ್ಷಕರಿಗೂ ಬೇರೆಯೇ ರೀತಿಯಾದ ಅನುಭವ ಕೊಡುವಂತ ಸನ್ನಿವೇಶಗಳು ಘಟನೆಗಳು ಚಿತ್ರದಲ್ಲಿದೆ ಎಂದಿದ್ದಾರೆ. ಇನ್ನು ಈ ಚಿತ್ರಕ್ಕೆ ಕ್ರಿಯೇಟಿವ್ ಹೆಡ್ ಆಗಿ ತಂಡದ ಬೆನ್ನೆಲುಬಾಗಿ ನಟ , ನಿರ್ದೇಶಕ ತರುಣ್ ಸುಧೀರ್ ನಿಂತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!