ನಿರ್ಮಾಪಕರಿಗೆ ಹಣ ವಂಚನೆ ಮಾಡಿದ ಸಂಬಂಧ ʻಮಠʼ ಸಿನಿಮಾದ ನಿರ್ದೇಶಕ ಗುರುಪ್ರಸಾದ್ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿನಗರ ಪೊಲೀಸರು ಗುರುಪ್ರಸಾದ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಿನಿಮಾ ಮಾಡುವುದಾಗಿ ಶ್ರೀನಿವಾಸ್ ಅವರನ್ನು ನಂಬಿಸಿ 30 ಲಕ್ಷ ರೂ. ಪಡೆದು ಗುರುಪ್ರಸಾದ್ ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ. ಈ ಹಿಂದೆ ಗುರುಪ್ರಸಾದ್ ವಿರುದ್ಧ ಚೆಕ್ ಬೌನ್ಸ್ ಕೇಸ್ ನಲ್ಲಿ ವಾರಂಟ್ ಜಾರಿಯಾಗಿತ್ತು.
ಗುರು ಪ್ರಸಾದ್ ಅವರನ್ನು ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.
___

Be the first to comment