ಗುರುನಂದನ್‌ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣ

‘ಫಸ್ಟ್‌ ರ‍್ಯಾಂಕ್‌ ರಾಜು’ ಖ್ಯಾತಿಯ ನಟ ಗುರುನಂದನ್‌ ಇತ್ತೀಚೆಗಷ್ಟೇ  ಹೆಸರಿಡದ ಸಿನಿಮಾ ಘೋಷಿಸಿದ್ದು ಇದೀಗ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ.

ಗುರುನಂದನ್‌  ತಮ್ಮದೇ ಮಂಡಿಮನೆ ಟಾಕೀಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಸುಮಂತ್ ಗೌಡ ಆಕ್ಷನ್‌ ಕಟ್‌ ಹೇಳುತ್ತಿದ್ದು, ಅವರ ಮೊದಲ ಚಿತ್ರವಾಗಿದೆ.

‘ಮೊದಲ ಹಂತದಲ್ಲಿ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಪೂರ್ಣಗೊಂಡಿದೆ. ಚಿಕ್ಕಮಗಳೂರು, ಲಡಾಕ್‌ನಲ್ಲಿ ಚಿತ್ರೀಕರಿಸುವ ಯೋಜನೆಯಿದೆ. ಸ್ಟಾಂಡಪ್‌ ಕಾಮಿಡಿಯನ್‌ ಕುರಿತಾದ ಸಿನಿಮಾವಿದು’ ಎಂದಿದ್ದಾರೆ ನಿರ್ದೇಶಕ ಸುಮಂತ್ ಗೌಡ .

‘ಹರಿಕಥೆ ಅಲ್ಲ ಗಿರಿಕಥೆ’ ಖ್ಯಾತಿಯ ತಪಸ್ವಿನಿ ಪೂಣ್ಣಚ್ಚ ಗುರುನಂದನ್‌ಗೆ ಜೋಡಿಯಾಗಿದ್ದಾರೆ . ತಬಲ ನಾಣಿ, ಧರ್ಮಣ್ಣ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಶಿವಸೇನಾ ಛಾಯಾಗ್ರಹಣ, ಕಿರಣ್ ರವೀಂದ್ರನಾಥ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!