ಚಿತ್ರ : ಗನ್ಸ್ ಆಂಡ್ ರೋಸಸ್
ನಿರ್ದೇಶಕ: ಎಚ್ ಎಸ್ ಶ್ರೀನಿವಾಸ ಕುಮಾರ್
ತಾರಾ ಬಳಗ: ಅರ್ಜುನ್ ವಿಶ್ವಕರ್ಮ, ಯಶ್ವಿಕಾ ನಿಷ್ಕಲ, ಜೀವನ್ ರಿಚ್ಚಿ, ಕಿಶೋರ್ ಕುಮಾರ್ ಇತರರು
ರೇಟಿಂಗ್ : 3/5
ಡ್ರಗ್ರ್ಸ್ ಪೆಡ್ಲರ್ ಒಬ್ಬ ಪ್ರೀತಿಯ ಬಲೆಯಲ್ಲಿ ಸಿಕ್ಕಿದ ಮೇಲೆ ಅವನ ಬದುಕಿನಲ್ಲಿ ಏನಾಗುತ್ತದೆ ಎನ್ನುವುದನ್ನು ಹೇಳುವ ಸಿನಿಮಾ ಗನ್ಸ್ ಆಂಡ್ ರೋಸಸ್.
ಚಿತ್ರದ ನಾಯಕ ಸೂರ್ಯ ಹತ್ತಾರು ರೌಡಿಗಳನ್ನು ಹೊಡೆದಾಡುವ ಸಾಮರ್ಥ್ಯ ಉಳ್ಳವನು. ಪೊಲೀಸರಿಗೆ ಬೆದರಿಕೆ ಹಾಕಿ ಅವರ ವಾಹನದಲ್ಲಿ ಡ್ರಗ್ಸ್ ಸಾಗಿಸುವ ಈತ ವಿಂಟೇಜ್ ಬ್ಯೂಟಿ ಒಂದಕ್ಕೆ ಸಿಕ್ಕಿಕೊಂಡ ಮೇಲೆ ಏನಾಗುತ್ತದೆ ಎನ್ನುವುದಕ್ಕೆ ಚಿತ್ರ ನೋಡಬೇಕಿದೆ.
ಚಿತ್ರ ಒಂದು ಮಾಸ್ ಆಕ್ಷನ್ ಎಂಟರ್ಟೈನರ್ ಆಗಿ ಮೂಡಿ ಬಂದಿದೆ. ಆರಂಭದಲ್ಲಿ ಎನ್ಕೌಂಟರ್ ಸ್ಪೆಷಲಿಸ್ಟ್ ಕಿಶೋರ್ ಬುಲೆಟ್ ಸೌಂಡ್ ಮೂಲಕ ಪ್ರೇಕ್ಷಕರನ್ನು ಆಕ್ಷನ್ ಕಡೆಗೆ ಕರೆದೊಯ್ಯುತ್ತಾರೆ. ಅನಂತರ ನಾಯಕ ಸೂರ್ಯ ತನ್ನ ಜಬರ್ದಸ್ತ್ ಫೈಟಿಂಗ್ ಮೂಲಕ ಎಂಟ್ರಿ ಆಗುತ್ತಾನೆ. ಬಳಿಕ ಕಥೆ ಫ್ಲಾಶ್ ಬ್ಯಾಕ್ ನಲ್ಲಿ ಸಾಗುತ್ತದೆ.
ಚಿತ್ರದಲ್ಲಿ ಸಾಕಷ್ಟು ಹೊಡೆದಾಟಗಳಿವೆ. ಇದು ಆಕ್ಷನ್ ಚಿತ್ರಗಳನ್ನು ಇಷ್ಟಪಡುವವರಿಗೆ ಖುಷಿ ನೀಡುತ್ತದೆ. ಚಿತ್ರದಲ್ಲಿ ಹೆಚ್ಚಿನ ಟರ್ನ್ ಹಾಗೂ ಟ್ವಿಸ್ಟ್ ಕಂಡು ಬರುವುದಿಲ್ಲ. ಆದರೆ ನಿರ್ದೇಶಕರು ಫ್ಲಾಶ್ ಬ್ಯಾಕ್ ಟೆಕ್ನಿಕ್ ಅನ್ನು ಬಳಸಿಕೊಂಡಿದ್ದಾರೆ.
ನಾಯಕ ನಟ ಅರ್ಜುನ್ ವಿಶ್ವಕರ್ಮ ಡೈಲಾಗ್ ಮೂಲಕ ಮಿಂಚುತ್ತಾರೆ. ಅವರ ಸ್ಕ್ರೀನ್ ಪ್ರೆಸೆನ್ಸ್ ಇಂಟರೆಸ್ಟಿಂಗ್ ಆಗಿ ಮೂಡಿ ಬಂದಿದೆ.
ಆಕ್ಷನ್ ಚಿತ್ರಗಳನ್ನು ಇಷ್ಟಪಡುವವರು ಚಿತ್ರವನ್ನು ಒಮ್ಮೆ ನೋಡಬಹುದು.
Be the first to comment