ಒಂದು ಚಿತ್ರವು ಸಕ್ಸಸ್ ಆಗಬೇಕಾದರೆ ಹಾಡುಗಳು ಸಂಗೀತ ಪ್ರಿಯರನ್ನು ರಂಜಿಸಬೇಕು ಆಗ ಸಿನಿಮಾ ತನ್ನಂತಾನೇ ಗೆಲುವು ಸಾಧಿಸುತ್ತದೆ ಎಂಬುದನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ನಾದಬ್ರಹ್ಮ ಹಂಸಲೇಖಾ ಅವರ ಕಾಂಬಿನೇಷನ್ನ ಬಹುತೇಕ ಚಿತ್ರಗಳು ತೋರಿಸಿಕೊಟ್ಟಿವೆ.
ಈಗ ಅದೇ ಹಿಟ್ ಚಿತ್ರಗಳಿಗೆ ಸೇರಲು ಹೊರಟಿರುವ ಚಿತ್ರವೇ ಗುಲಾಲ್. ಈ ಚಿತ್ರದ ಹಾಡುಗಳಿಗೆ ಎಲ್ಲೆಡೆಯಿಂದಲೂ ಉತ್ತಮ ರೆಸ್ಪಾನ್ಸ್ಗಳು ಕೇಳಿಬಂದಿವೆ. ಹುಡುಗಿ ಹುಡುಗಿ ಎಂಬ ಗೀತೆಯು ಈಗಾಗಲೇ 15 ಲಕ್ಷ ಹಿಟ್ಸ್ಗಳನ್ನು ಪಡೆದಿರುವುದರಿಂದ ನಿರ್ಮಾಪಕ ಡಾ.ಗೋಪಾಲಕೃಷ್ಣ ಹವಲ್ದಾರ ಅವರ ಸಂತಸವನ್ನು ಹೆಚ್ಚಿಸಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಹುಟ್ಟಿದಾಗ ಗುಲಾಲ್ ಬಣ್ಣ ಹಾರಿಸ್ತಾರೆ, ಸತ್ತಾಗ ಗೌರವ ಸಲ್ಲಿಸಲು ಇದನ್ನೆ ಏರಿಸ್ತಾರೆ. ಬದುಕಲ್ಲಿ ಸಾವು ಅಂದರೆ ಕಷ್ಟ, ಹುಟ್ಟಿಗೆ ಸಂತಸ ಎಂಬ ಅರ್ಥವಿದೆ. ಇವೆರಡನ್ನು ಬಿಂಬಿಸುವುದೇ ಈ ಚಿತ್ರದ ಕತೆಯಾಗಿದೆ. ಬೆಂಗಳೂರು, ಬೆಳಗಾಂ, ಕಿತೂತಿರು ಮುಂತಾದ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಚಿತ್ರಕ್ಕೆ ಈ ಸಲ ಗೆಲುವ ನಮ್ದೆ ಎಂಬ ಸಬ್ಟೈಟಲ್ ಇದ್ದು ಪ್ರತಿಯೊಬ್ಬರ ಜೀವನದಲ್ಲೂ ನೋವು- ಸಾವು, ಕಷ್ಟ-ಸುಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕೊಟ್ಟರುತ್ತಾನೆ, ಆದರೆ ಅದನ್ನು ಗುರುತಿಸಲು ಗುರು ಅಂತ ಒಬ್ಬರು ಇರಬೇಕು ಅದೇ ಈ ಚಿತ್ರದ ಜೀವಾಳ.ಗುಲಾಲ್ ಚಿತ್ರವು ಹೊಸಬರು ಹಾಗೂ ಹಳಬರ ಮಹಾಸಂಗಮ ಚಿತ್ರದಂತಿದ್ದು, ಐವರು ಹುಡುಗರು ಒಬ್ಬ ಗುರುವನ್ನು ಆದರ್ಶವಾಗಿಟ್ಟುಕೊಂಡು ಸಾಧನೆ ಮಾಡುವ ಕಥೆ ಚಿತ್ರದಲ್ಲಿದ್ದು ಅವರು ಮಾಡುವ ಆಲ್ಬಂ ಹಾಡಿಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆಗಳು ಬರುತ್ತವೆ, ಅಲ್ಲಿಂದ ಕಥೆಯು ಆರಂಭವಾಗುತ್ತದೆ.
ಗುರುವಾಗಿ ತಬಲನಾಣಿ, ಹುಡುಗರುಗಳಾಗಿ ಬಿಗ್ಬಾಸ್ ದಿವಾಕರ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸದಾನಂದ ಕಾಲಿ, ಮಲ್ಲೇಶ್ ಸೂರ್ಯ, ಶಂಕರ ಅಂಬಿಗೇರಿ, ಜೋಕರ್ ಹನುಮಂತ್ ನಟಿಸಿದ್ದಾರೆ.ನೇತ್ರ ಗಗನ, ಪೂ ಜಾ ಮೈಸೂರು, ಸೋನು ಪಾಟೀಲ್, ರಾಜೇಶ್ವರಿ, ಸೂರ್ಯವಂಶಿ ಈ ಚಿತ್ರದ ನಾಯಕಿಯರು. ಇವರೊಂದಿಗೆ ನುರಿತ ಕಲಾವಿದರುಗಳಾದ ಶೋಭರಾಜ್, ಮೋಹನ್ ಜುನೇಜ ಸೇರಿದಂತೆ ಒಟ್ಟಾರೆ 120 ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಶಿವು ಜಮಖಂಡಿ ನಾಲ್ಕು ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಅವರ ನಿರ್ದೇಶನದ ನಾಲ್ಕನೇ ಪ್ರಯತ್ನ ಇದಾಗಿದೆ. ಧನಂಜಯ್.ಹೆಚ್ ಚಿತ್ರ ನಿರ್ಮಾಣದಲ್ಲಿ ಪಾಲುದಾರರು. ಅಂದುಕೊಂಡಂತೆ ಆದರೆ ಈ ಚಿತ್ರ ಜನವರಿಗೆ ತೆರೆಗೆ ಬರುವ ಸಾದ್ಯತೆ ಇದೆ. ಗುಲಾಲ್ ಚಿತ್ರವು ಬಿಡುಗಡೆಯಾದ ನಂತರ ನಿರ್ಮಾಪಕರ ಮೊಗದಲ್ಲಿ ನಗುವಿನ ಓಕುಳಿಯನ್ನು ಚಿಮ್ಮಿಸುವಂತಾಗಲಿ.
Pingback: 트루모아