ರಶ್ಮಿಕಾ–ವಿಜಯ್ ಮದುವೆಗೆ ಯಾರೆಲ್ಲಾ ಭಾಗಿ?

ದಕ್ಷಿಣ ಭಾರತದ ಸ್ಟಾರ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಗೆ ಕೆಲವೇ ಕೆಲ ಆಪ್ತ ಸ್ನೇಹಿತರು ಮತ್ತು ಚಿತ್ರರಂಗದ ಮಂದಿ ಆಹ್ವಾನಿತರಾಗಿದ್ದಾರೆ.

ರಾಜಸ್ಥಾನದ ಉದಯಪುರದ ಐಶಾರಾಮಿ ರೆಸಾರ್ಟ್‌ನಲ್ಲಿ ಅದ್ಧೂರಿಯಾಗಿ ಮದುವೆ ನಡೆಯುತ್ತಿದೆ. ಒಂದು ವಾರದಿಂದ ಮದುವೆ ಶಾಸ್ತ್ರಗಳು ಆರಂಭವಾಗಿದ್ದು, ಇಂದು   ಮತ್ತು ನಾಳೆ  ಹಳದಿ, ಮೆಹಂದಿ ಹಾಗೂ ಮಾಂಗಲ್ಯಧಾರಣೆ ಕಾರ್ಯಕ್ರಮ ನಡೆಯಲಿದೆ.

ವಿಜಯ್ ದೇವರಕೊಂಡ ಅವರನ್ನು ನಾಯಕನಾಗಿ ಪರಿಚಯಿಸಿದ ‘ಪೆಳ್ಳಿ ಚೂಪುಲು’ ಚಿತ್ರದ ನಿರ್ದೇಶಕ ತರುಣ್ ಭಾಸ್ಕರ್, ನಟಿ ಇಶಾ ರೆಬ್ಬಾ ಮದುವೆ ಸಂಭ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಇಶಾ ರೆಬ್ಬಾ ಅವರು ವಿಜಯ್ ಪೋಷಕ ಪಾತ್ರದಲ್ಲಿ ನಟಿಸಿದ್ದ ‘ಲೈಫ್ ಈಸ್ ಬ್ಯೂಟಿಫುಲ್’ ಚಿತ್ರದ ನಾಯಕಿಯಾಗಿದ್ದರು.

ಸ್ಟೈಲಿಸ್ಟ್ ಶ್ರಾವ್ಯ ವರ್ಮಾ, ರಶ್ಮಿಕಾ ಅವರ ಆಪ್ತ ಗೆಳತಿ ಕನ್ನಡ ನಟಿ ಆಶಿಕಾ ರಂಗನಾಥ್, ರಶ್ಮಿಕಾ ಅಭಿನಯದ ‘ದಿ ಗರ್ಲ್ಫ್ರೆಂಡ್’ ನಿರ್ದೇಶಕ ರಾಹುಲ್ ರವೀಂದ್ರನ್ ಮದುವೆಯಲ್ಲಿ ಭಾಗವಹಿಸಿದ್ದಾರೆ. 

ವಿಜಯ್ ಅವರ ಕಾಲೇಜು ಸ್ನೇಹಿತರು,  ರಶ್ಮಿಕಾ ಅವರ ಆಪ್ತ ಗೆಳತಿಯರು ರಾಯಲ್ ವೆಡ್ಡಿಂಗ್‌ಗೆ ಸಾಕ್ಷಿಯಾಗಿದ್ದಾರೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸೇರಿದಂತೆ ಕೆಲವು ಸಿನಿ ಸೆಲೆಬ್ರಿಟಿಗಳು ಮದುವೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!