ಆಸ್ಕರ್ ಗೆ ಎಂಟ್ರಿ ಕೊಟ್ಟ ‘ಚೆಲೋ ಶೋ’

ಗುಜರಾತಿ ಭಾಷೆಯ ಚಿತ್ರ ‘ಚೆಲೋ ಶೋ’ 2023ನೇ ಸಾಲಿನ 95ನೇ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತವಾಗಿ ನಾಮ ನಿರ್ದೇಶನಗೊಂಡಿದೆ.

ಗುಜರಾತ್ ನ ಸೌರಾಷ್ಟ್ರದ ಹಳ್ಳಿಯೊಂದರಲ್ಲಿ ಚಿಕ್ಕ ಹುಡುಗನ ಸಿನಿಮಾದೊಂದಿಗಿನ ಪ್ರೇಮ ಸಂಬಂಧದ ಬಗ್ಗೆ ಚಿತ್ರ ಕಥೆ ಹೊಂದಿದೆ. 95 ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗೆ ಇದು ಭಾರತದ ಅಧಿಕೃತ ಪ್ರವೇಶವಾಗಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (ಎಫ್‌ಎಫ್‌ಐ) ಹೇಳಿದೆ.

ಎಸ್‌ಎಸ್ ರಾಜಮೌಳಿ ಅವರ “ಆರ್‌ಆರ್‌ಆರ್”, ರಣಬೀರ್ ಕಪೂರ್ ನಟನೆಯ “ಬ್ರಹ್ಮಾಸ್ತ್ರ: ಭಾಗ 1 ಶಿವ”, ವಿವೇಕ್ ಅಗ್ನಿಹೋತ್ರಿ ಅವರ “ದಿ ಕಾಶ್ಮೀರ್ ಫೈಲ್ಸ್” ಮತ್ತು ಆರ್ ಮಾಧವನ್ ಅವರ ಚೊಚ್ಚಲ ನಿರ್ದೇಶನದ “ರಾಕೆಟ್‌ರಿ” ಚಿತ್ರಗಳ ನಡುವೆ “ಚೆಲೋ ಶೋ” ನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಎಫ್‌ಎಫ್‌ಐ ಅಧ್ಯಕ್ಷ ಟಿಪಿ ಅಗರ್ವಾಲ್ ತಿಳಿಸಿದ್ದಾರೆ.

17 ಸದಸ್ಯರ ತೀರ್ಪುಗಾರರು ‘ಚೆಲೋ ಶೋ’ ವನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರು. ಹಿಂದಿಯಲ್ಲಿ ಆರು ಸಿನೆಮಾಗಳು ಸೇರಿದಂತೆ ವಿವಿಧ ಭಾಷೆಯ ಒಟ್ಟು 13 ಚಲನಚಿತ್ರಗಳು ಆಸ್ಕರ್ ಪ್ರಶಸ್ತಿಗೆ ನಾಮಾಂಕಿತಗೊಳ್ಳಲು ಪೈಪೋಟಿ ನಡೆಸಿದ್ದವು.

ಇಂಗ್ಲಿಷ್‌ನಲ್ಲಿ “ಲಾಸ್ಟ್ ಫಿಲ್ಮ್ ಶೋ” ಎಂಬ ಶೀರ್ಷಿಕೆಯ ಪನ್ ನಳಿನ್-ನಿರ್ದೇಶನದ ಚಿತ್ರ ಬರುವ ಅಕ್ಟೋಬರ್ 14 ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸೌರಾಷ್ಟ್ರದ ದೂರದ ಗ್ರಾಮಾಂತರ ಹಳ್ಳಿಯ ಒಂಬತ್ತು ವರ್ಷದ ಹುಡುಗನ ಕಥೆಯನ್ನು ಚಿತ್ರ ಹೊಂದಿದೆ. ಬಾಲಕನ ಸಿನಿಮಾ ಹುಚ್ಚು ಬಗ್ಗೆ ಕಥೆ ಸಾಗುತ್ತದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!