ಸೃಜನ್ ಲೋಕೇಶ್ ನಿರ್ದೇಶನದ ಮೊದಲ ಚಿತ್ರ ‘ಜಿಎಸ್ಟಿ’ ನವೆಂಬರ್ 28ರಂದು ತೆರೆಗೆ ಬರಲಿದೆ.
ಚಿತ್ರವನ್ನು ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆಯಡಿ ಸಂದೇಶ್ ಎನ್. ನಿರ್ಮಿಸಿದ್ದು, ಸಂದೇಶ್ ನಾಗರಾಜ್ ಅವರು ಅರ್ಪಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದೆ.
”ನಮ್ಮ ತಾತ ಸುಬ್ಬಯ್ಯ ನಾಯ್ಡು ಅವರು ತಂದೆ ಲೋಕೇಶ್ ಅವರನ್ನು ‘ಭಕ್ತ ಪ್ರಹ್ಲಾದ’ ಚಿತ್ರದಲ್ಲಿ ಬಾಲನಟನಾಗಿ ತೆರೆಗೆ ತಂದರು. ತಂದೆ ನಿರ್ದೇಶನದ ‘ಬುಜಂಗಯ್ಯನ ದಶಾವತಾರ’ ಚಿತ್ರದ ಮೂಲಕ ನಾನು ಚಿತ್ರರಂಗಕ್ಕೆ ಬಂದೆ. ಈಗ ನನ್ನ ಮಗ ಸುಕೃತ್ ನನ್ನ ಮೊದಲ ನಿರ್ದೇಶನದಲ್ಲಿ ಬೆಳ್ಳಿತೆರೆ ಪ್ರವೇಶಿಸಿದ್ದಾನೆ” ಎಂದು ಸೃಜನ್ ಲೋಕೇಶ್ ಹೇಳಿದ್ದಾರೆ.
”ಸಿನಿಮಾದಲ್ಲಿ ನಮ್ಮ ತಾಯಿ ಗಿರಿಜಾ ಲೋಕೇಶ್, ನಾನು ಹಾಗೂ ನನ್ನ ಮಗ ನಟಿಸಿದ್ದೇವೆ. ಇದು ಹಾರರ್ ಕಥೆಯಾದರೂ ನಗುವೇ ಪ್ರಧಾನ. ಯಾರೂ ಊಹಿಸದ 40 ನಿಮಿಷಗಳ ಕ್ಲೈಮ್ಯಾಕ್ಸ್ ಈ ಚಿತ್ರದ ವೈಶಿಷ್ಟ್ಯ,” ಎಂದು ಹೇಳಿದ್ದಾರೆ.
ಚಿತ್ರದ ನಾಯಕಿ ರಜನಿ ಭಾರದ್ವಾಜ್. ಹಿರಿಯ ನಟ ಅಶೋಕ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ತಲೆಮಾರಿನ ಕಲಾವಿದರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ.
—–





Be the first to comment