‘ಗ್ರೂಫಿ’ ಚಿತ್ರದ ಆನ್ಲೈನ್ ಟಿಕೇಟ್ ಬುಕ್ಕಿಂಗ್ ಆರಂಭ

ಆಗಸ್ಟ್ 20ರಂದು ಬಿಡುಗಡೆ ಆಗಲಿರುವ ಡಿ. ರವಿ ಅರ್ಜುನ್ ನಿರ್ದೇಶನದ ಬಹುನಿರೀಕ್ಷಿತ ‘ಗ್ರೂಫಿ’ ಚಿತ್ರದ ಆನ್ಲೈನ್ ಟಿಕೇಟ್ ಬುಕ್ಕಿಂಗ್ ಆರಂಭ ಆಗಿದೆ.

1 ಗಂಟೆ 52 ನಿಮಿಷದ ಸಸ್ಪೆನ್ಸ್, ಥ್ರಿಲ್ಲರ್ ಸಿನೆಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಸಿನಿಪ್ರಿಯರು ಬುಕ್ ಮೈ ಶೋ ಮೂಲಕ ಟಿಕೆಟ್ ಬುಕ್ ಮಾಡಿ ವರಮಹಾಲಕ್ಷ್ಮಿ ಹಬ್ಬದ ದಿನದಂದು ಚಿತ್ರವನ್ನು ವೀಕ್ಷಿಸಿ ಸಂತಸ ಪಡಬಹುದಾಗಿದೆ.

ಫೋಟೋಗ್ರಾಫರ್ ಒಬ್ಬನಿಗೆ ಎದುರಾಗುವ ಸನ್ನಿವೇಶದ ಕಥೆಯನ್ನು ಆಧರಿಸಿದ ಈ ಚಿತ್ರವನ್ನು ಕೆ.ಜಿ.ಸ್ವಾಮಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಲಿಯಾ ಗ್ಲೋಬಲ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ.
ಚಿತ್ರದಲ್ಲಿ ನಟ ಆರ್ಯನ್ ಅವರು ಕಾರ್ತಿಕ್ ಆಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪದ್ಮಶ್ರೀ ಜೈನ್, ಗಗನ್ ಗೌಡ, ಉಮಾ ಮಯೂರಿ, ಪ್ರಜ್ವಲ್, ಸಂಧ್ಯಾ ಅವರು ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರದ ಪೋಸ್ಟರ್ ಗಳು ಈಗಾಗಲೇ ಬಿಡುಗಡೆ ಆಗಿದ್ದು ಸಿನಿ ಪ್ರಿಯರ ಗಮನ ಸೆಳೆದಿವೆ. ಆಗಸ್ಟ್ 5ರಂದು ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡದ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಚಿತ್ರಕ್ಕೆ ವಿಜೇತ ಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ, ಹೃದಯ ಶಿವ, ಚೇತನ್ ಕುಮಾರ್ ಅವರು ಸಾಹಿತ್ಯ ರಚಿಸಿದ್ದಾರೆ.

ನೃತ್ಯ ಸಂಯೋಜನೆಯನ್ನು ಇಮ್ರಾನ್ ಸರ್ದಾರಿಯಾ ಮಾಡಿದ್ದು, ಛಾಯಾಗ್ರಹಣ ಅಜಯ ಲಕ್ಷ್ಮೀಕಾಂತ ಅವರದ್ದು ಆಗಿದೆ. ಎಡಿಟರ್ ಆಗಿ ವಿಜೇತ್ ಚಂದ್ರನ್ ಕೆಲಸ ಮಾಡಿದ್ದಾರೆ.ಕೆ

ಕೆಲ ದಿನಗಳ ಹಿಂದೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರಿನಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು ಚಿತ್ರತಂಡದ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಆಗಿದ್ದು ಲಕ್ಷಾಂತರ ಜನ ಇದನ್ನು ವೀಕ್ಷಣೆ ಮಾಡಿದ್ದಾರೆ

This Article Has 1 Comment
  1. Shivaprasad K Reply

    Trailer, songs make me interested to watch 1st show, all the new team as done really great work….all the very best team

Leave a Reply

Your email address will not be published. Required fields are marked *

Translate »
error: Content is protected !!