‘ಗ್ರೂಫಿ’ ಚಿತ್ರದ ಆಡಿಯೋ ರಿಲೀಸ್ ಮಾಡಿದ ಜನ್ಯ

ಡಿ. ರವಿ ಅರ್ಜುನ್ ನಿರ್ದೇಶನದ ‘ಗ್ರೂಫಿ’ ಚಿತ್ರದ ಆಡಿಯೋವನ್ನು ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಬಿಡುಗಡೆ ಮಾಡಿದರು.

ಆ.5ರಂದು ಆಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅರ್ಜುನ್ ಜನ್ಯ ಅವರು, “ಚಿತ್ರದ ಹಾಡು ಜನಪ್ರಿಯ ಆಗುವ ಜೊತೆಗೆ ಚಿತ್ರ ಯಶಸ್ಸು ಕಾಣಲಿ” ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಚಿತ್ರ ತಂಡದ ಸದಸ್ಯರು ಭಾಗವಹಿಸಿದ್ದರು.
‘ಗ್ರೂಫಿ’ ಚಿತ್ರಕ್ಕಾಗಿ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ, ಹೃದಯ ಶಿವ, ಚೇತನ್ ಕುಮಾರ್ ಅವರು ಸಾಹಿತ್ಯ ರಚಿಸಿದ್ದಾರೆ.
ಚಿತ್ರ ತಂಡ ಈಗಾಗಲೇ ಚಿತ್ರದ ಹಾಡು, ಟ್ರೈಲರ್ ಗಳನ್ನು ಸಿನೆಮಾ ದಿಗ್ಗಜರಿಗೆ ತೋರಿಸಿದ್ದು ಅವರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ಕೆ.ಜಿ.ಸ್ವಾಮಿ ನಿರ್ಮಾಣದ ಈ ಚಿತ್ರ ಲಿಯಾ ಗ್ಲೋಬಲ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ. ಈ ಚಿತ್ರಕ್ಕೆ ವಿಜೇತ ಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ.
ಗ್ರೂಫಿ’ ಚಿತ್ರ ಆಗಸ್ಟ್ 20ರಂದು ರಿಲೀಸ್ ಆಗಲಿದೆ.
ಫೋಟೋಗ್ರಾಫರ್ ಬದುಕಿನ ಕಥೆ ಆಧರಿಸಿದ ಈ ಚಿತ್ರದಲ್ಲಿ ನಟ ಆರ್ಯನ್ ಅವರು ಫೋಟೋ ಜರ್ನಲಿಸ್ಟ್ ಆಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಗಗನ್, ಉಮಾ ಮಯೂರಿ, ಪ್ರಜ್ವಲ್, ಸಂಧ್ಯಾ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಪ್ರಾಕೃತಿಕ ತಾಣಗಳಾದ ಮಡಿಕೇರಿ, ಮೈಸೂರು, ದಾವಣಗೆರೆ ಮೊದಲಾದ ಕಡೆ ಶೂಟ್ ಮಾಡಲಾಗಿದೆ.
ಚಿತ್ರದ ಪೋಸ್ಟರ್ ಗಳು ಈಗಾಗಲೇ ಬಿಡುಗಡೆ ಆಗಿದ್ದು ಸಾಕಷ್ಟು ನಿರೀಕ್ಷೆ ಮೂಡಿಸಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!