ಚಿತ್ರ: ಗ್ರೀನ್
ನಿರ್ದೇಶನ: ರಾಜ್ ವಿಜಯ್
ನಿರ್ಮಾಣ: ಬಿ ಎಂ ಸ್ವಾಮಿ ಹಾಗೂ ರಾಜ್ ವಿಜಯ್
ತಾರಾ ಬಳಗ: ಗೋಪಾಲಕೃಷ್ಣ ದೇಶಪಾಂಡೆ, ಬಾಲಾಜಿ ಮನೋಹರ್
ರೇಟಿಂಗ್: 3.5
ದಟ್ಟ ಅರಣ್ಯದಲ್ಲಿ ತಾನೇ ಸೃಷ್ಟಿಸಿಕೊಂಡ ಭ್ರಮ ಪ್ರಪಂಚದಲ್ಲಿ ಕಳೆದುಹೋಗುವ ವ್ಯಕ್ತಿಯ ಕಥಹಂದರವನ್ನು ಹೊಂದಿರುವ ಚಿತ್ರ ಗ್ರೀನ್.
ಇದು 19ಕ್ಕೂ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಚಿತ್ರ. ದಟ್ಟ ಕಾನನದಲ್ಲಿ ಭ್ರಮೆಯ ಪ್ರಪಂಚದಲ್ಲಿ ಜೀವಿಸುವ ಮಾಯಣ್ಣ ಎನ್ನುವ ವ್ಯಕ್ತಿ ತಾನೇ ಸೃಷ್ಟಿಸಿಕೊಂಡ ಪಾತ್ರಗಳ ಭ್ರಮೆಯಲ್ಲಿ ರಾಕ್ಷಸನಿಂದ ದೂರ ಇರಬೇಕಾದವನು, ಕೊನೆಗೆ ತಾನೇ ಹೇಗೆ ರಾಕ್ಷಸನಾಗುತ್ತಾನೆ ಎನ್ನುವುದನ್ನು ಚಿತ್ರ ಹೇಳುತ್ತದೆ. ಚಿತ್ರದ ಟ್ವಿಸ್ಟ್ ಪ್ರೇಕ್ಷಕರಿಗೆ ಭಿನ್ನ ಅನುಭವ ನೀಡುತ್ತದೆ.
ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಅವರು ಮಾಯಣ್ಣನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಉಳಿದಂತೆ ಅರಣ್ಯ ಅಧಿಕಾರಿಯ ಪಾತ್ರದಲ್ಲಿ ಬಾಲಾಜಿ ಮನೋಹರ್ ಗಮನ ಸೆಳೆಯುತ್ತಾರೆ.
ಗುಣಾಧ್ಯ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸಿದೆ. ನಿರ್ದೇಶಕರು ಕಥೆ ಹಾಗೂ ಚಿತ್ರಕಥೆಯನ್ನು ಬರೆದಿದ್ದಾರೆ. ಕ್ಯಾಮೆರಾ ವರ್ಕ್ ಚಿತ್ರದ ಹೈಲೈಟ್ ಆಗಿ ಮೂಡಿ ಬಂದಿದೆ. ಕೆ ಮಧುಸೂದನ್ ಅವರು ತಮ್ಮ ಕ್ಯಾಮೆರಾ ಕೆಲಸದ ಮೂಲಕ ಗಮನ ಸೆಳೆಯುತ್ತಾರೆ.
ಶಕ್ತಿ ಸ್ಯಾಕ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಪೂರಕವಾಗಿದೆ. ಮನೋವಿಜ್ಞಾನಕ್ಕೆ ಸಂಬಂಧಿಸಿದ ಚಿತ್ರವನ್ನು ಪ್ರತಿಯೊಬ್ಬರೂ ನೋಡಬಹುದು.





Be the first to comment