ಸರಿಗಮಪ

ಜೀ಼ ಕನ್ನಡದಲ್ಲಿ ಭರ್ಜರಿ ಮನರಂಜನೆಯ ಮಹಾ ಧಮಾಕ!

ಮನರಂಜನೆಗೆ ಮತ್ತೊಂದು ಹೆಸರೇ ಜೀ಼ ಕನ್ನಡ. ಜನಪ್ರಿಯ ಧಾರಾವಾಹಿಗಳಿಂದ ಮಾತ್ರವಲ್ಲದೇ ನಾನ್ ಫಿಕ್ಷನ್ ಶೋ ಗಳಿಗೆ ಹೊಸತನದ ಮೆರುಗನ್ನು ನೀಡಿ ಎಲ್ಲಾ ವಯೋಮಿತಿಯ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿದೆ. ವರ್ಷಾರಂಭಕ್ಕೆ ಮನರಂಜನೆಯ ಮಹಾಪೂರವನ್ನೇ ನಿಮಗಾಗಿ ಹೊತ್ತು ತರುತ್ತಿರುವ ಜೀ಼ ಕನ್ನಡ ನಿಮ್ಮ ಹರುಷವನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸ್ವರ ಸಮರಕ್ಕೆ ಮತ್ತಷ್ಟು ಮೆರುಗು ತರೋದಕ್ಕೆ ‘ಸರಿಗಮಪ’ ಅಖಾಡಕ್ಕಿಳಿದ ಐವರು ದಿಗ್ಗಜ ಮೆಂಟರ್ ಗಳು. 22 ಸ್ಪರ್ಧಿಗಳಲ್ಲಿ ಯಾರು ಯಾವ ಮೆಂಟರ್ ಪಾಲಾಗುತ್ತಾರೆ ಎನ್ನುವುದರ ಕುತೂಹಲ ವೀಕ್ಷಕರಲ್ಲಿ ಮತ್ತಷ್ಟು ಹೆಚ್ಚಾಗಿದೆ. ಇದೆಲ್ಲದಕ್ಕೂ ಉತ್ತರ ಸಿಗಲಿದೆ ಇದೇ ಶನಿವಾರ-ಭಾನುವಾರ ರಾತ್ರಿ 7:30ಕ್ಕೆ ‘ಸರಿಗಮಪ’ – ಮೆಂಟರ್ ಸೆಲೆಕ್ಷನ್ ರೌಂಡ್ ನಲ್ಲಿ.

ವೀಕೆಂಡ್ ಅಂದ್ಮೇಲೆ ಸಿನಿಮಾ ಘರ್ಜನೆ ಇರ್ಬೇಕು ಅಲ್ವಾ? ಹಾಗಾಗಿಯೇ ಜೀ಼ ಕನ್ನಡ ನಿಮಗಾಗಿ ತರುತ್ತಿದೆ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ‘ಮಾರ್ಟಿನ್’. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸಿರುವ, ಅಂಬಾರಿ ಖ್ಯಾತಿಯ ಎ.ಪಿ ಅರ್ಜುನ್ ನಿರ್ದೇಶಿಸಿರುವ ಗ್ಲೋಬಲ್ ಟೆಲಿವಿಷನ್ ಪ್ರೀಮಿಯರ್ ಮಾರ್ಟಿನ್ ಚಿತ್ರವು ಇದೇ ಡಿಸೆಂಬರ್ 29 ರಂದು ಸಂಜೆ 4 ಗಂಟೆಗೆ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ತಪ್ಪದೇ ವೀಕ್ಷಿಸಿ.

ಕನ್ನಡದ ಬಿಗ್ಗೆಸ್ಟ್ ಎಂಟರ್ಟೈನ್ಮೆಂಟ್ ಶೋಗೆ ಹೊಸತನ ತುಂಬಲು ‘ಜೀ಼ ಎಂಟಟ್ರೈನರ್ಸ್ ಹೊಸವರ್ಷದ ಶುಭಾರಂಭಕ್ಕೆ’ ಬರಲಿದ್ದಾರೆ ರ‍್ಯಾಪರ್ ಚಂದನ್ ಶೆಟ್ಟಿ. ಅಷ್ಟೇ ಅಲ್ಲದೇ ಮೊತ್ತಮೊದಲ ಬಾರಿಗೆ ಕನ್ನಡ ಟೆಲಿವಿಷನ್ ನಲ್ಲಿ ‘ಕಾಟನ್ ಕ್ಯಾಂಡಿ’ ಅನ್ನುವ ಹಾಡನ್ನು ಪ್ರೀಮಿಯರ್ ಮಾಡಲಿದ್ದಾರೆ. ಹಾಗು ಇದು ಹೊಸ ವರುಷದ ಪಾರ್ಟಿ ಆಂಥೆಮ್ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಮತ್ತೆ ಪಾರ್ಟಿಗೆ ರೆಡಿನಾ? ಹಾಗಿದ್ರೆ ವೀಕ್ಷಿಸಿ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಜೀ಼ ಎಂಟಟ್ರೈನರ್ಸ್ ಹೊಸವರ್ಷದ ಶುಭಾರಂಭ ಇದೇ ಶನಿ- ಭಾನುವಾರ ರಾತ್ರಿ 9:30ಕ್ಕೆ.

ಹೊಸವರುಷಕ್ಕೆ ಮನರಂಜನೆಯ ಧಮಾಕ ನಿಮಗಾಗಿ ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿಯಲ್ಲಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!