ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಜನಪ್ರಿಯರಾದ ಮೇಘಾ ಶೆಟ್ಟಿ ದೊಡ್ಮನೆ ಕುಡಿ ವಿನಯ್ ರಾಜ್ಕುಮಾರ್ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಕೆಲ ವರ್ಷಗಳ ಹಿಂದೆ ಘೋಷಿಸಲಾಗಿದ್ದ ಗ್ರಾಮಾಯಣ ಚಿತ್ರ, ಹೊಸ ನಿರ್ಮಾಣ ತಂಡದೊಂದಿಗೆ ಮತ್ತೆ ಪ್ರಾರಂಭಗೊಂಡಿದೆ. ಅ.4 ರಂದು ಚಿತ್ರೀಕರಣ ಪ್ರಾರಂಭವಾಗಲಿದ್ದು, ಚಿಕ್ಕಮಗಳೂರಿನ ಕಡೂರಿನಲ್ಲಿ ಮೊದಲ ಶೆಡ್ಯೂಲ್ ನಡೆಯಲಿದೆ.
ಸಿನಿಮಾಕ್ಕೆ ದೇವನೂರು ಚಂದ್ರು ಆಕ್ಷನ್ ಕಟ್ ಹೇಳಲಿದ್ದಾರೆ. ಆರಂಭದಲ್ಲಿಸಿನಿಮಾಕ್ಕೆ ವಿನಯ್ ರಾಜ್ಕುಮಾರ್ ಅವರನ್ನು ಮಾತ್ರ ನಾಯಕನಾಗಿ ಘೋಷಿಸಿ, ನಾಯಕಿ ಯಾರು ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ಈಗ ಮೇಘಾ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಮೇಘಾ ಶೆಟ್ಟಿ ಕನ್ನಡ ಸಿನಿಮಾ ರಂಗದಲ್ಲಿ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಒಂದಾದ ಮೇಲೆ ಒಂದು ಸಿನಿಮಾಗಳಿಗೆ ಸಹಿ ಹಾಕುತ್ತಿರುವ ಅವರು ಗ್ರಾಮಾಯಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದನ್ನು ಚಿತ್ರತಂಡ ಮತ್ತು ಮೇಘಾ ಶೆಟ್ಟಿ ದೃಢಪಡಿಸಿದ್ದಾರೆ.
ಯುಐ ಸಿನಿಮಾ ನಿರ್ಮಾಪಕರಾದ ಲಹರಿ ಫಿಲ್ಮ್ಸ್ನ ಜಿ ಮನೋಹರನ್ ಹಾಗೂ ವೀನಸ್ ಎಂಟರ್ಟೈನ್ಮೆಂಟ್ನ ಕೆಪಿ ಶ್ರೀಕಾಂತ್ ಜೊತೆ ಸೇರಿ ಚಿತ್ರ ನಿರ್ಮಿಸುತ್ತಿದ್ದಾರೆ. ನವೀನ್ ಮನೋಹರನ್, ‘ಗ್ರಾಮಾಯಣ’ ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದಾರೆ.
ಚಿತ್ರದ ಹಾಡುಗಳಿಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡುತ್ತಿದ್ದು ಯಶಸ್ವಿನಿ ಅಂಚನ್ ಎಂಬ ಯುವತಿ ಸಿನಿಮಾಟೋಗ್ರಾಫರ್ ಆಗಿ ಎಂಟ್ರಿ ಕೊಟ್ಟಿದ್ದಾರೆ.
—-
Post Views:
202
Be the first to comment