ಅಜ್ಞಾತ ಸ್ಥಳದಲ್ಲಿ ದಾರಿಯನ್ನು ತೋರಿಸುವ ಆಧುನಿಕ ತಂತ್ರಜ್ಞಾನವೇ ಜಿಪಿಎಸ್. ಈಗ ಇದೇ ಟೈಟಲ್‍ನಡಿ ರಘುನಂದನ್ ಕಾನ್ಡಕ ಕಿರುಚಿತ್ರವನ್ನು ಮಾಡಲು ಹೊರಟಿದ್ದಾರೆ.18 ನಿಮಿಷಗಳ ಕಿರುಚಿತ್ರದಲ್ಲಿ ನೈಟ್ ಎಫೆಕ್ಟ್ ಹೆಚ್ಚಾಗಿದ್ದು ನೈಜತೆಯಿಂದ ಮೂಡಿಬಂದಿದೆ.
ಕ್ಯಾಬ್ ಡ್ರೈವರೇ ಜಿಪಿಎಸ್‍ನ ಮುಖ್ಯ ನಾಯಕನಾಗಿದ್ದು ಅವನು ತನ್ನ ಕುಟುಂಬ ಪೋಷಣೆಗಾಗಿ ಮೂರು ದಿನ ಬಿಡುವಿಲ್ಲದೆ ಕೆಲಸ ಮಾಡುತ್ತಿರುತಾನೆ, ಒಮ್ಮೆ ಜಿಪಿಎಸ್ (ಗ್ಲೋಬಲ್ ಪೊಸಿಷನಲ್ ಸಿಸ್ಟಮ್) ಬಳಸಿ ಗ್ರಾಹಕರನ್ನು ಕರೆದುಕೊಂಡು ಹೋಗುತ್ತಿರುತ್ತಾನೆ ಅಂದು ಅವನ ವಿವಾಹ ವಾರ್ಷಿಕೋತ್ಸವಿದ್ದುದರಿಂದ ಆತನ ಪತ್ನಿ ಕರೆ ಮಾಡುತ್ತಾನೆ,
ಕೆಲಸದ ಒತ್ತಡದಲ್ಲಿ ಅವನು ಹೆಂಡತಿಯ ಮೇಲೆ ರೇಗುತ್ತಾನೆ, ಗ್ರಾಹಕರನ್ನು ಬಿಟ್ಟು ಬರುವಾಗ ಅವನ ಮೊಬೈಲ್‍ಗೆ ಮತ್ತೆ ಕರೆ ಬಂದಾಗ ಅವನ ಮೊಬೈಲ್ ಸ್ವಿಚ್ಡ್ ಆï ಹಂತಕ್ಕೆ ಬಂದಿರುತ್ತದೆ. ನನ್ನ ಮಗಳ ಮಾತನ್ನು ಕೇಳಲಿಲ್ಲ.
ಪುಟ್ಟ ಮಗಳು ಕಾಯುತಿದ್ದಾಳೆ. ಮನೆಗೆ ಹೋಗಿ ಎಂದು ಬದುಕಿನಅರ್ಥದಅರಿವು ಮೂಡಿಸುತ್ತಾರೆ. ಇಷ್ಟರಲ್ಲೆ ಮತ್ತೊಂದು ಸಂದಿದ್ಗ ಪರಿಸ್ಥಿತಿಯಲ್ಲಿರುವ ಗ್ರಾಹಕಕರೆ ಮಾಡುತ್ತಾರೆ.ಒಂದುಕಡೆಕುಟುಂಬ, ಮತ್ತೊಂದುಕಡೆ ಕೆಲಸ. ದ್ವಂದ್ವದಲ್ಲಿ ಮತ್ತೆ ದುಡಿಮೆಕಡೆ ಹೋದಾಗ, ಅಳಿಯಂದಿರೇ ನಿಮ್ಮಆಯ್ಕೆ ಸರಿಎನ್ನುವಲ್ಲಿಗೆ ಶುಭಂ ಬರುತ್ತದೆ.
ಜಿಪಿಎಸ್ ನಂತೆ ನಮ್ಮಜೀವನಎಂದು ಹೇಳುವುದೇ ಸಾರಾಂಶವಾಗಿದೆ.ಜಿಪಿಎಸ್ ಕಿರುಚಿತ್ರ ಬಿಡುಗಡೆಗೆ ಮುಂಚೆನೇ ಹಲವು ಪ್ರಶಸ್ತಿಗಳು ಲಭಿಸಿವೆ. ಸಾಹಿತಿಜಯಂತ್‍ಕಾಯ್ಕಣಿ, ನಟ ನೀನಾಸಂ ಸತೀಶ್, ಚೂರಿಕಟ್ಟೆ ನಿರ್ದೇಶಕ ರಾಘುಶಿವಮೊಗ್ಗ ಮುಂತಾದವರು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
ಹಿರಿಯ ಪತ್ರಕರ್ತ ಜೋಗಿ ಮಾತನಾಡಿ, ಚಿತ್ರರಂಗಕ್ಕೆ ರಘುನಂದನ್ ಎಂಬ ಪ್ರತಿಭಾವಂತ ನಿರ್ದೇಶಕನ ಎಂಟ್ರಿಯಾಗಿದ್ದು, ಜಿಪಿಎಸ್‍ನಲ್ಲಿ ಸಸ್ಪೆನ್ಸ್, ಕಾಮಿಡಿ, ಹಾರರ್, ಭಾವನೆಗಳು ಎಲ್ಲವುಗಳ ಸಮ್ಮಿಳಿತವಾಗಿದೆ ಎಂದು ಹೇಳಿದರು.
ಚಾಲಕನಾಗಿ ಗೋಪಾಲಕೃಷ್ಣ ದೇಶಪಾಂಡೆ ಇವರೊಂದಿಗೆ ದಿವ್ಯಭಾಜ್‍ಪೈ, ಬೇಬಿ ಅಂಕಿತ, ಕಿರಣ್‍ನಾಯಕ್, ಆನಂದ್‍ನೀನಾಸಂ ಮತ್ತು ಮಾವನಾಗಿ ಹಿನ್ನಲೆಧ್ವನಿ ಮಂಜುನಾಥ್‍ಹೆಗ್ಡೆಅವರದಾಗಿದೆ.ಮೂರುರಾತ್ರಿ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ರಚನೆ-ನಿರ್ದೇಶನರಘುನಂದನ್ ಕಾನ್ಡಕ, ಸಂಗೀತ ನವನೀತ್‍ಷಾ,ಕತೆ ಸತ್ಯನ್‍ಬಳಗ,ಚೇತನ್, ಕಾರ್ತಿಕ್.ಆರ್, ಪದ್ಮಪ್ರಸಾದ್‍ಜೈನ್, ಸ್ವರೂಪ್, ಛಾಯಾಗ್ರಹಣ ವಿಶ್ವೇಶ್‍ಭಗೀರಥಿಶಿವಪ್ರಸಾದ್, ಸಂಭಾಷಣೆ ಸಂಪತ್‍ಶ್ರೀಮನೆ, ಕಲೆ ಶ್ರೀಧರ್‍ಮೂರ್ತಿ ಅವರದಾಗಿದೆ.
ಒಂದೂವರೆ ಲಕ್ಷದಲ್ಲಿಪ್ಲಂಗ್ ಪ್ರೊಡಕ್ಷನ್ ಸಂಸ್ಥೆಯು ನಿರ್ಮಾಣ ಮಾಡಿದೆ.ಜಿಪಿಎಸ್ ಎಂಬ ಕಿರುಚಿತ್ರದ ಮೂಲಕ ತಮ್ಮ ಜಾಣ್ಮೆಯನ್ನು ಮೆರೆದಿರುವ ರಘುನಂದನ್ ಕಾನ್ಡಕ ಅವರು ಹಿರಿತೆರೆಯಲ್ಲೂ ಒಂದು ಸದಭಿರುಚಿ ಚಿತ್ರವನ್ನು ನಿರ್ದೇಶಿಸುವಂತಾಗಲಿ.
Be the first to comment