ಕಲ್ಟ್ ಕ್ಲಾಸಿಕ್ ಸಿನಿಮಾ ನೀಡಿರುವ ತಮಿಳಿನ ಸ್ಟಾರ್ ನಿರ್ದೇಶಕ ಗೌತಮ್ ವಾಸುದೇವ ಮೆನನ್ ಕನ್ನಡದಲ್ಲಿ ಸಿನಿಮಾ ನಿರ್ದೇಶಿಸಲು ರೆಡಿಯಾಗಿದ್ದಾರೆ.
ಗೌತಮ್ ವಾಸುದೇವ ಮೆನನ್ ‘ರೆಹನಾ ಹೈ ತೇರೆ ದಿಲ್ ಮೇ’, ‘ಕಾಕ ಕಾಕ’, ‘ವೇಟ್ಟೆಯಾಡು ವಿಲೆಯಾಡು’, ‘ವನೈತಾಂಡಿ ವರುವಾಯ’, ‘ಯೇ ಮಾಯ ಚೇಸಾವೆ’, ‘ವಾರನಂ ಅಯರುಂ’, ‘ವೆಂದು ತನಿದತ್ತು ಕಾಡು’ ಅಂಥ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಕನ್ನಡ ಸಿನಿಮಾ ನಿರ್ದೇಶಿಸಲು ಗೌತಮ್ ವಾಸುದೇವ ಮೆನನ್ ಮುಂದಾಗಿದ್ದು ಅವರು ಯಾರನ್ನು ನಾಯಕರನ್ನಾಗಿ ಹಾಕಿಕೊಳ್ಳಲಿದ್ದಾರೆ ಕಾದು ನೋಡಬೇಕಿದೆ.
ಗೌತಮ್ ಅವರು ಕನ್ನಡದ ನಟ ಪುನೀತ್ ರಾಜ್ಕುಮಾರ್ ಅವರೊಟ್ಟಿಗೆ ಸಿನಿಮಾ ಮಾಡಲು ಬಯಸಿದ್ದರು. ಪುನೀತ್ ರಾಜ್ಕುಮಾರ್, ಅಲ್ಲು ಅರ್ಜುನ್, ಸಿಂಭು ಹಾಕಿಕೊಂಡು ‘ಜಿಂದಗಿ ನಾ ಮಿಲೇಗಿ ದುಬಾರ’ ರೀತಿಯ ಪ್ರಯಾಣ ಕತೆಯುಳ್ಳ ಸಿನಿಮಾ ಮಾಡುವ ಇಚ್ಛೆ ಅವರಿಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.
ರತೀಯ ಚಿತ್ರರಂಗದಲ್ಲಿಯೇ ಭಿನ್ನ ಮಾದರಿಯ ನಿರೂಪಣೆ ಶೈಲಿಯಲ್ಲಿ ಕತೆ ಹೇಳುವ ನಿರ್ದೇಶಕ ಗೌತಮ್ ವಾಸುದೇವ್ ಮೆನನ್. ಅವರು ‘ಧ್ರುವ ನಚ್ಚತ್ತಿರಂ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದಾರೆ. ಸಿನಿಮಾದ ನಿರ್ಮಾಪಕರೂ ಅವರೇ. ಆದರೆ ಆ ಸಿನಿಮಾ ಅವರಿಗೆ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ.ಕಷ್ಟದ ಸಮಯದಲ್ಲಿ ತಮಿಳಿನ ಯಾವೊಬ್ಬ ಸಿನಿಮಾ ಮಂದಿಯೂ ತಮ್ಮ ಬೆಂಬಲಕ್ಕೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Be the first to comment